ಮಹಾಶೈವ ಧರ್ಮಪೀಠದಲ್ಲಿ 77 ನೆಯ ‘ ಶಿವೋಪಶಮನ ಕಾರ್ಯ 

ರಾಯಚೂರು: ಜಿಲ್ಲೆಯ‌ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಜನೆವರಿ 21 ರ ರವಿವಾರದಂದು 77 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು‌ ಕರುಣಿಸಿದರು.

ಇಂದಿನ ಶಿವೋಪಶಮನ ಕಾರ್ಯದಲ್ಲಿಯೂ ಸಹ ಮದುವೆಯಾಗದ ತರುಣ ತರುಣಿಯರುಗಳೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮದುವೆಗಾಗಿ ಹರಸಲು ಪ್ರಾರ್ಥಿಸಿದ್ದು ವಿಶೇಷವಾಗಿತ್ತು.ಶಿವ ವಿಶ್ವೇಶ್ವರ ಸನ್ನಿಧಿಗೆ ಬಂದು ಬೇಡುವ ವಿವಾಹಾರ್ಥಿಗಳಿಗೆ ಮಹಾಶೈವ ಧರ್ಮಪೀಠಕ್ಕೆ ಬಂದ ವಾರೊಪ್ಪತ್ತಿನಲ್ಲಿಯೇ ಕಂಕಣಬಲ ಕೂಡಿ ಬರುತ್ತಿದೆ.ಮದುವೆಯಾಗಿ ಹದಿನೆಂಟು ಇಪ್ಪತ್ತು ವರ್ಷಗಳಾಗಿಯೂ ಮಕ್ಕಳಾಗದವರು ವಿಶ್ವೇಶ್ವರ ಶಿವನ ಅನುಗ್ರಹದಿಂದ ಸಂತಾನಭಾಗ್ಯ ಪಡೆಯುತ್ತಿದ್ದಾರೆ.ಉದ್ಯೋಗಾರ್ಥಿಗಳು,ಅನಾರೋಗ್ಯದಿಂದ ಬಳಲುತ್ತಿರುವವರು,ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರು,ಋತುಚಕ್ರದ ಸಮಸ್ಯೆ ಇರುವವರು,ಬಡತನ ದಾರಿದ್ರ್ಯದ ಬವಣೆಗೆ ಒಳಗಾದವರು ಸೇರಿದಂತೆ ನಾನಾ ಬಗೆಯ ಸಮಸ್ಯೆಗಳಲ್ಲಿ ಸಿಕ್ಕು ಪರಿತಪಿಸುತ್ತಿರುವವರು ಮಹಾಶೈವ ಧರ್ಮಪೀಠದ ವಿಶ್ವೇಶ್ವರನ ಸನ್ನಿಧಿಯಲ್ಲಿ ಸಮಸ್ಯೆ- ಸಂಕಷ್ಟಗಳಿಂದ ಮುಕ್ತರಾಗುತ್ತಿದ್ದಾರೆ.ಶ್ರೀಕ್ಷೇತ್ರ ಕೈಲಾಸದಲ್ಲಿ ವಿಶ್ವನಿಯಾಮಕನಾದ ಶಿವನು ವಿಶ್ವೇಶ್ವರ ನಾಮವನ್ನು ಧರಿಸಿ ನಿತ್ಯಪ್ರಸನ್ನತೆಯಿಂದ ಲೋಕೋದ್ಧಾರದ ಲೀಲೆಯನ್ನಾಡುತ್ತಿರುತ್ತಿರುವುದರಿಂದ ಮಹಾಶೈವ ಧರ್ಮಪೀಠವನ್ನು ಪ್ರವೇಶಿಸಿದಾಕ್ಷಣವೇ ಭಕ್ತರಲ್ಲಿ ಭರವಸೆಯ ಭಾವ ಮೂಡುತ್ತದೆಯಾದ್ದರಿಂದ ದೂರದೂರದ ಸ್ಥಳಗಳಿಂದ ಜನರು ವಿಶ್ವೇಶ್ವರನ ಕಾರುಣ್ಯಕಟಾಕ್ಷವನ್ನರಸಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸುತ್ತಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಮೂಲಕಾರ್ಯಕರ್ತರಾದ ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳು ಮತ್ತು ಭಕ್ತಪ್ರಮುಖರುಗಳಾದ ಉಮೇಶ ಸಾಹುಕಾರ ಅರಷಣಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ, ವಿರುಪಾಕ್ಷಪ್ಪ ಗೌಡ ಹೊನ್ನಟಗಿ,ಸಿದ್ಧರಾಮಯ್ಯ ಸ್ವಾಮಿ ಹಳ್ಳಿ, ಪತ್ರಕರ್ತರುಗಳಾದ ಏಳುಬಾವೆಪ್ಪ ಗೌಡ,ರಮೇಶ ಖಾನಾಪುರ, ಮಲ್ಲಯ್ಯ ಹಿರೇಮಠ ಶಹಾಪುರ,ಶಿವಪ್ಪ ಅಮರಾಪುರ,ಬೂದೆಪ್ಪ ಹೋಟೆಲ್,ಮನೋಜ ಧರಣಿ,ಯಲ್ಲಪ್ಪ ಕರಿಗಾರ,ಬೆಟ್ಟಪ್ಪ ಗದಾರ,ಪರಶುರಾಮ ಜಡೇರ್ ,ಸಿದ್ದಣ್ಣ ಪೂಜಾರಿ ಚಾಗಬಾವಿ,ಬೂದಿಬಸವ ಶಾಂತಪ್ಪ ಕರಿಗಾರ ಮತ್ತು ಶಿವಕುಮಾರ ವಸ್ತಾರ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author