ಮಹಾಶೈವ ಧರ್ಮಪೀಠದಲ್ಲಿ 71 ನೆಯ ಶಿವೋಪಶಮನ ಕಾರ್ಯ

Raichur: ದೇವದುರ್ಗ(ಗಬ್ಬೂರು 03-12-2023) :ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಡಿಸೆಂಬರ್ 03 ರ ಆದಿತ್ಯವಾರದಂದು 73 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಶಿವಾಭಯವನ್ನು ಆಶಿಸಿ ವಿಶ್ವೇಶ್ವರಶಿವನ ಸನ್ನಿಧಿಗೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹ ಕರುಣಿಸಿದರು.

ಗಬ್ಬೂರಿನ ಅಮನಳ್ಳಿ ಗಂಗಪ್ಪನವರು ವಿಶ್ವೇಶ್ವರನ ಅನುಗ್ರಹದಿಂದ ತಮ್ಮ ಮಗಳ ಮದುವೆ ಆದುದಕ್ಕೆ ಇಂದಿನ ದಾಸೋಹಸೇವೆ ಸಲ್ಲಿಸಿದರು.ಗಂಗಪ್ಪ ಅಮನಳ್ಳಿಯವರು ತಮ್ಮ ಮಗಳಾದ ಭೂಮಿಕಾಳಿಗೆ ಮದುವೆಯಾಗಲಿ ಎಂದು ಪ್ರಾರ್ಥಿಸಿ 05.11.2023 ರಂದು ರವಿವಾರದಂದು ನಡೆದಿದ್ದ 67 ನೆಯ ಶಿವೋಪಶಮನಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾಭಯ ಕರುಣಿಸಿದ್ದರು.26.11.2023ರಂದು ಭೂಮಿಕಾಳ ಮದುವೆಯು ನಡೆಯಿತು.ಆ ಪ್ರಯುಕ್ತ ಗಂಗಪ್ಪ ಅಮನಳ್ಳಿ ಈ ದಿನ ಕುಟುಂಬ ಸಮೇತರಾಗಿ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಪೀಠಾಧ್ಯಕ್ಷರನ್ನು ಕೃತಜ್ಞತಾಪೂರ್ವಕವಾಗಿಗೌರವಿಸಿ,ಸನ್ಮಾನಿಸಿದರು.ಪೀಠಾಧ್ಯಕ್ಷರು ಗಂಗಪ್ಪ ಈರಮ್ಮ ಅಮನಳ್ಳಿ ದಂಪತಿಗಳನ್ನು ಶಿವಾನುಗ್ರಹಪೂರ್ವಕವಾಗಿ  ಸನ್ಮಾನಿಸಿ,ಆಶೀರ್ವದಿಸಿದರು.ಮದುವೆಯಾಗದ ಸಾಕಷ್ಟು ಜನ ತರುಣ ತರುಣಿಯರು ಸಾಕಷ್ಟು ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ಸನ್ನಿಧಿಗೆ ಬಂದು ಪೀಠಾಧ್ಯಕ್ಷರಿಂದ ಶಿವಾಭಯಪಡೆದು ಮದುವೆಯಾಗಿ ಸಂತಸದ ನವಜೀವನ ನಡೆಸುತ್ತಿದ್ದಾನೆ.ವಿಶ್ವೇಶ್ವರ ಶಿವನು ‘ ಸಂತಾನೇಶ್ವರ ಶಿವ’ ನೆಂದು ಪ್ರಸಿದ್ಧನಾಗಿರುವಂತೆಯೇ ಮದುವೆಯಾಗದವರಿಗೆ ಕಂಕಣಭಾಗ್ಯವನ್ನು ಕರುಣಿಸುವ ಮೂಲಕ ‘ ಕಂಕಣಭಾಗ್ಯದಾತ ಶಿವ’ ಎಂದೂ ಪ್ರಸಿದ್ಧನಾಗಿದ್ದಾನೆ.ಇಲ್ಲಿಯವರೆಗೆ ನಡೆದ 71 ಶಿವೋಪಶಮನಗಳಲ್ಲಿ 25 ಕ್ಕೂ ಹೆಚ್ಚು ಜನರು ವಿಶ್ವೇಶ್ವರಾನುಗ್ರಹದಿಂದ ಕಂಕಣಭಾಗ್ಯಪಡೆದಿದ್ದಾರೆ.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ, ಗುರುಬಸವ ಹುರಕಡ್ಲಿ, ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಬಸವರಾಜ ಭೋಗಾವತಿ,ಯಲ್ಲಪ್ಪ ಕರಿಗಾರ,ಸಿದ್ರಾಮಯ್ಯಸ್ವಾಮಿ ಹಳ್ಳಿ,ತಾತಪ್ಪ ಚಿಕ್ಕಹಳ್ಳಿ, ಗ್ರಾಮ ಪಂಚಾಯತ್ ಸದಸ್ಯ ನಾಗಪ್ಪ ಅಮನಳ್ಳಿ,ಬಸವಲಿಂಗ ಪೂಜಾರಿ ಅಮರಾಪುರ, ಏಳುಬಾವೆಪ್ಪಗೌಡ,ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ, ಬಸವರಾಜ ಹರವಿ,ಹನುಮೇಶ, ರಮೇಶ ಖಾನಾಪುರ,ಉದಯಕುಮಾರ ಮಡಿವಾಳ ಸೇರಿದಂತೆ ಭಕ್ತರುಗಳು,ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

About The Author