ಅಗಸ್ತ್ಯ ಪ್ರತಿಷ್ಠಾನದದಿಂದ ಉಚಿತ ನೋಟ್ ಬುಕ್ ವಿತರಣೆ

ಶಹಾಪುರ:ತಾಲೂಕಿನ ಸಗರದ ಗ್ರಾಮದಲ್ಲಿ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮತ್ತು ಕಲ್ಪತರು ಧಿಕ್ಷಣ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಬೇಸಿಗೆ ತರಬೇತಿ ಸಮಾರೋಪ ಸಮಾರಂಭ ಶಿಬಿರದಲ್ಲಿ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್, ಕಂಪಾಕ್ಸ,ಪೆನ್ನು ಸೇರಿದಂತೆ ಇತರ ವಸ್ತುಗಳನ್ನು ನೀಡಲಾಯಿತು.ಸಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶರಣಮ್ಮ ಶಂಕರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಬೂದೆಪ್ಪ, ಮುಖ್ಯಗುರುಗಳಾದ ಶಿವರಾಜ, ಪ್ರತಿಷ್ಠಾನದ ಸಂಚಾರಿ ಮಾರ್ಗದರ್ಶಕರಾದ ವೀರೇಶ ಪತ್ತಾರ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು. ತಿಪ್ಪಣ್ಣ ತಳವಾರ ನಿರೂಪಿಸಿದರು.ಅಂಬ್ರಮ್ಮ ವಂದಿಸಿದರು.

Leave a Reply

Your email address will not be published. Required fields are marked *