ಏಪ್ರಿಲ್ 27ರಂದು ಬಿಜೆಪಿಯಿಂದ ರೋಡ್ ಶೋ : ಬಸವರಾಜ ಪಾಟೀಲ್ ಯತ್ನಾಳ್ ಆಗಮನ 

ಶಹಾಪುರ : ಏಪ್ರಿಲ್ 7ರಂದು ನಡೆಯುವ ಲೋಕಸಭಾ ಚುನಾವಣೆ ನಿಮಿತ್ತ ಬಿಜೆಪಿ ಶಾಸಕರಾದ ಬಸ್ಸನಗೌಡ ಪಾಟೀಲ್ ಯತ್ನಾಳ್ ಶಹಪುರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಯುವ ಮುಖಂಡರಾದ ಕರಣ್ ಸುಬೇದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶನಿವಾರ ಆಗಮಿಸಲಿರುವ ಬಸವರಾಜ ಪಾಟೀಲ್ ಯತ್ನಾಳ್ ರವರು ನಗರದಲ್ಲಿ  ಹಮ್ಮಿಕೊಂಡ ರೋಡ್ ಶೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಯಚೂರು ಲೋಕಸಭಾ ಅಭ್ಯರ್ಥಿಯಾದ ಅಂಬರೇಶ ನಾಯಕ ಪರ ಮತ ಪ್ರಚಾರ ಕೈಗೊಳ್ಳಲಿದ್ದು, ಬಿಜೆಪಿಯ ಜಿಲ್ಲಾಧ್ಯಕ್ಷರಾದ ಅಮಿನ್ ರೆಡ್ಡಿ ಯಾಳಗಿ,ಬಸವರಾಜ್ ಪಾಟೀಲ್ ವಿಭೂತಿಹಳ್ಳಿ, ಡಾ. ಚಂದ್ರಶೇಖರ ಸುಬೇದಾರ್ ಹಾಗೂ ಜಿಲ್ಲಾ ಮುಖಂಡರು ಸೇರಿದಂತೆ ತಾಲೂಕಿನ ಗ್ರಾಮೀಣ ಜಿಲ್ಲಾ ಹಾಗೂ ಮಂಡಲದ ಸರ್ವ ಬಿಜೆಪಿ ನಾಯಕರು, ಮುಖಂಡರು, ರಾಯಚೂರು ಲೋಕಸಭಾ ಕ್ಷೇತ್ರದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರ. ಕಾರ್ಯಕ್ರಮ ಯಶಸ್ವಿಗೊಳಿಸಲು ಬೃಹತ್ ಪ್ರಮಾಣದಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *