ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಬಿ.ಎಮ್.ಪಾಟೀಲರಿಂದ ಸನ್ಮಾನ

ವಡಗೇರಾ : ಸುಮಾರು 25 ರಿಂದ 30 ವರ್ಷಗಳವರೆಗೆ ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರಾಗಿ ದುಡಿದು ಹಲವು ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಕಾರಣೀಕರ್ತರಾದ ಪ್ರಸ್ತುತ ಬಳ್ಳಾರಿ ಎಪಿಎಂಸಿಯ ಅಧ್ಯಕ್ಷರಾಗಿ ಆಯ್ಕೆಯಾದ ನಾಗೇಂದ್ರ ಕಟ್ಟಿಮನಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ಕೊಳಗಲ್ ಹುಲಿಯಪ್ಪನವರಿಗೆ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರು, ಕೆಪಿಸಿಸಿ ವಕ್ತಾರರು ಹಾಗೂ ಮೊಣಕಾಲ್ಮುರು ಕ್ಷೇತ್ರದ ಉಸ್ತುವಾರಿಗಳಾದ ಬಿ ಎಂ ಪಾಟೀಲರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಎಮ್ ಪಾಟೀಲರು, ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ ದುಡಿದ ನಾಗೇಂದ್ರ ಕಟ್ಟಿಮನಿಯವರಿಗೆ ಪಕ್ಷವು ಗುರುತಿಸಿ ಎಪಿಎಂಸಿ ಅಧ್ಯಕ್ಷ ಸ್ಥಾನ ಕೊಳ್ಗಲ್ ಹುಲಿಯಪ್ಪನವರಿಗೆ ಉಪಾಧ್ಯಕ್ಷ ಸ್ಥಾನ ನೀಡಿದೆ. ರೈತರಿಗೆ ಎಪಿಎಂಸಿಯಲ್ಲಿ ದುಡಿಯುತ್ತಿರುವ ವ್ಯಕ್ತಿಗಳಿಗೆ ಅಂಗಡಿಯ ಮಾಲೀಕರಿಗೆ ಸಾಮಾನ್ಯ ಜನರಿಗೆ ಸಿಗುವ ಸರ್ಕಾರದ ಸೌಲಭ್ಯಗಳನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಒದಗಿಸಿ ಕೊಡಲಿ. ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಉನ್ನತ ಸ್ಥಾನ ದೊರಕಲಿ ಎಂದು ಹೇಳಿದರು.ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯಾದ ಕೊಳಗಲ್ ಹುಲಿಯಪ್ಪನವರು ಗ್ರಾಮ ಕೊಳಗಲ್ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಪ್ರಸ್ತುತ ಎಪಿಎಂಸಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ಕುರುಬರ ಸಂಘದ ಜಿಲ್ಲಾಧ್ಯಕ್ಷ ಡಾII ಗಾಧಿಲಿಂಗನ ಗೌಡ್ರು, ಮಲ್ಲೇಶ್, ಆಂಧ್ರಳ್ ಅರವಿಂದ್, ಕಕ್ಕಬೇವಿನಹಳ್ಳ ಲಕ್ಷ್ಮಿ ರೆಡ್ಡಿ, ದೇವೇಂದ್ರ ಸೇರಿದಂತೆ ಇತರರು ಇದ್ದರು.