ನಿಷ್ಕ್ರಿಯವಾದವೇ ಕುರುಬ ಸಂಘಟನೆಗಳು ! : ದೌರ್ಜನ್ಯಕ್ಕೊಳಗಾದವರ ಹಿತ ಕಾಯುವವರು ಯಾರು ?

ಕವಿಡೆಸ್ಕ : ಇಂದಿನ ಕಾಲಮಾನದಲ್ಲಿ ಜಾತಿ ವ್ಯವಸ್ಥೆ ಎಲ್ಲೇಡೆ ಹರಡಿದೆ. ತಮ್ಮ ತಮ್ಮ ಜಾತಿ ಜನಾಂಗಗಳಿಗೆ ಅನ್ಯಾಯವಾದರೆ ಆ ಜನಾಂಗದವರು ರಸ್ತೆಗಳಿದು ಹೋರಾಟ ಮಾಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಕುರುಬ ಸಮಾಜದ ಸಂಘಟನೆಗಳು ನಿಷ್ಕ್ರಿಯವಾಗಿವೆ ಎಂದು ಅನುಮಾನ ವ್ಯಕ್ತವಾಗುತ್ತಿದೆ. ಕುರುಬ ಸಮಾಜದಲ್ಲಿ ಜನರಿಗೆ ನೌಕರರಿಗೆ ಅನ್ಯಾಯವಾದಾಗ ಕೇಳುವವರೆ ಇಲ್ಲವಾಗಿದೆ.ರಾಜ್ಯಾದ್ಯಂತ ಅಲ್ಲಲ್ಲಿ ಸಮಾಜದ ಜನರ ಮೇಲೆ ದೌರ್ಜನ್ಯವಾದಾಗ ಸಮಾಜದವರು ವಿರೋಧ ವ್ಯಕ್ತಪಡಿಸುತ್ತಿಲ್ಲ.ನಮಗೆ ಗೊತ್ತೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಇರುವುದು ದುರದೃಷ್ಟಕರ.

ಹೆಸರಿಗೆ ಮಾತ್ರ ಕುರುಬ ಸಮಾಜ ರಾಜ್ಯದಲ್ಲಿಯೇ ಮೂರನೇ ಅತಿದೊಡ್ಡ ಸಮಾಜ. ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಹೊರತುಪಡಿಸಿದರೆ ಇನ್ಯಾರು ಕೂಡ ಪ್ರಭಾವಿ ನಾಯಕರಿಲ್ಲ ಅನ್ನಿಸುತ್ತಿದೆ.

ಇತ್ತೀಚಿಗೆ ಕಲಬುರ್ಗಿ ಜಿಲ್ಲೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಾಗ ಕಲಬುರಗಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು. ಅದನ್ನು ಹೊರತುಪಡಿಸಿದರೆ ರಾಜ್ಯದ ಬೇರೆಲ್ಲೂ ಕಡೆ ಯಾರು ಕೂಡ ಮಾತನಾಡಲಿಲ್ಲ ಇದಕ್ಕೇನು ಕಾರಣ ಎಂದು ಗೊತ್ತಾಗುತ್ತಿಲ್ಲ.

ರಾಜ್ಯದಲ್ಲಿ ಅಖಿಲ ಕರ್ನಾಟಕ ಪ್ರದೇಶ ಕುರುಬರ ಸಂಘವಿದ್ದರೂ ಯಾವ ವಿರೋಧ ವ್ಯಕ್ತಪಡಿಸಲಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಮೃತನ ಮನೆಗೆ ಹೋಗಿ ಸಾಂತ್ವನ ಹೇಳಲಿಲ್ಲ. ಇದಕ್ಕೆ ರಾಜ್ಯದ ಹಿರಿಯ ರಾಜಕಾರಣಿಗಳು ಗಪ್ ಚುಪ್ ಎಂದು ಹೇಳಿದ್ದಾರೆಯೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.

ಚುನಾವಣೆ ಬಂದಾಗ ಎಚ್ಚೆತ್ತುಕೊಳ್ಳುವ ಮುಖಂಡರು ವಿಧಾನಸಭೆ, ಲೋಕಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳು ಬಂದಾಗ ಸಮಾಜದ ಮುಖಂಡರು ಎಚ್ಚೆತ್ತುಕೊಳ್ಳುವರು. ಆಗ ಸಮಾಜದ ಬಗ್ಗೆ ಮಾತನಾಡುವರು. ಚುನಾವಣೆ ಮುಗಿದ ಮೇಲೆ ಯಾವ ವಿಚಾರಗಳು ಎಲ್ಲವೂ ಮಾಯವಾಗುವವು.

ನಮ್ಮ ನಮ್ಮಲ್ಲಿಯೆ ಕಚ್ಚಾಡಿಕೊಂಡು ಇರುವವರು ಹೆಚ್ಚಾಗಿದೆ. ಒಂದೇ ಸಮಾಜದವರಾದರು ಒಗ್ಗಟ್ಟಿಲ್ಲ. ನಮ್ಮವರೇ ನಮಗೆ ಹಿತ ಶತ್ರುಗಳಾದರೆ ಸಮಾಜ ಬೆಳೆಯುವುದು ಹೇಗೆ. ಹಿರಿಯರಾದವರು ಕಿರಿಯರಾದವರು ಆಲೋಚನೆ ಮಾಡಬೇಕಿದೆ.

ಇತರ ಸಮಾಜದ ಸಂಘಟನೆಗಳನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ. ಹಿಡಿದ ಹಟ ಬಿಡದವರು ಇತರ ಸಮಾಜದವರು.ಇತರ ಸಮಾಜದವರ ಒಗ್ಗಟ್ಟು ಕಲಿಯದಿದ್ದರೆ ಕುರುಬರು ಕೂಡಿ ಕೆಟ್ಟರೂ ಎನ್ನುವ ಗಾದೆಯ ಮಾತಿನ ಹಾಗೆ ಮುಂದುವರೆಯುತ್ತದೆ. ಇತರರು ನಮ್ಮನ್ನು ಬಳಸಿ ಈಗಾಗಲೇ ಬೀಸಾಡಿದ್ದಾರೆ. ಅದೇ ಮುಂದುವರೆಯುತ್ತಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಅನ್ಯಾಯವಾದಾಗ ಹೋರಾಟ ಮಾಡುವ ಧೈರ್ಯ ಕುರುಬರಲ್ಲಿ ಯಾವಾಗ ಬರುತ್ತದೆ ಎನ್ನುವುದು ತಿಳಿಯುತ್ತಿಲ್ಲ. ಹಿರಿಯರಿಂದಿಡಿದು ಕಿರಿಯರವರೆಗೆ ಹಾಗೆಯೇ ಇದ್ದರೆ ದೌರ್ಜನ್ಯ ತಪ್ಪಿದ್ದಲ್ಲ. ಯಾವಾಗ ಎಚ್ಚರಗೊಳ್ಳುವರೋ ತಿಳಿಯದಾಗಿದೆ.

About The Author