ಅನಧಿಕೃತ ತರಬೇತಿ ಕೇಂದ್ರಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಖಾಸಗಿ ಶಾಲಾ ಒಕ್ಕೂಟಗಳ ಪ್ರತಿಭಟನೆ

ಶಹಾಪುರ  : ತಾಲೂಕಿನಲ್ಲಿ  ರಾಜಾರೋಷವಾಗಿ ನವೋದಯ ಕಿತ್ತೂರು ರಾಣಿ ಚೆನ್ನಮ್ಮ ತರಬೇತಿ ಕೇಂದ್ರಗಳು ಎಂದು ಹೇಳಿಕೊಂಡು ಸರ್ಕಾರದ ಪರವಾನಿಗೆ ಇಲ್ಲದೆ ಅನಧಿಕೃತ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವುದರ ವಿರುದ್ಧ ನಗರದ ಖಾಸಗಿ ಶಾಲೆಗಳ ಒಕ್ಕೂಟ ಹಾಗೂ ಕನ್ನಡ ಮಾಧ್ಯಮಗಳ ಶಾಲೆಗಳ ಸಮಿತಿ ವತಿಯಿಂದ ಅನಿರ್ದಿಷ್ಟ ಧರಣಿ ನಡೆಸಿದರು.ನಗರದ ಹಳೆ ತಹಸೀಲ್ ಕಚೇರಿಯಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ತಹಶೀಲ್ ಕಚೇರಿಯವರಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ತಹಶಿಲ್ ಕಚೇರಿಯಲ್ಲಿ ಧರಣಿಯನ್ನು ಉದ್ದೇಶಿಸಿ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷರಾದ ಆರ್ ಚೆನ್ನಬಸು ಮಾತನಾಡಿ, ನಗರದಲ್ಲಿ ಅನಧಿಕೃತವಾಗಿ ತರಬೇತಿ ಕೇಂದ್ರಗಳು ನಡೆಯುತ್ತಿದ್ದು, ಇದರಿಂದ ಖಾಸಗಿ ಶಾಲೆಗಳು ಮತ್ತು ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿವೆ. ಅನಧಿಕೃತ ತರಬೇತಿ ಕೇಂದ್ರಗಳಾದ ಎಕ್ಸಲೆಂಟ್, ವಿದ್ಯಾದೀಪ ಗಬ್ಬೂರು, ಜೀನಿಯಸ್, ವಡಗೇರ ತಾಲೂಕಿನ ಅಲ್ಲಮಪ್ರಭು ಗಬ್ಬೂರು ತರಬೇತಿ ಕೇಂದ್ರಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಒತ್ತಾಯಿಸಿದರು. ಈ ತರಬೇತಿ ಕೇಂದ್ರಗಳು ಪೋಷಕರಿಂದ ದುಬಾರಿ ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಪೋಷಕರು ಎಚ್ಚರಿಕೆ ವಹಿಸಬೇಕು. ಶಿಕ್ಷಣ ಇಲಾಖೆಯವರ ಪ್ರೋತ್ಸಾಹ ಈ ತರಬೇತಿ ಕೇಂದ್ರಗಳ ಮೇಲಿದೆ. ಮೂಲಭೂತ ಸೌಕರ್ಯಗಳಿಲ್ಲದೆ ತರಬೇತಿ ಕೇಂದ್ರಗಳು ನಡೆಯುತ್ತಿದ್ದು,ಈಗಾಗಲೇ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ನೋಟಿಸ್ ಕೊಟ್ಟು ಕೈ ತೊಳೆದುಕೊಂಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳುತ್ತಿದ್ದರೆ ನಿರಂತರ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು.ಪ್ರತಿಭಟನೆಯಲ್ಲಿ ಖಾಸಗಿ ಶಾಲೆಗಳ ಮುಖ್ಯಸ್ಥರಾದ ಮಲ್ಲಿಕಾರ್ಜುನ್ ಪಾಟೀಲ್ ಹೊನ್ನಪ್ಪ ಗಂಗನಾಳ ತಿಪ್ಪಣ್ಣ ಕ್ಯಾತನಹಳ್ಳಿ ಸುರೇಶ್ ಕರ್ಣಗಿ ಸತ್ಯಂರೆಡ್ಡಿ ದೇವೇಂದ್ರಪ್ಪ ಮೇಟಿ ಸುಧಾಕರ್ ಕುಲಕರ್ಣಿ ಭೀಮನಗೌಡ ಪ್ರದೀಪ್ ಪುರ್ಲೆ ಮೌನೇಶ ಹಯ್ಯಳ ಬಿ, ಎಸ್ಡಿಪಿಐ ಮುಖಂಡರು ಸೇರಿದಂತೆ ಖಾಸಗಿ ಶಾಲೆಗಳ ಮುಖ್ಯಸ್ಥರು ಶಿಕ್ಷಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಅನಧಿಕೃತ ತರಬೇತಿ ಕೇಂದ್ರಗಳ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ಕನ್ನಡ ಮಾಧ್ಯಮಗಳ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಸರ್ಕಾರದ ಪರವಾನಿಗೆ ಇಲ್ಲದೆ ಯಾವುದೇ ಶಾಲೆ ಮತ್ತು ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಹಸಿಲ್ದಾರ್ ಮತ್ತು ನಗರ ಠಾಣಾ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಖಾಸಗಿ ಮತ್ತು ಸರಕಾರಿ ಶಾಲೆಗಳ ಶಿಕ್ಷಕರು ತರಬೇತಿ ಕೇಂದ್ರಕ್ಕೆ ಮಕ್ಕಳನ್ನು ಕಳಿಸದಂತೆ ಮುತುವರ್ಜಿವಹಿಸಬೇಕು ತಿಳಿಸಿದರು.

About The Author