ಶಹಾಪೂರ,
ಹತ್ತಿಗೂಡೂರು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಳುವಳಿಸುತ್ತಿದ್ದು ಆಡಳಿತ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿಗಳು ಕ್ಯಾರಿ ಎನ್ನುತ್ತಿಲ್ಲ. ಈ ಸಮಸ್ಯೆ ಹೀಗೆ ಮುಂದುವರೆದರೆ ಗ್ರಾಮ ಪಂಚಾಯಿತಿಗೆ ಖಲಿ ಕೊಡಗಳನ್ನು ಪ್ರದರ್ಶಿಸಿ ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಅಧ್ಯಕ್ಷರಾದ ಶರಣರೆಡ್ಡಿ ಹತ್ತಿಗೂಡೂರು ಎಚ್ಚರಿಕೆ ನೀಡಿದ್ದಾರೆ. ವಾರ್ಡ್ ನಂ.2 ರಲ್ಲಿನ ಜನರು ಪಕ್ಕದ ಹಳ್ಳದಲ್ಲಿ ಹರಿಯುವ ನೀರು ತರುತ್ತಿದ್ದಾರೆ. ಗ್ರಾಮದ ಜನರಿಗೆ ಕುಡಿಯುವ ನೀರು ಕಲುಷಿತವಾಗಿದ್ದು ವಿಭೂತಿಹಳ್ಳಿ ಗ್ರಾಮದಿಂದ ಹತ್ತಿಗೂಡೂರ್ ಗ್ರಾಮಕ್ಕೆ ನೀರು ಬರುತ್ತಿದ್ದು. ಪದೇ ಪದೇ ಮೋಟರ್ ಸುಟ್ಟು ಹೋಗುತ್ತಿದೆ ಎಂದು ಅಧಿಕಾರಿಗಳು ಸಬುಬೂ ಹೇಳುತ್ತಿದ್ದಾರೆ.
ಕುಡಿಯು ನೀರಿನ ಸಮಸ್ಯೆ ಬಗ್ಗೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ,ಕಾರ್ಯನಿರ್ವಾಹಕ ತಾಲೂಕು ಪಂಚಾಯಿತಿ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರಗಳು ಸಲ್ಲಿಸಿದ್ದರೂ ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿದರು. ಗ್ರಾಮ ಪಂಚಾಯಿತಿಯ ಬಗ್ಗೆ ಅಭಿವೃದ್ಧಿ ಅಧಿಕಾರಿ ಸಂಪೂರ್ಣ ನಿರ್ಲಕ್ಷ ವಹಿಸಿದ್ದು ಅಮಾನತ್ತಿಗೆ ಆಗ್ರಹಿಸಲಾಗುವುದು ಎಂದು ಎಚ್ಚರಿಸಿದರು.