ಶಹಾಪುರ,
ಸೋಮವಾರ ಬೆಳಿಗ್ಗೆ 3 ಗಂ.ಸುಮಾರಿಗೆ
ತಾಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ಬಲಿಯಾಗಿದ್ದ ಕುರಿಗಾರ ಯುವಕ ಗೋವಿಂದಪ್ಪನ ಸಾವಿನ ಸುದ್ದಿ ತಿಳಿದ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕುರುಗಾಹಿ ಕುಟುಂಬದ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಆತ್ಮಸ್ಥೈರ್ಯ ತುಂಬಿ ಕುರಿಗಾಹಿ ಪತ್ನಿಗೆ ವೈಯಕ್ತಿಕ ೫೦ ಸಾವಿರ ರೂ. ಧನಸಹಾಯ ನೀಡಿದರು.
ಅಧಿಕಾರಿಗಳಿಗೆ ಮಾತನಾಡಿ ವಾರದೊಳಗೆ ಪ್ರಕೃತಿ ವಿಕೋಪದಡಿ ಸರಕಾರದಿಂದ ೫ ಲಕ್ಷ ರೂ ಪರಿಹಾರದ ಚೆಕ್ ನೀಡಲಾಗುತ್ತದೆ ಎಂದು ತಿಳಿಸಿದರು. ಪ್ರತಿ ಕುರಿಗೆ ನಾಲ್ಕು ಸಾವಿರ ಮಂಜೂರಿ ಮಾಡಲಾಗುತ್ತದೆ, ವಿಶೇಷ ಸಹಾಯದ ಬಗ್ಗೆಯೂ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
Post Views: 89