ಐಡಿಎಸ್ಎಂಟೀ ಲೇಔಟ್ ವೀಕ್ಷಿಸಿದ ಸಚಿವರು : ನಿವೇಶನಗಳಿಗೆ ಪ್ರಸ್ತಾವನೆ ಸಚಿವ ದರ್ಶನಾಪುರ

ಶಹಾಪುರ   : ನಗರದ ಬಾಪುಗೌಡ ಬಡಾವಣೆಯಲ್ಲಿ  ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಸಮಗ್ರಅಭಿವೃದ್ಧಿ(ಐಡಿಎಸ್ಎಂಟಿ)
ಜಮೀನಿಗೆ ಹೊಂದಿಕೊಂಡಂತೆ ಹರಿಯುವ ಹಳ್ಳಕ್ಕೆ 1.24 ಕೋಟಿ ವೆಚ್ಚದಲ್ಲಿ ಎರಡು ಕಡೆ ಕಾಂಕ್ರೀಟ್ ತಡೆಗೋಡೆ ಹಾಗೂ ಐ ಡಿ ಎಸ್ ಎಂ ಟಿ ನಿವೇಶನ ಗಳಿಗೆ 50 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಣ್ಣ ಕೈಗಾರಿಕೆ ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ್ ತಿಳಿಸಿದರು.
ನಗರದ ಬಾಪುಗೌಡ ಬಡಾವಣೆಯಲ್ಲಿನ ಐಡಿಎಸ್ಎಂಟಿ ನಿವೇಶನಗಳ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾತನಾಡಿದ ಅವರು,ಐಡಿಎಸ್‌ಟಿ ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಭೂ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ 11.4 ಗುಂಟೆ ಜಮೀನು ಪತ್ತೆಯಾಗಿರಲಿಲ್ಲ. ನರಸಭೆಯ ಆಶ್ರಯ ಸಮಿತಿ ವಸಂತ ಸುರಪುರಕರ್ ಹಾಗೂ ನಗರಸಭೆಯ ಸಿಬ್ಬಂದಿ ಪರಿಶ್ರಮದ ಫಲವಾಗಿ ದಾಖಲೆಗಳನ್ನು ಪತ್ತೆ ಹಚ್ಚಿದಾಗ ಕೋಟ್ಯಂತರ ಮೌಲ್ಯದ ಜಮೀನು ನಗರಸಭೆಗೆ ಲಭ್ಯವಾಯಿತು. ಅದರಂತೆ ಸದ್ಯಕ್ಕೆ 7.4 ಎಕರೆ ಪ್ರದೇಶದಲ್ಲಿ ಲೇಔಟ್ ರಚನೆ ಮಾಡಿದ್ದು, 84 ನಿವೇಶನಗಳು ಲಭ್ಯವಾಗಿದ್ದು. ಈಗ ಅಂದಾಜು 50 ಫ್ಲಾಟ್ ಗಳಷ್ಟು  ಜಮೀನಿನ ಲಭ್ಯವಾಗಿದೆ. ಲೇಔಟ್ ನಿರ್ಮಿಸಿ, ನಿವೇಶನ ರಚನೆ ಮಾಡಲಾಗುವುದು ಎಂದು ಹೇಳಿದರು.
ನೀವೇಶನಗಳ ನಿರ್ಮಾಣಕ್ಕಾಗಿ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಳುಹಿಸಿಕೊಡಲಾಗುವುದು.ಅನುಮೋದನೆ ನಂತರ ಟೆಂಡರ್ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಆರಂಭಿಸಲಾಗುವುದು ಎಂದು ತಿಳಿಸಿದರು. ಕಾರ್ನರ್ ನಿವೇಶನಗಳನ್ನು ಹರಾಜಿಗೆ ಇಡಲಾಗುವುದು ಎಂದರು.
 ನಗರಸಭೆ ಪೌರಾಯುಕ್ತಾರಾದ ರಮೇಶ್ ಬಡಿಗೇರ್, ಕೆಪಿಸಿಸಿ ರಾಜ್ಯ ಉಪಾಧ್ಯಕ್ಷರಾದ ಮರಿಗೌಡ ಹುಲ್ಕಲ್,ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತಕುಮಾರ್ ಸುರಪುರಕರ್, ನಗರಸಭೆಯ ಎಇಇ, ಜೆಇ, ಆರ್ ಓ, ಆರ್ ಐ, ಪರಿಸರ ಅಭಿಯಂತರ ಇಂಜಿನಿಯರ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

About The Author