ಸಿಡಿಲಿಗೆ 153 ಕುರಿಗಳ ಸಾವು:ತುಮಕೂರ್ಲಹಳ್ಳಿ ಗ್ರಾಮದ ಬೈಯಣ್ಣನವರ ಮನೆಗೆ ಭೇಟಿ ನೀಡಿದ ಶರಣು ತಳ್ಳಿಕೇರಿ

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತುಮಕೂರ್ಲಹಳ್ಳಿ ಗ್ರಾಮದಲ್ಲಿ ರಭಸವಾಗಿ ಮಳೆ ಮತ್ತು ಸಿಡಿಲಿನ ಬಡಿತಕ್ಕೆ ಗ್ರಾಮದಲ್ಲಿ ಬೈಯಣ್ಣನವರ 153 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿದ್ದವು. ಇದರಿಂದ ಕಂಗಾಲಾದ ಕುರಿಗಾರರು ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ ಅವರ ಗಮನಕ್ಕೆ ತಂದಾಗ ಸ್ವತಃ ಅಧ್ಯಕ್ಷರು ಬೈಯಣ್ಣನವರ ಮನೆಗೆ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿ ಸಾವನ್ನಪ್ಪಿದ ಕುರಿಗಳ ಮರಣೋತ್ತರ ಪರೀಕ್ಷೆಯ ವರದಿ ನೀಡುವಂತೆ ಸ್ಥಳೀಯ ತಹಶೀಲ್ದಾರರಾದ ಸುರೇಶ ರವರಿಗೆ ತಿಳಿಸಿದರು.ಅನುಗ್ರಹ ಯೋಜನೆ ಅಡಿಯಲ್ಲಿ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಸಹಾಯಧನ ನೀಡಿದ ಶರಣು ತಳ್ಳಿಕೇರಿ ಯವರು ಕುರಿಗಾರರು ಯಾವುದೇ ಭಯಪಡುವ ಅಗತ್ಯವಿಲ್ಲ. ಸರಕಾರ ಅವರ ನೆರವಿಗೆ ಸದಾಕಾಲವಿರುತ್ತದೆ.ಕಳೆದ ಆರ್ಥಿಕ ಬಜೆಟ್ ನಲ್ಲಿ ಕುರಿಗಾರರಿಗೆ ಸರಕಾರವು ವಸತಿ ಸಹಿತ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿ ಕೊಟ್ಟಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಾಮಂಡಳ ನಿರ್ದೇಶಕರಾದ ಮೀಸೆ ಮಹಲಿಂಗಪ್ಪ, ಮಂಡಲ ಅಧ್ಯಕ್ಷರಾದ ಡಾ ಮಂಜುನಾಥ ಪಿ ಎಂ , ಪ.ಪಂ ಅಧ್ಯಕ್ಷರಾದ ಲಕ್ಷ್ಮಣ ಪಿ , ನಿಕಟಪೂರ್ವ ಯುವ ಮೋರ್ಚ ರಾಜ್ಯ ಕಾರ್ಯದರ್ಶಿ ಮಂಜುನಾಥ , ಜಿಲ್ಲಾ ಕಾ.ಕಾ ಸದಸ್ಯರಾದ ಮಂಜುನಾಥ ಟಿ ಎಂ , ನಗರ ಘಟಕ ಅಧ್ಯಕ್ಷರಾದ ಕಿರಣ್ ಗಾಯಕ್ವಾಡ್ , ತುಮಕೂರ್ಲಹಳ್ಳಿ ಮುಖಂಡರಾದ ಮಂಜಣ್ಣ , ತಿಪ್ಪೇಸ್ವಾಮಿ,ನಿಗಮದ ಅಧಿಕಾರಿಗಳಾದ ಡಾ ತಿಪ್ಪೇಸ್ವಾಮಿ, ಡಾ ರಂಗಪ್ಪ ಮುಂತಾದವರು ಉಪಸ್ಥಿತರಿದ್ದರು.

About The Author