ಯಕ್ಷಿಂತಿ ಗ್ರಾಮದಲ್ಲಿ ಬಾಬಾಸಾಹೇಬರ 133ನೇ ಜಯಂತಿ ಆಚರಣೆ

ವಡಗೇರಾ : ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯ ಒದಗಿಸಲು ಹೋರಾಟ ನಡೆಸಿದ ದೇಶದ ಮಹಾನ್ ನಾಯಕ ಡಾ. ಅಂಬೇಡ್ಕರ ಅವರು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಘಟಕ ರಾಜ್ಯಾಧ್ಯಕ್ಷರಾದ ನಾಗರತ್ನ  ಪಾಟೀಲ್ ಹೇಳಿದರು. ತಾಲೂಕಿನ ಯಕ್ಷಿಂತಿ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.ಬಾಬಾಸಾಹೇಬರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ.ದೇಶಕ್ಕೆ ಶ್ರೇಷ್ಠ ಸಂವಿಧಾನ ನೀಡಿದ ಮಹಾನ್ ನಾಯಕರು ಎಂದರು.
ಈ ಸಂದರ್ಭದಲ್ಲಿ ಮಲಕಯ್ಯ ಸ್ವಾಮಿ, ಮಹಾದೇವಣ್ಣ ಪೂಜಾರಿ,ನಿಂಗಣ್ಣ ಕರಡಿ,ಜ್ಯೋತಿ  ಹಯ್ಯಾಳ ಬಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನರ್ಮದ ರಾಕೇಶ, ಮಲ್ಲಿಕಾರ್ಜುನ ಸಾಹು, ಡಾ.ಶರಿಫ್ ಬೆಳಿಗೇರಿ ಹಯ್ಯಾಳ ಭಾಷಸಾಬ್, ಮುದುಕಪ್ಪ ಗೌಡೂರ, ಮಾನಯ್ಯ ಸಗರ, ಹಂಪಣ್ಣ ಸಾಹು ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *