ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಶಹಾಪುರ : ಇಂದು ವಿಶ್ವ ರಕ್ತದಾನಿಗಳ ದಿನಾಚರಣೆಯ ಪ್ರಯುಕ್ತ ಶಹಾಪುರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಹಾಗೂ ಜಾಗೃತಿ ಅಭಿಯಾನ ಜರುಗಿತು. ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆಯಂತೆ ಜಾಗತಿಕವಾಗಿ ಇಂದಿಗೆ 20 ವರ್ಷಗಳು ಗತಿಸಿವೆ.  “ರಕ್ತ ದಾನಿಗಳೆ ಧನ್ಯವಾದ ನಿಮ್ಮ ಜೀವದಾನದ ಕೊಡುಗೆ ಅತಿ ಅಮೂಲ್ಯವಾದದ್ದು” ಎಂಬ ಘೋಷ ವಾಕ್ಯದಂತೆ ತಾಲೂಕ ಆಸ್ಪತ್ರೆಯಲ್ಲಿ ವಿಶೇಷವಾಗಿ ರಕ್ತಶೇಖರಣ ಘಟಕ, ಹಾಗೂ ಆಸ್ಪತ್ರೆ ಎಲ್ಲಾ ವೈದ್ಯಾಧಿಕಾರಿಗಳ ಸಹಯೋಗದಲ್ಲಿ ಡಾ: ಜಗದೀಶ್ ಉಪ್ಪಿನ್ ಮಾರ್ಗದರ್ಶನದಲ್ಲಿ ರಕ್ತದಾನ ಶಿಬಿರ ಜರುಗಿತು.

ಈ ಸಂದರ್ಭದಲ್ಲಿ ನೇತೃ ತಜ್ಞರಾದ ಜಗದೀಶ್ ಉಪ್ಪಿನ್  ಮಾತನಾಡಿ,ಕಾರ್ಯಕ್ರಮದ ಮುಖ್ಯ ಉದ್ದೇಶವೇ ರಕ್ತದಾನಿಗಳನ್ನು ಗುರುತಿಸಿ ಗೌರವಿಸುವುದು. ಹೆಚ್ಚು ಹೆಚ್ಚು ರಕ್ತದಾನಿಗಳನ್ನು ಆಯೋಜಿಸುವಂತೆ ಪ್ರೇರೇಪಿಸುವುದು‌. ಯಾವುದೇ ಸಮಯದಲ್ಲಿ ರಕ್ತದ ಕೊರತೆಯಿಂದಾಗಿ ರೋಗಿಗಳು ಬಳಲದಂತೆ ನೋಡಿಕೊಳ್ಳುವ ಸದುದ್ದೇಶದಿಂದ ರಕ್ತದಾನ ಕುರಿತು ಜಾಗೃತಿ ಮೂಡಿಸುವುದಾಗಿದೆ ಎಂದರು.

ಡಾ. ಜಗದೀಶ್ ಉಪ್ಪಿನ್, ಸಿದ್ದರಾಮರೆಡ್ಡಿ, ರಘುವೀರ್ ಕಂಚಿ, ಭೀಮರಾಯ ಪೂಜಾರಿ, ಭೀಮಾಶಂಕರ್ ಗುಳಗಿ, ಬೋಜೇಗೌಡ ಸೇರಿದಂತೆ 27 ಜನರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.ರಕ್ತದ ಯುನಿಟ್ ಗಳನ್ನು ಶೇಖರಣ ಘಟಕದಲ್ಲಿ ಇಡಲಾಯಿತು.ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ್ದ ರಕ್ತದಾನಿಗಳನ್ನು ಗುರುತಿಸಿ ಗೌರವಿಸಲಾಯಿತು.ಆಸ್ಪತ್ರೆಯ ಸಿಬ್ಬಂದಿಗಳು ಒಳಗೊಂಡಂತೆ, ಸಾರ್ವಜನಿಕರು, ಎಚ್ ಡಿ ಎಫ್ ಸಿ ಬ್ಯಾಂಕ್ ಶಹಾಪುರ, ಸಿಬ್ಬಂದಿಗಳು, ಭಾಗವಹಿಸಿದ್ದರು. ಆಸ್ಪತ್ರೆಯ ವೈದ್ಯರಾದ ವೆಂಕಟೇಶ್ ಬೈರವಡಗಿ, ಪ್ರೇಮ್ ಕುಮಾರ್, ಡಾ. ಸುರೇಖಾ ಪಾಟೀಲ್, ಡಾ.ಚಂದ್ರಶೇಖರ್ ಚೌಹಾನ್. ಶೈಲಜಾ ಹಾಗೂ ಶ್ರೀನಿವಾಸ್ ಆಚಾರ್, ಆಪ್ತ ಸಮಾಲೋಚಕರಾದ ಗುಂಡೂರಾವ್ ಹುಮ್ನಾಬಾದ್, ಮಂಜುನಾಥ್ ಪಾಟೀಲ್, ವಿಶ್ವರಾಧ್ಯ, ಅಶೋಕ್ ಪಾಟೀಲ್, ರಘುವೀರ್ ಕಂಚಿ, ಶ್ರೀನಿವಾಸ್ ನಾಯಕ್ ಹಾಗೂ ಸ್ನೇಹಿತರ ತಂಡ,ಡಾ. ಸುರಗಿಮಠ, ರಾಚನಗೌಡ ಕರಡ್ಡಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು
ಸೇರಿದಂತೆ ಇತರರು ಇದ್ದರು.