ಗಬ್ಬೂರು ಇತಿಹಾಸ ರಚನೆಯ ಕ್ಷೇತ್ರಕಾರ್ಯ ಪ್ರಾರಂಭ

ಗಬ್ಬೂರು ಎಪ್ರಿಲ್ 16,2024 : ಗಬ್ಬೂರಿನ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮಹತ್ವಾಕಾಂಕ್ಷೆಯ ಯೋಜನೆಯಾದ ‘ ಗಬ್ಬೂರ ಇತಿಹಾಸ’ ರಚನೆಯ ಕಾರ್ಯವು ಎಪ್ರಿಲ್ 16 ರಿಂದ ಅಧಿಕೃತವಾಗಿ ಪ್ರಾರಂಭಗೊಂಡಿತು.ಗಬ್ಬೂರಿನ ಇತಿಹಾಸ ರಚನೆಯ ಜವಾಬ್ದಾರಿಯನ್ನು ಹೊತ್ತಿರುವ ರಾಯಚೂರು ಜಿಲ್ಲೆಯ ಖ್ಯಾತ ಇತಿಹಾಸಕಾರ,ಸಂಶೋಧಕ ಡಾ. ಚನ್ನಬಸವ ಮಲ್ಕಂದಿನ್ನಿಯವರು ತಮ್ಮ ತಂಡದೊಂದಿಗೆ ಗಬ್ಬೂರಿನ ಇತಿಹಾಸ ರಚನೆಯ ಪೂರ್ವಭಾವಿ ಪ್ರಕ್ರಿಯೆಯಾದ ಕ್ಷೇತ್ರಕಾರ್ಯವನ್ನು ಪ್ರಾರಂಭಿಸಿದರು.

ಗಬ್ಬೂರಿನಲ್ಲಿ 35ಕ್ಕೂ ಹೆಚ್ಚು ಶಾಸನಗಳಿದ್ದು ಕೆಲವು ಶಾಸನಗಳನ್ನು ಹೈದರಾಬಾದಿನ ಸಾಲರ್ ಜಂಗ್ ಮ್ಯೂಸಿಯಂನಲ್ಲಿಡಲಾಗಿದೆ.ಗಣಪತಿ,ಸುಬ್ರಹ್ಮಣ್ಯ,ಜಿನ ಶಿಲ್ಪ ಮೊದಲಾದ ಮೂರ್ತಿ,ವಿಗ್ರಹಗಳನ್ನು ರಾಯಚೂರಿನ ನವರಂಗ ದರವಾಜಿನಲ್ಲಿಡಲಾಗಿದೆ.ಗಬ್ಬೂರಿನಲ್ಲಿ ನೂರಾರು ದೇವಸ್ಥಾನಗಳು,ಹತ್ತಾರು ಐತಿಹಾಸಿಕ ಸ್ಮಾರಕಗಳು ಮತ್ತು ವೀರಗಲ್ಲುಗಳಿವೆ.ಡಾ.ಚನ್ನಬಸವ ವಲ್ಕಂದಿನ್ನಿಯವರು ಇದುವರೆಗೆ ಓದಿರದ ಗಬ್ಬೂರಿನ ಶಾಸನಗಳನ್ನು ಓದುವುದರ ಮೂಲಕ ಆಕರಗ್ರಂಥವಾಗುವ ಮಾದರಿಯಲ್ಲಿ ಗಬ್ಬೂರಿನ ಇತಿಹಾಸ ರಚಿಸುವಲ್ಲಿ ಪರಿಶ್ರಮಿಸುತ್ತಿದ್ದಾರೆ.ಇಂದು ಬೆಳಿಗ್ಗೆ ಕ್ಷೇತ್ರಕಾರ್ಯ ಪ್ರಾರಂಭಿಸುವ ಪೂರ್ವದಲ್ಲಿ ಡಾ.ಚನ್ನಬಸವ ವಲ್ಕಂದಿನ್ನಿಯವರು ಮಹಾಶೈವ ಧರ್ಮಪೀಠದಲ್ಲಿ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರೊಂದಿಗೆ ಕಾರ್ಯಯೋಜನೆಯ ರೂಪುರೇಷೆಯ ಬಗ್ಗೆ ಚರ್ಚಿಸಿದರು.

ಚಿತ್ರದಲ್ಲಿ ಬೀರಪ್ಪ ದೇವರ ಗುಡಿಯಲ್ಲಿ ಗಬ್ಬೂರು ಇತಿಹಾಸ ರಚನಾ ತಂಡದ ಸದಸ್ಯರುಗಳನ್ನು ಕಾಣಬಹುದು.ಡಾ.ಚನ್ನಬಸವ ಮಲ್ಕಂದಿನ್ನಿಯವರ ಜೊತೆಗಿದ್ದಾರೆ ಸಾಹಿತಿ- ಪತ್ರಕರ್ತ,ಸಂವಿಧಾನ ತತ್ತ್ವ ಪ್ರಸಾರಕ ಬಸವರಾಜ ಬ್ಯಾಗವಾಟ,ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ ಮತ್ತು ರಮೇಶ ಖಾನಾಪುರ,ಗಬ್ಬೂರು ಗ್ರಾಮ ಪಂಚಾಯತಿಯ ಕರವಸೂಲಿಗಾರ ಮಂಜುನಾಥ ಕರಿಗಾರ ಮತ್ತು ಬೀರಪ್ಪ ದೇವರ ಪೂಜಾರಿ ಕಂಡೆಪ್ಪ ಪೂಜಾರಿ ಇದ್ದರು.

About The Author