ಐಕೂರು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯ : ಐಕೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ

ವಡಗೇರಾ : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆಯಾಗದಂತೆ ಅಭಾವ ಆಗದಂತೆ ಗ್ರಾಮ ಪಂಚಾಯಿತಿ ಆಡಳಿತ ವರ್ಗ ಕ್ರಮವಹಿಸುವಂತೆ ಪದೇ ಪದೇ ಸಭೆ ಕರೆದು ಸೂಚಿಸುತ್ತಾರೆ. ಆದರೆ ಗ್ರಾಮ ಪಂಚಾಯಿತಿಯವರು ಮೇಲಾಧಿಕಾರಿಗಳ ಮಾತನ್ನು ಲೆಕ್ಕಿಸದೆ ತಮ್ಮದೇ ಚಾಳಿಯನ್ನು ಮುಂದುವರಿಸುತ್ತಾರೆ. ಗ್ರಾಮದ ಪಕ್ಕದಲ್ಲಿ ಕೃಷ್ಣಾ ನದಿ ಹರಿಯುತ್ತಿದೆ. ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೂ ಕುಡಿಯುವ ನೀರಿಗಾಗಿ ಜನರು ಪರಿತಪಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಕೇಂದ್ರ ಐಕೂರುಗ್ರಾಮ. ಕಳೆದ ಒಂದು ತಿಂಗಳಿಂದ ಕುಡಿಯುವ ನೀರಿಲ್ಲ. ಸಮಸ್ಯೆಗಳನ್ನು ಕೇವಲ ತಾತ್ಕಾಲಿಕವಾಗಿ ಗ್ರಾಮ ಪಂಚಾಯಿತಿ ಮಾಡುತ್ತದೆ. ಹತ್ತರಿಂದ ಹದಿನೈದು ದಿನದ ನಂತರ ಮತ್ತೆ ನೀರಿನ ಸಮಸ್ಯೆ ಉದ್ಭವಿಸುತ್ತದೆ.ಇದಕ್ಕೆಲ್ಲ ಶಾಶ್ವತ ಪರಿಹಾರ ಹುಡುಕುವುದು ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಕಾಡುತ್ತಿದೆ.

ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತ. ಬಿರುಗಾಳಿಗೆ ಹಾರಿ ಹೋದ ಮೇಲ್ಚಾವಣಿ.

ಐಕೂರು ಗ್ರಾಮದಲ್ಲಿ ನಿರ್ಮಿತವಾದ ಶುದ್ಧಕುಡಿಯುವ ನೀರಿನ ಘಟಕ ಆರಂಭವಾದಾಗಿನಿಂದ ಆರು ತಿಂಗಳ ಮಟ್ಟಿಗೆ ಮಾತ್ರ ಆರಂಭವಾಗಿತ್ತು. ನಂತರ ಇದುವರೆಗೂ ಕೂಡ ಇಲ್ಲಿಯವರೆಗೂ ಸಂಪೂರ್ಣವಾಗಿ ಸ್ಥಗಿತವಾಗಿದೆ. ಕಳೆದ ಕೆಲ ದಿನಗಳಿಂದ ಸುರಿದ ಬಿರುಗಾಳಿ ಸಮೇತ ಮಳೆಯಿಂದಾಗಿ ಶುದ್ಧ ಕುಡಿಯುವ ನೀರಿನ ಘಟಕದ ಮೇಲ್ಚಾವಣಿ ಹಾರಿ ಹೋಗಿದ್ದು ಅದನ್ನು ಸರಿಪಡಿ ಪಡಿಸುವ ಸ್ಥಿತಿಗೆ ಗ್ರಾಮ ಪಂಚಾಯಿತಿ ತಲೆ ಕೆಡಿಸಿಕೊಂಡಿಲ್ಲ.

ಪಕ್ಕದ ಊರುಗಳಿಂದ ಕುಡಿಯುವ ನೀರು ತರುತ್ತಿರುವ ಗ್ರಾಮಸ್ಥರು.

ಐಕೂರು ಗ್ರಾಮದ ಜನರು ಕುಡಿಯುವ ನೀರಿಗಾಗಿ ಹಯ್ಯಳ, ಬಸ್ವಂತಪುರ, ಮುನ್ಮುಟಗಿ ಗ್ರಾಮದಿಂದ ಇಲ್ಲಿನ ಗ್ರಾಮಸ್ಥರು ಕುಡಿಯುವ ನೀರನ್ನು ತೆಗೆದುಕೊಂಡು ಬರುತ್ತಿದ್ದಾರೆ. 20 ಲೀಟರ್ ಒಂದುಕ್ಯಾನಿಗೆ 20 ರೂಪಾಯಿಯಂತೆ ತೆಗೆದುಕೊಂಡು ಬರುತ್ತಿದ್ದು ಪ್ರತಿದಿನ ಈ ಸಮಸ್ಯೆ ಉಲ್ಭಣಿಸುತ್ತಿದೆ. ಶಾಲಾ ಮಕ್ಕಳು ಕೂಡ ಬೋರ್ವೆಲ್ ಗಳಿಂದ ನೀರಿಗಾಗಿ ಸರದಿ ಸಾಲಿನಲ್ಲಿ ನಿಂತು ನೀರು ತರುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳಿಗೆ ಸಮಯದ ಅಭಾವ ಉಂಟಾಗಿ ಕಲಿಕೆ ಕುಂಠಿತವಾಗುತ್ತದೆ ಎನ್ನುವುದು ಗ್ರಾಮಸ್ಥರು ಆರೋಪವಾಗಿದೆ.

*********

ಫೋನ್ ಕರೆ ಸ್ವೀಕರಿಸದ ಅಧ್ಯಕ್ಷ ಮತ್ತು ಪಿಡಿಓ.

ಐಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳು ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ ಸಂಪರ್ಕಿಸಿದಾಗ ಯಾವುದೇ ಕರೆಯೇ ಸ್ವೀಕರಿಸುತ್ತಿಲ್ಲ.ಸಮಸ್ಯೆಗಳನ್ನು ಯಾರ ಬಳಿ ಕೇಳಬೇಕು ಎನ್ನುವುದು ತಿಳಿಯುವುದಿಲ್ಲ ಎನ್ನುತ್ತಾರೆ ಸಾರ್ವಜನಿಕರು.

***********

“ಐಕೂರು ಗ್ರಾಮದಲ್ಲಿ ಆರು ಜನ ಗ್ರಾಮ ಪಂಚಾಯಿತಿ ಸದಸ್ಯರಿದ್ದಾರೆ. ಅಧ್ಯಕ್ಷರು ಕೂಡ ಐಕೂರು ಗ್ರಾಮದವರೆ. ಆದರೂ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತಿಲ್ಲ. ಕಳೆದ ಕೆಲ ದಿನಗಳಿಂದ ಪದೇ ಪದೇ ನೀರಿನ ಸಮಸ್ಯೆಯಾಗುತ್ತಿದೆ.ಜೆಜೆಎಂ ದಿಂದ ಕೆಲವರಿಗಷ್ಟೇ ನೀರು ತಲುಪುತ್ತಿದೆ. ಇನ್ನೂ ಕೆಲವು ವಾರ್ಡ್ ಗಳಿಗೆ ನೀರು ತಲುಪುತ್ತಿಲ್ಲ.ಕುಡಿಯುವ ನೀರಿಗಾಗಿ ಶಾಶ್ವತ ಪರಿಹಾರ ಹುಡುಕಬೇಕಿದೆ”

ಐಕೂರು ಅಶೋಕ
ಜಿಲ್ಲಾಧ್ಯಕ್ಷರು
ವರ್ತೂರು ಪ್ರಕಾಶ್ ಯುವ ಗರ್ಜನೆ ಯಾದಗಿರಿ.

About The Author