ಶಹಾಪೂರ:ಹೊಸ್ಕೆರ ಗ್ರಾಮದಲ್ಲಿ ಸಚಿವರು ಶಾಸಕರಿಂದ ಸಂಗೋಳ್ಳಿ ರಾಯಣ್ಣ ಮೂರ್ತಿ ಅನಾವರಣ

ಶಹಾಪುರ:ತಾಲೂಕಿನ ಹೊಸ್ಕೆರಾ ಗ್ರಾಮದಲ್ಲಿ ಪೂಜ್ಯರ ಸನ್ನಿಧಿಯಲ್ಲಿ,ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಮತ್ತು ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರವರಿಂದ ಸಂಗೋಳ್ಳಿ ರಾಯಣ್ಣ ಮೂರ್ತಿ ಅನಾವರಣ ಮಾಡಲಾಯಿತು.

 

ಶಹಾಪುರ:ಸ್ವಾತಂತ್ರ್ಯ ಹೋರಾಟಗಾರ, ಕೆಚ್ಚೆದೆಯ ನಾಯಕ,ಬ್ರಿಟಿಷರ ವಿರುದ್ಧ ತಾಯ್ನಾಡಿಗಾಗಿ ಹೋರಾಡಿ ವೀರ ಮರಣವನ್ನಪ್ಪಿದ್ದ ಸಂಗೊಳ್ಳಿ ರಾಯಣ್ಣನ ಪಡೆದ ನಾವೇ ಧನ್ಯರು.ಅಂತಹ ವೀರ ಸೇನಾನಿಯ ತತ್ವ-ಆದರ್ಶಗಳನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವರಾದ ಬೈರತಿ ಬಸವರಾಜ ಕರೆ ನೀಡಿದರು.ತಾಲೂಕಿನ ಹೊಸಕೇರಾ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಂಗೊಳ್ಳಿ ರಾಯಣ್ಣ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಲ್ಲ.ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋರಾಟ ಮಾಡಿದ ವೀರಸೇನಾನಿ.ಆಗಸ್ಟ್ 15 ಮತ್ತು ಜನವರಿ 26 ರಾಯಣ್ಣನ ವಿಶೇಷದಿನಗಳು.ಸ್ವಾತಂತ್ರ್ಯ ದೊರೆತ ದಿನದಂದು ಜನಿಸಿದ ಸಂಗೊಳ್ಳಿ ರಾಯಣ್ಣ,ದೇಶದ ಗಣರಾಜ್ಯೋತ್ಸವ ದಿನದಂದು ಪ್ರಾಣತ್ಯಾಗ ಮಾಡಿರುವುದು ವಿಶೇಷವಾದ ದಿನಗಳಾಗಿದೆ ಎಂದು ಹೇಳಿದರು.

ಸ್ಥಳೀಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡುತ್ತಾ,ಸಂಗೊಳ್ಳಿ ರಾಯಣ್ಣ ಮೂರ್ತಿ ಅನಾವರಣಕ್ಕಾಗಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬರಬೇಕಾಗಿತ್ತು.ಅನಿವಾರ್ಯ ಕಾರಣಗಳಿಂದಾಗಿ ಬರಲಾಗಲಿಲ್ಲ.ಕಾರ್ಯಕ್ರಮವು ಸುಮಾರು ಎರಡು ವರ್ಷಗಳ ಹಿಂದಿನಿಂದಲೇ ತಯಾರಿ ನಡೆದಿದ್ದು,ಹಲವಾರು ಮಹಿಳೆಯರು ಕುಂಭಮೇಳ,ಡೊಳ್ಳುಕುಣಿತ ಸಹಿತ ರಾಯಣ್ಣನ ಮೂರ್ತಿಯ ಅನಾವರಣ ಕಾರ್ಯಕ್ರಮವು ನಡೆದಿರುವುದು ಸಂತಸದ ವಿಚಾರ.ದೇಶದ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬ ಸೇನಾನಿಯಾಗಿ,ನಾಡಿನ ನೆಲಕ್ಕಾಗಿ ಹೋರಾಡಿದ  ಶೂರ ಸಂಗೊಳ್ಳಿ ರಾಯಣ್ಣ.ಚರಿತ್ರೆಯಲ್ಲಿಯೇ ಆತನ ಹೆಸರು ಅಜರಾಮರವಾಗಿ ಉಳಿದಿದೆ.ಹಾಲುಮತ ಸಮಾಜದ ಬಂಧುಗಳು ಮೂಢನಂಬಿಕೆಗಳಿಗೆ ಒತ್ತು ಕೊಡದೆ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿ.ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಕರೆ ನೀಡಿದರು.

ಮಾಜಿ ಶಾಸಕರಾದ ಗುರುಪಾಟೀಲ್ ಶಿರವಾಳ  ಮಾತನಾಡುತ್ತಾ,ಸಂಗೊಳ್ಳಿ ರಾಯಣ್ಣ ದೇಶದ ಆಸ್ತಿ.ರಾಯಣ್ಣನ ಹೆಸರು ಕೇಳಿದರೆ ಬ್ರಿಟಿಷರಿಗೆ ನಡುಕ ಹುಟ್ಟುತಿತ್ತು.ಬ್ರಿಟಿಷರ ಆಮಿಷಕ್ಕೆ ಒಳಗಾಗಿದ್ದರೆ ಸಂಸ್ಥಾನದ ರಾಜನಾಗಬಹುದಿತ್ತು. ಆದರೆ ಸಂಗೊಳ್ಳಿ ರಾಯಣ್ಣ ಪರಕೀಯರ ಮರಳು ಮಾತಿಗೆ ಒಳಗಾಗಿ ದೇಶ   ದೇಶದ್ರೋಹಿಯಾಗಲಾರೆ ಎಂದು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ ವೀರ ಸೇನಾನಿ.ಇಂತಹ ವ್ಯಕ್ತಿಗಳ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.

ಆರಂಭದಲ್ಲಿ ಹೊಸಕೇರ ಗ್ರಾಮದಲ್ಲಿ ಡೋಳ್ಳು ಕುಣಿತ ಕುಂಭಮೇಳದ ಜೊತೆಗೆ ಶಾಸಕರು ಮತ್ತು ಸಚಿವರಾದ ಭೈರತಿ ಬಸವರಾಜ ಸಮೇತ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಅನಾವರಣ ಮಾಡಲಾಯಿತು.

ಕಾರ್ಯಕ್ರಮಕ್ಕೆ ಗೈರು ಹಾಜರಾದ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ ಜನರು.ಮಾಜಿ ಮುಖ್ಯಮಂತ್ರಿಗಳು ಮತ್ತು ವಿರೋಧ ಪಕ್ಷದ ನಾಯಕರಾದ ಸಿದ್ಧರಾಮಯ್ಯನವರು ಭಾರದ ಕಾರಣ ಸಾಕಷ್ಟು ಜನರು ಬೇಸರ ವ್ಯಕ್ತಪಡಿಸಿದರು.ಅವರ ಬರುವಿಕೆಗಾಗಿಯೇ ಎರಡು ವರ್ಷ ಕಾಯಬೇಕಾಯಿತು.ಆದರೂ ಬಾರದಿರುವುದು ಬೇಸರ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಶಾಂತಮಯ ಮಹಾಸ್ವಾಮಿಗಳು ಅಗತೀರ್ಥರವರು ಪೂಜ್ಯರಾದ ಲಿಂಗ ಬೀರಲಿಂಗ ಮಹಾಸ್ವಾಮಿಗಳು ಪೂಜ್ಯರಾದ ಸಕ್ರಪ್ಪತಾತಾನವರು ನಿಜಾನಂದ  ಮಹಾಸ್ವಾಮಿಗಳು ಸಿದ್ಧಾರೂಢ ಮಠ ಹೊಸ್ಕೇರಾ  ಪೂಜ್ಯರು ಸಾನ್ನಿಧ್ಯ ವಹಿಸಿದ್ದರು.ಮುಖಂಡರಾದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಮಾತೆಪ್ಪ ಕಂದಕೂರ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ್, ಮುಖಂಡರಾದ ಶರಣಪ್ಪ ಸಲಾದಪುರ,ಸಿದ್ದನಗೌಡ ಕಾಡಂನೋರ್,ವಿಶ್ವನಾಥ ನೀಲಹಳ್ಳಿ,ಶಿವುಮಾಂತಪ್ಪ ಸಾಹು,ವಿನೋದ್ ಪಾಟೀಲ್,ಮಹಾರಾಜ್ ದಿಗ್ಗಿ ಸೇರಿದಂತೆ ಗ್ರಾಮಸ್ಥರು ಇದ್ದರು.ಮಲ್ಲಯ್ಯ ಸ್ವಾಮಿ ಇಟಗಿ  ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

 

ಶಹಾಪುರದಲ್ಲಿ ಕನಕ ಭವನ ನಿರ್ಮಿಸಲು ಸರಕಾರವು ಸುಮಾರು ಒಂದು ಕೋಟಿ ಅನುದಾನ ನೀಡಿದರೆ ಒಳಿತಾಗುತ್ತದೆ. ಆರು ತಿಂಗಳೊಳಗೆ ತಾಲೂಕಿನಲ್ಲಿ ಕನಕದಾಸರ ಮೂರ್ತಿ ಪ್ರತಿಷ್ಠಾಪನೆಗೈಯಲ್ಲಿದ್ದು,21ಅಡಿ ಎತ್ತರದ ಮೂರ್ತಿ ನಿರ್ಮಾಣಕ್ಕಾಗಿ ನನ್ನ ವೈಯಕ್ತಿಕವಾಗಿ 25 ಲಕ್ಷ ರೂಪಾಯಿ ನೀಡಿದ್ದು,ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಕರೆಸಲಾಗುವುದು.

   ಶರಣಬಸಪ್ಪಗೌಡ ದರ್ಶನಾಪುರ ಶಾಸಕರು ಶಹಾಪುರ

 

About The Author