ಶಿವಾನಂದ ಮಠದಲ್ಲಿ ಗುರುಪೂರ್ಣಿಮೆ ಆಚರಣೆ

ರಾಯಚೂರು : ಜಿಲ್ಲೆಯ ರಾಯಚೂರು ತಾಲೂಕಿನ ಸುಕ್ಷೇತ್ರ ಮಟಮಾರಿಯ ಶ್ರೀ ವೀರಭದ್ರೇಶ್ವರ ಕೃಪಾಕಟಾಕ್ಷದಿಂದ ನಿರ್ಮಿತಗೊಂಡ ಶ್ರೀ ಶಿವಾನಂದ ಮಠದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಇಂದು ಬೆಳಿಗ್ಗೆ ಹೋಮ ಅಭಿಷೇಕ ಹಾಗೂ ಭಜನೆಯೊಂದಿಗೆ ಪರಮ ಪೂಜ್ಯ ಶ್ರೀ ಜ್ಞಾನಾನಂದ ಮಹಾರಾಜ್ ರವರ ಕಿರೀಟ ಪೂಜೆ ಹಾಗೂ ಪಾದಪೂಜೆ ಅತಿ ವಿಜೃಂಭಣೆಯಿಂದ ಶ್ರೀಮಠದ ನಡೆಯಲಾಯಿತು.

ಈ ಈ ಸಂದರ್ಭದಲ್ಲಿ ಶಿಷ್ಯವೃಂದದವರು, ಭಕ್ತರು ಸುತ್ತಮುತ್ತಲಿನ ಗ್ರಾಮಸ್ಥರು ಅನೇಕ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *