ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ನಮ್ಮ ಕರ್ನಾಟಕ ಸೇನೆ ವತಿಯಿಂದ ಅಮರಣಾಂತ ಸತ್ಯಾಗ್ರಹ

ಶಹಾಪುರ : ಶಹಾಪೂರ ತಾಲೂಕಿನಾದ್ಯಂತ ಸರ್ಕಾರದ ಅನುಮತಿ ಪಡೆಯದೆ ಹಲವಾರು ಅನಧಿಕೃತ ಶಾಲೆಗಳು, ಕೋಚಿಂಗ್ ತರಗತಿಗಳು, ಆಂಗ್ಲ ಮಾಧ್ಯಮ ಶಾಲೆಗಳು, ಉರ್ದು ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳು ಅನಧಿಕೃತವಾಗಿ ನಡೆಯುತ್ತಿದ್ದು
ಮುಂದಿನ 10 ದಿನಗಳೊಳಗೆ ಅನಧಿಕೃತ ಶಾಲೆಗಳ ಪರವಾನಗಿ ರದ್ದು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಅಮರಣಾಂತ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ನಮ್ಮ ಕರ್ನಾಟಕ ಸೇನೆಯ ತಾಲೂಕ ಅಧ್ಯಕ್ಷರಾದ ಸಿದ್ದುಪಟ್ಟೆದಾರ್ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಯವರಿಗೆ ಮನವಿ ಮಾಡಿದ್ದಾರೆ.ಇಂದು ಜಿಲ್ಲಾ ಪಂಚಾಯತಿ ಸಿಇಒ ರವರಿಗೆ ಅನದಿಕೃತ ಶಾಲೆಗಳ ಪಟ್ಟಿ ನೀಡಿ ಮನವಿ ಪತ್ರ ಸಲ್ಲಿಸಿದ ಅವರು ತಾಲೂಕಿನಾದ್ಯಂತ ಅನಧಿಕೃತ ಶಾಲೆಗಳು ಹೆಚ್ಚಾಗಿದ್ದು, ಕನ್ನಡ ಮಾಧ್ಯಮದಲ್ಲಿ ತರಗತಿಗಳು ಇದ್ದರೂ ಆಂಗ್ಲ ಮಾಧ್ಯಮ ಎಂದು ಹೇಳಿಕೊಂಡು ತರಗತಿಗಳನ್ನು ಆರಂಭಿಸುತ್ತಿದ್ದಾರೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲ. ಶೌಚಾಲಯಗಳಿಲ್ಲ. ಅರ್ಹತೆ ಇಲ್ಲದ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಶಾಲಾ ಮಕ್ಕಳಿಗೆ ಅಧಿಕ ಶಾಲಾ ಶುಲ್ಕ ವಸೂಲಿಗಿಳಿದಿವೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *