ಸಾಂಸ್ಕೃತಿಕ ಚಿಂತಕ ಮುಕ್ಕಣ್ಣ ಕರಿಗಾರ ಅಭಿನಂದನ ಗ್ರಂಥಕ್ಕೆ ಲೇಖನಗಳ ಆಹ್ವಾನ

ರಾಯಚೂರ : ನಾಡಿನ ಸಾಂಸ್ಕೃತಿಕ ಚಿಂತಕರು ಹಾಗೂ ಖ್ಯಾತ ಬರಹಗಾರರಾದ ಮುಕ್ಕಣ್ಣ ಕರಿಗಾರ ಅವರ 55 ನೇ ಹುಟ್ಟುಹಬ್ಬದ ನಿಮಿತ್ಯವಾಗಿ ಅಭಿನಂದನ ಗ್ರಂಥ ಹೊರತರಲು ನಿರ್ಧರಿಸಲಾಗಿದೆ,ಆದ್ದರಿಂದ ಮುಕ್ಕಣ್ಣ ಕರಿಗಾರ ಅವರ ವ್ಯಕ್ತಿತ್ವ,ಬದುಕು – ಬರಹ ಅವರ ಸಾಹಿತ್ಯ ಕೃಷಿ,ಅವರೊಂದಿಗಿನ ಒಡನಾಟದ ಕುರಿತು ಮೂರು ಪುಟಕ್ಕೆ ಮೀರದಂತೆ ಈ ಕೆಳಕಂಡ ಈ ಮೇಲ್ಗೆ ಕಳಿಸಿಕೊಡಲು ಕೋರಲಾಗಿದೆ.

ಜೂನ್ 5 ರಂದು ಮುಕಣ್ಣ ಕರಿಗಾರ ಅವರ 55ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಅಭಿನಂದನ ಗ್ರಂಥ ಬಿಡುಗಡೆ ಗೊಳ್ಳಲಿದೆ ಎಂದು ಸಂಪಾದಕರಾದ ಬಸವರಾಜ ಶಿಣ್ಣೂರ ಪ್ರಕಟಣೆಗೆ ತಿಳಿಸಿದ್ದಾರೆ.ಲೇಖಕರು ನುಡಿ ತತ್ರಾಂಶದಲ್ಲಿ ಟೈಪ್ ಮಾಡಿದ ಬರಹಗಳನ್ನು btshinnur@gmail.com ಗೆ ಮೇಲ್ ಮಾಡಬಹುದು,ಅಥವಾ 9535958125 ಗೆ ಟೈಪ್ ಮಾಡಿ ವಾಟ್ಸಪ್ಪ್ ಗೆ ಮೆಸೇಜ್ ಕಳಿಸಬಹುದು,ಜೊತೆಗೆ ಲೇಖಕರ ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಿರಬೇಕು,ಲೇಖನಗಳನ್ನು ಸ್ವೀಕರಿಸಲು ಏಪ್ರಿಲ್ 5 ಕೊನೆಯ ದಿನಾಂಕವಾಗಿರುತ್ತದೆ,ಲೇಖನಗಳ ಆಯ್ಕೆ ಬಗ್ಗೆ ಸಂಪಾದಕರ ತೀರ್ಮಾನವೆ ಅಂತಿಮ ನಿರ್ಧಾರವಾಗಿರುತ್ತದೆ.

ಪಿಡಿಎಫ್ ಅಥವಾ ಫೋಟೋ ಮಾದರಿಯಲ್ಲಿ ಇರುವ ಲೇಖನಗಳನ್ನು ಸ್ವೀಕರಿಸುವುದಿಲ್ಲ,ಕಡ್ಡಾಯವಾಗಿ ಡಾಕ್ಯುಮೆಂಟ್ ಫಾರ್ಮೆಟ್ ನಲ್ಲಿ ಕಳಿಸಬಹುದು,ಹೆಚ್ಚಿನ ಮಾಹಿತಿಗಾಗಿ,9902965535,9060737896 ಈ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

About The Author