ಜಿಲ್ಲಾ ಪಂಚಾಯತಿಯಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೊಂಡ ಅಧಿಕಾರಿಗಳದೆ ಸದ್ದು ! 10 ವರ್ಷ ಕಳೆದರೂ ಕಾಲ್ಕಿತ್ತದ ಅಧಿಕಾರಿಗಳು !

ಶಹಾಪುರ :ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 29ಕ್ಕೂ ಹೆಚ್ಚು ಇಲಾಖೆಗಳನ್ನು ಒಳಗೊಂಡಿದೆ. ಇತರ ಇಲಾಖೆಗಳ ಅಧಿಕಾರಿಗಳು ಪಂಚಾಯತ್ ರಾಜ್ ಇಲಾಖೆಗೆ ನಿಯೋಜನೆಗೊಂಡು ಬರುತ್ತಿದ್ದಾರೆ. ಯಾಕೆ ಎನ್ನುವ ಪ್ರಶ್ನೆ ಇಂದಿಗೂ ಕಾಡುತ್ತಿದೆ. ಪಂಚಾಯತ್ ರಾಜ್ ಇಲಾಖೆಯಲ್ಲಿ ತಮ್ಮದೇ ಆದ ಸಾಮ್ರಾಜ್ಯವನ್ನು ಯಾದಗಿರಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಕಟ್ಟಿಕೊಂಡಿದ್ದಾರೆ. ಇದರ ಬಗ್ಗೆ ಯಾವ ಅಧಿಕಾರಿಗಳು ಗಮನ ಹರಿಸದೆ ಇರುವುದು ಪ್ರಶ್ನಾರ್ಹವಾಗಿದೆ.

ಯಾದಗಿರಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಇತರ ಇಲಾಖೆಗಳಿಂದ ನಿಯೋಜನೆಗೊಂಡ ಅಧಿಕಾರಿಗಳಿದ್ದಾರೆ.ಕೃಷಿ,ನಗರಸಭೆ ಸೇರಿದಂತೆ ಇತರ ಇಲಾಖೆಯಿಂದ ಬಂದಿರುವ ಹಲವಾರು ಅಧಿಕಾರಿಗಳು ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯಲ್ಲಿ ಕೆಲ ಅಧಿಕಾರಿಗಳು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಕೃಷಿ ಇಲಾಖೆಯಿಂದ ನಿಯೋಜನೆಗೊಂಡು ಹತ್ತು ವರ್ಷ ಕಳೆದರೂ ಜಿಲ್ಲಾ ಪಂಚಾಯಿತಿಯಲ್ಲಿಯೆ ಮೊಕ್ಕಂ ಹೂಡಿದ್ದಾರೆ ಎನ್ನುವುದು ಕುತೂಹಲಕಾರಿ ಸಂಗತಿ. ತಮ್ಮ ತಮ್ಮ ಇಲಾಖೆಗಳನ್ನು ಕಳೆದುಕೊಂಡಿದ್ದಾರೇಯೇ?. ಇದು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ಬಾರದೇ ಇರಬಹುದು ಅಥವಾ ಗೊತ್ತಿದ್ದು ಕೈಕಟ್ಟಿ ಕುಳಿತು ಕೊಂಡಿದ್ದಾರೆಯೇ,?, ರಾಜಕೀಯ ಬೆಂಬಲದಿಂದ ಬೇರೆ ಇಲಾಖೆಯಿಂದ ನಿಯೋಜನೆಗೊಳಿಸಿಕೊಂಡಿದ್ದಾರೆಯೇ ಎನ್ನುವ ಅನುಮಾನ ದಟ್ಟವಾಗಿದೆ.

ಹತ್ತು ವರ್ಷ ಕಳೆದರೂ ಕಾಲ್ಕಿತ್ತದ ಅಧಿಕಾರಿಗಳು

ಜಿಲ್ಲಾ ಪಂಚಾಯಿತಿಗೆ ನಿಯೋಜನೆಗೊಂಡ ಅಧಿಕಾರಿಗಳು ಒಂದು, ಎರಡಲ್ಲ ಹತ್ತು ವರ್ಷ ಕಳೆದರೂ ತಮ್ಮ ಇಲಾಖೆಗೆ ಮರು ನಿಯೋಜನೆಗೊಂಡಿಲ್ಲ. ಮಾತೃ ಇಲಾಖೆಗೆ ಹೋಗದೆ ಜಿಲ್ಲಾ ಪಂಚಾಯಿತಿಯಲ್ಲಿ ಕೆಲ ಅಧಿಕಾರಿಗಳು ನಿಯೋಜನೆಗೊಂಡಿದ್ದು, ಸಂಬಳ ಮಾತ್ರ ಮಾತೃ ಇಲಾಖೆಯಿಂದ ತೆಗೆದುಕೊಳ್ಳುತ್ತಿದ್ದಾರೆ.ಅಧಿಕಾರ ಪಂಚಾಯತ್ ರಾಜ್ ಇಲಾಖೆಯಿಂದ ಇದು ಯಾವ ನ್ಯಾಯ ?.

ಗ್ರಾಮೀಣಾಭಿವೃದ್ಧಿ ಸಚಿವರೇ ಇತ್ತ ಕಡೆ ಗಮನಹರಿಸಿ ?

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ರಾಜ್ಯದಲ್ಲಿಯೇ ಒಬ್ಬ ಶಿಸ್ತಿನ ಸಚಿವರಾದ ಪ್ರಿಯಾಂಕ ಖರ್ಗೆ ಸಚಿವರಾದ ಮೇಲೆ ಹಲವಾರು ಸುಧಾರಣೆಗಳನ್ನು ಕಾಣುತ್ತಿದ್ದೇವೆ.ವರ್ಗಾವಣೆ ಸೇರಿದಂತೆ ಯಾವುದೇ ಭ್ರಷ್ಟಾಚಾರ ರಹಿತವಾಗಿ ಕೆಲಸಗಳು ಆಗುತ್ತಿವೆ ಎನ್ನುವ ಕೂಗು ಕೇಳಿ ಬರುತ್ತಿದೆ. ಯಾದಗಿರಿ ಜಿಲ್ಲಾ ಪಂಚಾಯಿತಿಯಲ್ಲಿ ಇದನ್ನು ಕಡೆಗಣಿಸಲಾಗಿದೆ ಎನ್ನಲಾಗುತ್ತಿದೆ. ಬೇರೆ ಇಲಾಖೆಯಿಂದ ಬಂದವರು ಮೂಲ ಇಲಾಖೆಗೆ ಹೋಗದೆ ಹತ್ತು ವರ್ಷಗಳಾದರೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿಯಲ್ಲಿ ಮೊಕ್ಕಂ ಹೂಡಿದ್ದಾರೆ.

ಇದರಲ್ಲಿ ರಾಜಕೀಯ ನೇತಾರರ ಕೈವಾಡ ಅಥವಾ ಮೇಲಾಧಿಕಾರಿಗಳ ಜಾಣ ನಡೆಯೇ ಕಾರಣವೇ ಎನ್ನಲಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ನಿಯೋಜನೆಗೊಂಡ ಅಧಿಕಾರಿಗಳು ಮಾತೃ ಇಲಾಖೆಗೆ ಮರಳಬೇಕಿದೆ. ಅದಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ. ಜನಪ್ರತಿನಿಧಿಗಳು ಇತರ ಇಲಾಖೆಗಳ ಕಡೆ ಗಮನ ಹರಿಸಬೇಕಿದೆ. ಆದಷ್ಟು ಬೇಗ ಈ ಕ್ರಮ ಜರುಗಿಸಲಾಗುತ್ತದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

About The Author