ವಿಶ್ವೇಶ್ವರಶಿವನ ಅನುಗ್ರಹ ,ತಾತ ಆದರು ರಂಗಪ್ಪ ಗಾಲಿ

ಗಬ್ಬೂರು,ಮಾರ್ಚ್ 27,2024 : ಸಂತಾನೇಶ್ವರ ಶಿವ’ ನೆಂದು ಪ್ರಸಿದ್ಧನಾಗಿರುವ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನು ಮಹಾಶೈವ ಧರ್ಮಪೀಠದ ನಿಷ್ಠಾವಂತ ಭಕ್ತರಾಗಿರುವ ರಂಗಪ್ಪ ಗಾಲಿಯವರಿಗೆ ಮೊಮ್ಮಗಳನ್ನು ಕರುಣಿಸುವ ಮೂಲಕ ತನ್ನ ಭಕ್ತವತ್ಸಲಲೀಲೆ ಮೆರೆದಿದ್ದಾನೆ.ಮಹಾಶೈವ ಧರ್ಮಪೀಠದ ಮೂಲಕಾರ್ಯಕರ್ತರುಗಳಲ್ಲಿ ಒಬ್ಬರಾಗಿರುವ ರಘುನಂದನ್ ಪೂಜಾರಿಯವರ ಆತ್ಮೀಯರಾಗಿರುವ ಪ್ರಸ್ತುತ ಹೇಮನಾಳ ಗ್ರಾಮ ಪಂಚಾಯತಿಯ ಪ್ರಭಾರಿ ಪಿಡಿಒ ಹುದ್ದೆಯಲ್ಲಿರುವ ರಂಗಪ್ಪ ಗಾಲಿ ಅವರ ಮಗಳು ಗಿರಿಜಾಳಿಗೆ ಮಕ್ಕಳಾಗದೆ ಇದ್ದುದರಿಂದ ಅಳಿಯ ಶಿವಶಂಕರ ಮತ್ತು ಮಗಳು ಗಿರಿಜಾರ ಸಮೇತ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಸಂತಾನಭಾಗ್ಯ ಕರುಣಿಸಲು ಕೋರಿದ್ದರು.ಗಿರಿಜಾ ಶಿವಶಂಕರ ದಂಪತಿಗಳ ಮದುವೆ 2018 ರ ಮೇ 9 ರಂದು ನಡೆದಿತ್ತು.ಮಕ್ಕಳಾಗಲಿ ಎಂದು ಅಲ್ಲಿ ಇಲ್ಲಿ ಸುತ್ತಿ ರಘುನಂದನ್ ಪೂಜಾರಿಯವರ ಸಲಹೆಯಂತೆ ಮಹಾಶೈವಧರ್ಮಪೀಠಕ್ಕೆ ಆಗಮಿಸಿದ್ದರು.

ಮಹಾಶೈವ ಧರ್ಮಪೀಠದಲ್ಲಿ 02.07.2023 ರಂದು ನಡೆದ 52 ನೆಯ ‘ ಶಿವೋಪಶಮನ ಕಾರ್ಯ’ ಕ್ಕೆ ಸಂತಾನಾರ್ಥಿಗಳಾಗಿ ಬಂದಿದ್ದ ಶಿವಶಂಕರ ಗಿರಿಜಾ ದಂಪತಿಗಳಿಗೆ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ವಿಶ್ವೇಶ್ವರಾನುಗ್ರಹವನ್ನು ಕರುಣಿಸಿದ್ದರು.ಗಿರಿಜಾ 27.03.2024 ರಂದು ಅರಕೇರಾದ ಸಮುದಾಯ ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ರಂಗಪ್ಪ ಗಾಲಿಯವರು ಪೀಠಾಧ್ಯಕ್ಷರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ತನ್ನ ಭಕ್ತಿಪೂರ್ವಕ ನಮನಗಳನ್ನು ಸಲ್ಲಿಸಿದರು.

Leave a Reply

Your email address will not be published. Required fields are marked *