ಸೈದಾಪುರ ಗ್ರಾಮದಲ್ಲಿ ಸಪ್ತ ಪಲ್ಲಕ್ಕಿ ಸಂಗಮ ಜಾತ್ರೆ

ಶಹಾಪುರ : ತಾಲೂಕಿನ ಸುಕ್ಷೇತ್ರ ಸೈದಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷ ದಿನಾಂಕ  12/01/2024ರಂದು ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಾಗೂ ಶ್ರೀ ಮಾಳಿಂಗರಾಯ ದೇವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಲಿದೆ ಎಂದು ಮಾಳಿಂಗರಾಯರ ದೇವಸ್ಥಾನ ಸಮಿತಿ ಸೈದಾಪುರ ವತಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ದೇವಸ್ಥಾನದ ಕಮಿಟಿಯವರು ತಿಳಿಸಿದ್ದಾರೆ.

ಶ್ರೀ ಮಾಳಿಂಗರಾಯರೊಂದಿಗೆ ವಿವಿಧ ಗ್ರಾಮಗಳಿಂದ ಪಲ್ಲಕ್ಕಿಗಳೊಂದಿಗೆ ಸಪ್ತಪಲ್ಲಕ್ಕಿಗಳ ಸಂಗಮ ಕಾರ್ಯಕ್ರಮ ಜರುಗುವುದು. ಈ ಬೇಟಿ ನಂತರ ಪಲ್ಲಕ್ಕಿಗಳ ಭವ್ಯ ಡೊಳ್ಳು ವಾಲಗದೊಂದಿಗೆ ಮೆರವಣಿಗೆ ಜರುಗುವುದು.

ದಿನಾಂಕ 13/01/2024ರಂದು ಗ್ರಾಮೀಣ ಕ್ರೀಡಾಕೂಟ ಏರ್ಪಡಿಸಲಾಗಿದ್ದು, ಕ್ರೀಡೆಯಲ್ಲಿ ಕಲ್ಲು, ಗುಂಡು ,ಚೀಲದ ಭಾರ ಎತ್ತುವ ಮತ್ತು ಕುಸ್ತಿ ಪಂದ್ಯಾವಳಿಗಳನ್ನು ಏರ್ಪಡಿಸಲಾಗಿದೆ. ಪ್ರತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ 5ತೊಲಿ ಬೆಳ್ಳಿಯ ಕಡಗ ಹಾಕಿ ಅಭಿನಂದಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸ್ವಾಮಿಜೀಗಳು, ಪಟ್ಟದ ಪೂಜಾರಿಗಳು, ರಾಜಕೀಯ ಮುಖಂಡರು ರೈತ ಮುಖಂಡರು, ಹಲವಾರು ಸಮುದಾಯದ ಮುಖಂಡರು, ಗಣ್ಯರು,ಭಾಗವಹಿಸಲಿದ್ದಾರೆ.
ಈ ಸಪ್ತ ಸಂಗಮ ಜಾತ್ರೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಮಾಳಿಂಗರಾಯರ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು.

About The Author