ಬೆಳಗಾವಿ ಅಧಿವೇಶನ : ಶಾಸಕ ಶರಣಗೌಡ ಕಂದಕೂರ್ ಪ್ರತಿಧ್ವನಿ : ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕರು

ಬಸವರಾಜ ಕರೇಗಾರ

 
ಶಹಾಪುರ : ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯದ ಚಳಿಗಾಲದ ಅಧಿವೇಶನದಲ್ಲಿ ಗುರುಮಿಟ್ಕಲ್ ಶಾಸಕರಾದ ಶರಣಗೌಡ ಕಂದಕೂರ್ ಮಾತನಾಡಿ, ಯಾದಗಿರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಕೇವಲ ಐದೇ ನಿಮಿಷದಲ್ಲಿ ಬಿಚ್ಚಿಟ್ಟಿದ್ದಾರೆ. ಮೊದಲ ಬಾರಿಗೆ ಶಾಸಕರಾದ ಶರಣಗೌಡ ಕಂದಕೂರ್ ಜಿಲ್ಲೆಯ ಬಗ್ಗೆ ಅದೆಷ್ಟು ಕಾಳಜಿಯ ಮಾತನಾಡಿದ್ದಾರೆಂದರೆ, ಜಿಲ್ಲೆಯಾದ ನಂತರ ಇದುವರೆಗೂ ಯಾವ ಶಾಸಕರು ಈ ರೀತಿಯಾಗಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಮಾತನಾಡಿದ ಉದಾಹರಣೆಗಳಿಲ್ಲ.

ರಾಜ್ಯದಲ್ಲಿಯೇ ಎಲ್ಲಾ ವಿಭಾಗಗಳಲ್ಲಿ ಯಾದಗಿರಿ ಜಿಲ್ಲೆ ಹಿಂದುಳಿದಿದೆ, ಶಿಕ್ಷಣ,ಉದ್ಯೋಗ,ವೈದ್ಯಕೀಯ, ಆರೋಗ್ಯ, ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲಾ ರಂಗಗಳಲ್ಲೂ ನಾವು ಹಿಂದಿದ್ದೇವೆ. ಉತ್ತರ ಕರ್ನಾಟಕದ ಶಾಸಕರೆಲ್ಲರೂ ತಮ್ಮ ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದರೆ, ಶರಣಗೌಡ ಕಂದಕೂರ್ ಇಡೀ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಬೇಸ್ ಎನಿಸಿಕೊಂಡರು.
ರಾಜ್ಯದಲ್ಲಿಯೇ ಅತಿ ಹೆಚ್ಚು ಗೂಳೆ ಹೋಗುವ ಜನರು ಯಾದಗಿರಿ ಜಿಲ್ಲೆಯ ಜನತೆ. ಕಾರಣ ಇಷ್ಟೇ ಈ ಭಾಗದಲ್ಲಿ ಉದ್ಯೋಗವಿಲ್ಲ. ಕಾರ್ಖಾನೆಗಳ ಸ್ಥಾಪನೆ ಇಲ್ಲ.ಕೂಲಿ ಕಾರ್ಮಿಕರು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಸರಿಯಾದ ನೀರಾವರಿ ಪ್ರದೇಶಗಳಿಲ್ಲ.ಕೇವಲ ಒಂದೇ ಬೆಳೆಗೆ ಸೀಮಿತವಾಗಿವೆ. ರಾಜ್ಯ ಸರಕಾರದ ತಿರಸ್ಕಾರ ನೀತಿ. ಸರಕಾರದಿಂದ ಜಿಲ್ಲೆಯ ಕಡೆಗಣನೆ. ಜಿಲ್ಲೆಯನ್ನು ಸಮರ್ಥಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವ ಶಾಸಕರಿಲ್ಲ. ಅನುದಾನ ತಂದರೂ ಸರಿಯಾದ ರೀತಿಯಲ್ಲಿ ಸದ್ಬಳಕೆಯಾಗುತ್ತಿಲ್ಲ. ಬ್ರಷ್ಟಾಚಾರ ತಾಂಡವಾಡುತ್ತಿದೆ. ಹೀಗೆ ಹಲವು ಸಮಸ್ಯೆಗಳಿರುವುದರಿಂದ ಜಿಲ್ಲೆಯು ಹಿಂದುಳಿದಿರುವಿಕೆಗೆ ಕಾರಣವಾಗಿದೆ. ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಜಿಲ್ಲೆಯಿಂದ ಶಾಸಕರು ಒಗ್ಗಟ್ಟಿಲ್ಲ. ನಾವು ದಕ್ಷಿಣ ಕರ್ನಾಟಕದ ಶಾಸಕರನ್ನು ನೋಡಿ ಕಲಿಯಬೇಕಿದೆ.
ಶರಣಗೌಡ ಕಂದಕೂರ್ ಅವರು ಮೊದಲಿಗೆ ಶಿಕ್ಷಣದ ಬಗ್ಗೆ ಮಾತನಾಡಿ, ಶಾಲೆಯ ಕಟ್ಟಡಗಳಿಗೆ ಶಿಕ್ಷಕರಿಲ್ಲ.ಇದರಿಂದ 10ನೇ ತರಗತಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿ ಇದ್ದೇವೆ. ಉದ್ಯೋಗ ಬೇಕೆಂದರೆ ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಬೇಕಾದ ಪ್ರದೇಶಗಳು ಇನ್ನೂ ಪ್ರಾರಂಭವಾಗಿಲ್ಲ.ಸ್ವತಂತ್ರ ಬಂದು 75 ವರ್ಷಗಳು ಕಳೆದರೂ ಯಾದಗಿರಿ ಜಿಲ್ಲೆಯ ಶೇ. 70ರಷ್ಟು ಪ್ರದೇಶಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲ ಎಂದರೆ ಎಂತಹ ದುರಂತ.ಇಷ್ಟೆಲ್ಲ ಹಿಂದುಳಿದ ಪ್ರದೇಶವಾದ ಯಾದಗಿರಿ ಜಿಲ್ಲೆ ಎಲ್ಲಾ ರಂಗಗಳಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ.
ಯಾದಗಿರಿ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ತುರ್ತು ಪರಿಸ್ಥಿತಿ ಸಂಭವಿಸಿದಾಗ ರಾಯಚೂರು ಕಲಬುರ್ಗಿ ಸೊಲ್ಲಾಪುರ ಮೀರಜ್ ಹೈದರಾಬಾದ್ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಅಲ್ಲಿಯವರೆಗೂ ಜೀವ ಕಳೆದುಕೊಳ್ಳುವ ಸ್ಥಿತಿ ಉಂಟಾಗಿದೆ. ಉದ್ಯೋಗ ಕೊಡಿ, ಆಸ್ಪತ್ರೆ ಕೊಡಿ,ಸರಿಯಾದ ವೈದ್ಯರನ್ನು ಕೊಡಿ, ಕಾರ್ಖಾನೆಗಳನ್ನು ಸ್ಥಾಪನೆ ಮಾಡಿ ಉದ್ಯೋಗ ನಿರ್ಮಿಸಿ.ಶಿಕ್ಷಣ ಕೊಡಿ. ಇದು ಶಾಸಕರ ನಿಜವಾದ ಕಾಳಜಿದಾಯಕ ಮಾತಾಗಿದೆ. ಇದನ್ನು ಸರಕಾರ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಿದೆ ಎಂದು ಯಾದಗಿರಿ ಜಿಲ್ಲೆಯ ಜನತೆ ಕಾದು ನೋಡಬೇಕಿದೆ.
 ಬಡವರಿಗೆ ಕೊಡಲಾಗುವ ಪಡಿತರ ಹಕ್ಕಿಯನ್ನು ಕಳ್ಳತನ ಮಾಡಿದ್ದಾರೆ ಎಂದರೆ ಎಂತಹ ದುರದೃಷ್ಟ.ಈ ಅಕ್ಕಿಯಿಂದಲೇ ಎಷ್ಟೋ ಬಡ ಕುಟುಂಬಗಳು ಜೀವಿಸುತ್ತಿವೆ. ಅನ್ನಕ್ಕೆ ಬಡವರ ಹೊಟ್ಟೆಗೆ ಒಡೆಯುತ್ತಿದ್ದಾರೆ. ಬಡವರ ಹಕ್ಕಿಯನ್ನೆ ತಿಂದ ಉಳ್ಳವರು ಜಿಲ್ಲೆಯ ಅಭಿವೃದ್ಧಿಗೊಳಿಸಲು ಸಾಧ್ಯವೇ?. ಎರಡು ಕೋಟಿ ಮೌಲ್ಯದ ಬಡವರ ಅಕ್ಕಿ ನಾಪತ್ತೆಯಾಗಿದೆ. ಜಿಲ್ಲಾಧಿಕಾರಿಗಳು ತನಿಖೆ ತಂಡ ರಚಿಸಿ ಮೌನವಾಗಿದ್ದಾರೆ. ತನಿಕೆಯು ಯಾವ ಹಂತದಲ್ಲಿ ನಡೆಯುತ್ತಿದೆ ಎಂದು ಅಧಿಕಾರಿಗಳು ಗಮನಹರಿಸುತ್ತಿಲ್ಲ.ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಅಪರಾಧಿಗಳ ಜೊತೆ ಫೋಟೋ ತೆಗೆಸಿಕೊಂಡ ಪೊಲೀಸ್ ಇಲಾಖೆಯವರಿಂದ ನಿಷ್ಪಕ್ಷಪಾತವಾದ ತನಿಖೆಯಾಗಲು ಸಾಧ್ಯವೇ ಎಂತಹ ಸರಕಾರವಿದು ಎಂದು ಜನರು ಅಂದಾಡಿಕೊಳ್ಳುತ್ತಿದ್ದಾರೆ.ಸಿಓಡಿ ಒಪ್ಪಿಸಬೇಕು ಎಂದು ಶಾಸಕರು ಒತ್ತಾಯಿಸಿದ್ದಾರೆ.

About The Author