ಖರ್ಗೆ ಕುಟುಂಬದ ಬೆನ್ನೆಲುಬಾಗಿ ನಿಂತ ರಾಧಾಕೃಷ್ಣರವರಿಗೆ ಒಲಿಯುವುದೇ ಸಂಸದ ಸ್ಥಾನ !

ಶಹಾಪುರ : ಆರ್ ಕೆ ಎಂದೇ ಪ್ರಸಿದ್ಧಿಯಾದ ರಾಧಾಕೃಷ್ಣರವರು ಇಂದು ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಕಲಬುರ್ಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಖರ್ಗೆ ಕುಟುಂಬದ ಹೊರತು ಪಡಿಸಿ ಕಣಕ್ಕೆ ಇಳಿದಿದ್ದಾರೆ. ಗುರುಮಿಟ್ಕಲ್ ಕ್ಷೇತ್ರದಿಂದ ಸತತ ಏಳು ಬಾರಿ ಶಾಸಕರಾಗಿ ಮತ್ತು ಮೂರು ಸಂಸದರಾಗಿ ಆಯ್ಕೆಯಾದ ಪ್ರಸ್ತುತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆಯವರ ಸಾಧನೆ ಬಹುದೊಡ್ಡದು.ಹಲವು ಅಭಿವೃದ್ಧಿ ಕಾರ್ಯಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಹಾಗೆ ಮಾಡಿದ್ದಾರೆ. ಶಾಸಕರಾಗಿ ಸಚಿವರಾಗಿ ಸಂಸದರಾಗಿ ಅವರು ಮಾಡಿದ ಸಾಧನೆಯ ಹಿಂದೆ ಇರುವ ಇನ್ನೊಂದು ಹೆಸರೇ ರಾಧಾಕೃಷ್ಣ.

ಇಂದಿನ ದಿನಮಾನಗಳಲ್ಲಿ ಕೆಲವೇ ವರ್ಷಗಳ ನಂತರ ಬೇಸರ ಬಂದು ಬಿಟ್ಟು ಹೋಗುವ ಜನರಿರುವಾಗ ರಾಧಾಕೃಷ್ಣ ಅವರು ಖರ್ಗೆ ಕುಟುಂಬದ ಬೆನ್ನೆಲುಬಾಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದ ಮಾತುಗಳನ್ನು ಚಾಚು ತಪ್ಪದೇ ಪಾಲಿಸುತ್ತಾ ಬಂದಿರುವುದು ಸಣ್ಣ ವಿಷಯವೇನಲ್ಲ. 50 ವರ್ಷದ ರಾಜಕೀಯ ಜೀವನದಲ್ಲಿ ಹಾಗೂ ಸಂಸತ್ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಿಕಾರ್ಜುನ್ ಖರ್ಗೆಯವರ ಹಿಂದೆ ರಾಧಾಕೃಷ್ಣರವರ ದುಡಿತದ ಕೈಗಳಿವೆ ಎಂದರೆ ತಪ್ಪಾಗಲಾರದು.

ಐವತ್ತು ವರ್ಷಗಳು ಕಳೆದರೂ ಖರ್ಗೆ ಕುಟುಂಬದ ಏಳಿಗೆಗಾಗಿ ಶ್ರಮಿಸಿದ ರಾಧಾಕೃಷ್ಣರವರು ಎಂದೂ ಅಧಿಕಾರದ ಆಸೆ ಬಯಸಲಿಲ್ಲ.ಕಲಬುರ್ಗಿಯ ಅಭಿವೃದ್ಧಿಯ ಹಿಂದೆ ರಾಧಾಕೃಷ್ಣರವರ ಸಾಧನೆ ಇದೆ.ಅದಕ್ಕಾಗಿಯೇ ಇಂದು ಕಲಬುರ್ಗಿ ಕ್ಷೇತ್ರದಿಂದ ಸಂಸದರಾಗುವ ಆಸೆ ಒದಗಿ ಬಂದಿದೆ. ರಾಧಾಕೃಷ್ಣರವರಿಗೆ ಎಷ್ಟೋ ವರ್ಷಗಳ ನಂತರ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಟ್ಟಿದೆ. ಮೊದಲ ಬಾರಿಗೆ ಸಂಸದರಾಗಿ ದೆಹಲಿಯ ಕಡೆ ಹೋಗುವರೇ ಎನ್ನುವುದು ಕ್ಷೇತ್ರದ ಮತದಾರರ ಮೇಲೆ ನಿಂತಿದೆ.

“ಕಲಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಕಲಬುರ್ಗಿ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ 
ಮತ್ತು ವೈಧ್ಸಕೀಯ ಸಚಿವರಾದ ಶರಣಪ್ರಕಾಶ್ ಪಾಟೀಲರು ಪಕ್ಷದ ಅಭ್ಯರ್ಥಿಯಾದ ರಾಧಾಕೃಷ್ಣರವರ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ.ಕಲಬುರ್ಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ತವರು ಕ್ಷೇತ್ರವಾಗಿದ್ದು, ಸೌಮ್ಯ ಸ್ವಭಾವದ ಅಭಿವೃದ್ಧಿ ಚಿಂತಕರಾದ ರಾಧಾಕೃಷ್ಣರವರು ಖಚಿತವಾಗಿ ಗೆಲ್ಲುತ್ತಾರೆ”
ಡಾ.ಕೃಷ್ಣಮೂರ್ತಿ
ಅಧ್ಯಕ್ಷರು
ಕೆಪಿಸಿಸಿ ವೈಧ್ಯಕೀಯ ಘಟಕ ಯಾದಗಿರಿ ಜಿಲ್ಲೆ.

About The Author