ಅನಧಿಕೃತ ತರಬೇತಿ ಕೇಂದ್ರ, ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಸೇನೆ ಆಗ್ರಹ

ಶಹಪುರ : ತಾಲೂಕಿನಲ್ಲಿ ಅನಧಿಕೃತ ಶಾಲೆ, ವಸತಿ ಶಾಲೆ, ಅಕ್ರಮ ತರಬೇತಿ ಕೇಂದ್ರಗಳು ನಡೆಸುತ್ತಿದ್ದು ಅಂತಹ ಕೇಂದ್ರಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಬೇಕೆಂದು ನಮ್ಮ ಕರ್ನಾಟಕ ಸೇನೆ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
 ಈಗಾಗಲೇ ಅನಧಿಕೃತ ಶಾಲೆ,ಕೋಚಿಂಗ್ ಶಾಲೆಗಳಿಗೆ ನೋಟಿಸ್ ನೀಡಲಾಗಿದೆ. ಮೂರು ಸೂಚನಾ ಪತ್ರಗಳ ನಂತರ ತರಬೇತಿ ಕೇಂದ್ರಗಳ ಮುಖ್ಯಸ್ಥರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕು ಅಧ್ಯಕ್ಷರಾದ ಸಿದ್ದುಪಟ್ಟೆದರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿ ಅವರು, ನಗರದಲ್ಲಿ ಅನಧಿಕೃತ ತರಬೇತಿ ಕೇಂದ್ರಗಳ ಜೊತೆಗೆ ಖಾಸಗಿ ಶಾಲೆಗಳಲ್ಲಿಯೂ ಕೂಡ ತರಬೇತಿ ನೀಡುತ್ತಿದ್ದು, ಸರಕಾರಿ ಕೊಟ್ಟ ಅಧಿಕೃತ ಸ್ಥಳದಲ್ಲಿ ಶಾಲೆಯನ್ನು ನಡೆಸದೆ ಇತರ ಸ್ಥಳಗಳಲ್ಲಿ ಶಾಲೆಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಗಮನಕ್ಕೆ ತರಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆಂದು ತಿಳಿಸಿದರು. ಪ್ರತಿಭಟನೆಯಲ್ಲಿ ನಮ್ಮ ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಾಖಪುರ ಸೇರಿದಂತೆ ಸೇನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *