ಗಬ್ಬೂರು : ಅಧಿಕಾರಿಗಳ ನಿರ್ಲಕ್ಷ : ಚರಂಡಿ ನೀರಿನಿಂದ ತುಂಬಿ ತುಳುಕುತ್ತಿರುವ ಏಳು ಬಾವಿ(ಕಲ್ಯಾಣಿ) : ಭಾವಿಯ ನೀರು ದೇವರ ಪೂಜೆಗೆ ಅಲಭ್ಯ

ರಾಯಚೂರು : ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರು ದೇಗುಲಗಳ ಐತಿಹಾಸಿಕ ಕೇಂದ್ರ.ಗ್ರಾಮದ ಏಳುಬಾವಿ (ಕಲ್ಯಾಣಿ) ಎಂದು ಪ್ರಸಿದ್ಧವಾದ ಭಾವಿ ಇದು. ಐತಿಹಾಸಿಕ ಕಲ್ಯಾಣಿ ಎಂದು ಕರೆಯಲ್ಪಟ್ಟಿದೆ. ಈ ಕಲ್ಯಾಣಿಯಲ್ಲಿ ಏಳು ಬಾವಿಗಳಿಗೆ ಎನ್ನುವ ಐತಿಹ್ಯವಿದೆ.ಈ ಕಲ್ಯಾಣಿ ದಡದ ಸುತ್ತಲೂ ದೇವಸ್ಥಾನಗಳಿವೆ. ವೆಂಕಟೇಶ್ವರ ದೇವಸ್ಥಾನ, ಬಸವೇಶ್ವರ ದೇವಸ್ಥಾನ ಸೇರಿದಂತೆ ಇತರ ಸಣ್ಣಪುಟ್ಟ ದೇವಸ್ಥಾನಗಳಿವೆ. ಇಲ್ಲಿನ ದೇವರಿಗೆ ಈ ಭಾವಿಯಿಂದಲೇ ಅರ್ಚನೆ ಗಂಗಾಸ್ನಾನ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ಈ ಭಾವಿಯ ನೀರನ್ನು ಉಪಯೋಗಿಸಲಾಗುತ್ತಿದೆ.

ಆದರೆ ಕೆಲವು ದಿನಗಳ ಹಿಂದೆ ಈ ಭಾವಿಗೆ ಗ್ರಾಮಸ್ಥರು ಬಳಕೆ ಮಾಡುವ ಚರಂಡಿಯ ನೀರು ಯಥೇಚ್ಛವಾಗಿ ಹರಿದು ಬರುತ್ತಿರುವುದರಿಂದ ದೇವರ ಪೂಜೆಗೆ ಯೋಗ್ಯವಲ್ಲವಾಗಿ ಚರಂಡಿ ನೀರಾಗಿ ಮಾರ್ಪಟ್ಟಿವೆ. ಇದರಿಂದ ಗ್ರಾಮಸ್ಥರು ಆಶ್ಚರ್ಯ ಚಕಿತರಾಗಿದ್ದಾರೆ.

ಚರಂಡಿ ನೀರಿನಿಂದ ತುಂಬಿರುವ ಏಳು (ಕಲ್ಯಾಣಿ) ಭಾವಿ

ಈ ಕಲ್ಯಾಣಿ (ಭಾವಿ) ಎರಡರಿಂದ ಮೂರು ನೀರಿನ ಜಲೆಗಳಿವೆ ಎಂದು ಹೇಳಲಾಗಿದ್ದು, ಭಾವಿಯ ನೀರು ಏಕಾಏಕಿ ತುಂಬಿ ತುಳುಕುತ್ತಿದೆ. ಚರಂಡಿ ನೀರಿನಿಂದ ತುಂಬಿದ ಈ ಭಾವಿ (ಕಲ್ಯಾಣಿ)ಯ ನೀರು ದುರ್ನಾಥ ಒಡೆಯುತ್ತಿವೆ. ಪೂಜೆಗೆ ಮಾತ್ರವಲ್ಲ ಬಳಕೆಗೂ ಯೋಗ್ಯವಲ್ಲದ ರೀತಿಯಲ್ಲಿ ಮಾರ್ಪಟ್ಟಿವೆ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಂದಲೂ ಬೇಸರ ವ್ಯಕ್ತಪಡಿಸಿದ್ದಾರೆ.

ಗಬ್ಬೂರು ಬಬ್ರುವಾಹನನ ಪಟ್ಟಣ. ಇದಕ್ಕೆ ಮಣಿಪುರ ಎಂದು ಕರೆಯಲಾಗುತ್ತಿತ್ತು ಎನ್ನುವ ಇತಿಹಾಸವಿದೆ. ಸಾವಿರಾರು ದೇವಸ್ಥಾನಗಳು, ಬಾವಿಗಳು, ಅಗಸೆಗಳು ಹೊಂದಿದ್ದು ಇಲ್ಲಿಯೂ ಕೂಡ ಹಂಪೆಯಲ್ಲಿ ಎಷ್ಟು ದೇವಸ್ಥಾನಗಳಿವೆಯೋ ಇಲ್ಲಿಯೂ ಅಷ್ಟೇ
ದೇವಸ್ಥಾನಗಳಿವೆ ಎಂದು ಹೇಳಲಾಗುತ್ತಿದೆ. ಗ್ರಾಮಸ್ಥರು ಪುರಾತನ ಕಾಲದ ಇಂತಹ ಸ್ಮಾರಕಗಳನ್ನು ಉಳಿಸಿಕೊಂಡು ಬರಬೇಕಿದೆ.

ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮೀಣ ಆಡಳಿತ, ತಾಲೂಕು ಆಡಳಿತ, ಜಿಲ್ಲಾಮಟ್ಟದ ಆಡಳಿತ ಅಧಿಕಾರಿಗಳು ಗಮನಹರಿಸಬೇಕಿದೆ. ಚರಂಡಿಯ ನೀರು ಏಳು ಬಾವಿಗೆ ಹೇಗೆ ಬರುತ್ತವೆ ಎನ್ನುವುದರ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಅಧಿಕಾರಿಗಳು ಕ್ರಮವಹಿಸುತ್ತಾರೆಯೊ ಕಾದು ನೋಡಬೇಕಿದೆ.