ಶಹಾಪುರ: ಸರಕಾರಿ ಆಸ್ಪತ್ರೆಯಲ್ಲಿ ಬೃಹತ್ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ : ಜನಹಿತ ಐಕೇರ್ ಸೆಂಟರ್ ಬೆಂಗಳೂರು-ಹಿಂದೂಪುರ ಡಾ. ಕೃಷ್ಣಮೋಹನ್ ಜಿಂಕಾ ತಂಡದಿಂದ : 350 ರಿಂದ 500 ಜನರ ನೇತ್ರ ಶಸ್ತ್ರಚಿಕಿತ್ಸಾ ಗುರಿ : ಡಾ.ಯಲ್ಲಪ್ಪ ಹುಲ್ಕಲ್

*ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೃಹತ್ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ

*ಜನಹಿತ ಆಯ್ಕೆ ಸೆಂಟರ್ ಬೆಂಗಳೂರು ಹಿಂದೂಪುರ ಡಾ. ಕೃಷ್ಣ ಮೋಹನ್ ಜಿಂಕಾ ಇವರ ತಂಡದಿಂದ
*350 ರಿಂದ 500 ಜನರ ನೇತ್ರ ಶಸ್ತ್ರಚಿಕಿತ್ಸಾ ಗುರಿ : ಡಾ. ಯಲ್ಲಪ್ಪ ಹುಲ್ಕಲ್.

ಶಹಾಪುರ :
ಜೂನ್ 1 ಮತ್ತು 2 ರಂದು ಶಹಪುರದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ ಯಾದಗಿರಿ, ತಾಲೂಕು ಆರೋಗ್ಯ ಇಲಾಖೆ ಶಹಪುರ ಇವರ ಸಂಯುಕ್ತಾಶ್ರಯದಲ್ಲಿ ಬೃಹತ್ ಉಚಿತ ನೇತ್ರ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, 350 ರಿಂದ 500 ಜನರ ನೇತ್ರ ಶಸ್ತ್ರಚಿಕಿತ್ಸೆಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಾಲೂಕು ಆಡಳಿತಾಧಿಕಾರಿ ಡಾ.ಯಲ್ಲಪ್ಪ ಹುಲ್ಕಲ್ ತಿಳಿಸಿದ್ದಾರೆ.

ಜನಹಿತ ಐಕೇರ್ ಸೆಂಟರ್
ಬೆಂಗಳೂರು-ಹಿಂದೂಪುರವತಿಯಿಂದ ಡಾ. ಕೃಷ್ಣ ಮೋಹನ್ ಜಿಂಕಾ ಅವರ ತಂಡದಿಂದ ಎರಡು ದಿನಗಳ ಕಾಲ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಈ ತಂಡದವರು 2008ರಿಂದ ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಮೇಲ್ಪಟ್ಟು ಯಶಸ್ವಿ ನೇತ್ರ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸಾರ್ವಜನಿಕರು ಮತ್ತು ತಾಲೂಕಿನ ಸುತ್ತಲಿನ ಗ್ರಾಮಸ್ಥರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು ತಿಳಿಸಿದರು.

ನೇತ್ರ ಶಸ್ತ್ರ ಚಿಕಿತ್ಸೆಗೆ ಒಳಪಡುವವರ ಪಟ್ಟಿ ಈಗಾಗಲೇ ಸಿದ್ಧವಿದ್ದು ಇನ್ನೂ ನೇತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಇಚ್ಛಿಸುವವರು ಸರಕಾರಿ ಸಾರ್ವಜನಿಕ ಆಸ್ಪತ್ರೆಯ ನೇತ್ರಾಧಿಕಾರಿಗಳನ್ನು ಸಂಪರ್ಕಿಸಬಹುದು.ರೋಗಿಯನ್ನು ಪರಿಶೀಲಿಸಿ ಶಸ್ತ್ರ ಚಿಕಿತ್ಸೆಗೆ ಅರ್ಹನಿದ್ದಾನೆ ಎಂದು ಪರಿಶೀಲಿಸಿದ ನಂತರ ನೋಂದಾಯಿಸಿಕೊಳ್ಳಲಾಗುವುದು.ನೇತ್ರ ಶಸ್ತ್ರಚಿಕಿತ್ಸೆಯ ದಿನ ಬಿಪಿ,ಶುಗರ್ ಗಳನ್ನು ಟೆಸ್ಟ್ ಮಾಡಿಸಲಾಗುವುದು. ನಂತರ ಶಸ್ತ್ರ ಚಿಕಿತ್ಸೆಗೆ ಅರ್ಹ ಎನ್ನುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಹೆಚ್ಚಿನ ಮಾಹಿತಿಗಾಗಿ ನೇತ್ರಾಧಿಕಾರಿ ಬಸವರಾಜ 9900585784
ಸಂಗಣ್ಣ ನುಚ್ಚಿನ್ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ 9980776967
ಮಂಜುನಾಥ 9686857989 ಇವರನ್ನು ಸಂಪರ್ಕಿಸಬಹುದು.

ಬಾಕ್ಸ್ ಲ್ಲಿ 1.

ಫಲಾನುಭವಿಗಳು ಶಿಬಿರಕ್ಕೆ ಬರುವಾಗ ಗಡ್ಡ, ಕಟ್ಟಿಂಗ್, ಸ್ನಾನ ಮಾಡಿಕೊಂಡು ಶುದ್ಧ ಬಟ್ಟೆಗಳನ್ನು ಧರಿಸಿಕೊಂಡು ಬರಬೇಕು. ಬರುವಾಗ ಆಧಾರ ಕಾರ್ಡ್, ಚುನಾವಣೆ ಕಾರ್ಡ್, ರೇಷನ್ ಕಾರ್ಡ್ ಜೆರಾಕ್ಸ್ ಪ್ರತಿಗಳನ್ನು ತರಬೇಕು.ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಇರಬೇಕು. ಒಬ್ಬ ರೋಗಿಯ ಜೊತೆಗೆ ಇನ್ನೊಬ್ಬರಿಗೆ ಅವಕಾಶ ಕಲ್ಪಿಸಲಾಗಿದೆ.

ಬಾಕ್ಸ್ನಲ್ಲಿ 2.

ಸಾರ್ವಜನಿಕ ಗರ್ಭಿಣಿಯರ ಹಿತದೃಷ್ಟಿಯಿಂದ ತುರ್ತು ಸಮಯದಲ್ಲಿ ಗರ್ಭಿಣಿಯರು ಸಿಜರೀಯನ್ ಶಸ್ತ್ರಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ಅಡೆತಡೆಯಾಗದಂತೆ ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಬಾಕ್ಸ್ನಲ್ಲ

ಶಸ್ತ್ರಚಿಕಿತ್ಸೆಗೆ ಬರುವವರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಊಟದ ವ್ಯವಸ್ಥೆ ಮಾಡಲಾಗಿದ್ದು,ಶಿವಣ್ಣ ತಣಿಕೆದಾರ್, ಕವಿತಾ ಟೆಂಟ್ ಹೌಸ್ ವಾಲ್ಮೀಕಿ ಚೌಕ್ ಹಳಿಸಗರ ರವರು ಟೆಂಟ್ ವ್ಯವಸ್ಥೆ ಮಾಡಲಿದ್ದಾರೆ.ಶಹಪುರ್ ಮಾರ್ಟ್( ಮಾಲ್) ರವರು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿದ್ದಾರೆ.

About The Author