ಮಹಾಶೈವ ಧರ್ಮಪೀಠದಲ್ಲಿ 69 ನೆಯ ಶಿವೋಪಶಮನ ಕಾರ್ಯ

ರಾಯಚೂರು( ಗಬ್ಬೂರು 19) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನವೆಂಬರ್ 19 ರ ಆದಿತ್ಯವಾರದಂದು 69ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸವನ್ನರಸಿ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.
         ಶ್ರೀಕ್ಷೇತ್ರ ಕೈಲಾಸದಲ್ಲಿ ನಿತ್ಯವೂ ತನ್ನ ಲೀಲೆಗಳನ್ನು ಮೆರೆಯುತ್ತಿರುವ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ಇಂದಿನ ಶಿವೋಪಶಮನದಲ್ಲಿ ಆಶ್ಚರ್ಯಕರವಾದ ಪವಾಡ ಒಂದನ್ನು ಉಂಟು ಮಾಡಿದನು.ಶಹಾಪುರ ತಾಲ್ಲೂಕಿನ ಕನ್ನಡಪ್ರಭ ಪತ್ರಿಕೆಯ ವರದಿಗಾರರಾದ ಮಲ್ಲಯ್ಯ ಪೋಲಂಪಲ್ಲಿಯವರು ವಿಶ್ವೇಶ್ವರ ಶಿವನ ದರ್ಶನಾಶೀರ್ವಾದವನ್ನರಸಿ ಮಧ್ಯಾಹ್ನದ ಹೊತ್ತಿಗೆ ಬಂದಿದ್ದರು.ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ ಅವರು ‘ ಮಲ್ಲಯ್ಯ ಪೋಲಂಪಲ್ಲಿಯವರು ಹಾವುಗಳನ್ನು ಹಿಡಿಯುತ್ತಾರೆ’ ಎಂದು ಪರಿಚಯಿಸಿದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ‘ ಹಾಗಿದ್ದರೆ ಮಲ್ಲಯ್ಯನವರು ಹಾವು ಹಿಡಿಯುವುದನ್ನು ನಾವು ನೋಡಬೇಕಲ್ಲ’ ಎಂದರು.ಅವರು ಈ ಮಾತನ್ನು ಹೇಳಿ ಐದುನಿಮಿಷಗಳು ಕಳೆದಿರಲಿಲ್ಲ ಎಲ್ಲಿಂದಲೋ ಒಂದು ಹಾವು ಕುಳಿತವರ ಕಣ್ಣುಗಳಿಗೂ ಕಾಣದಂತೆ ಸರಸರನೆ ಪೀಠಾಧ್ಯಕ್ಷರ ಪೀಠದ ಬಳಿ ಬಂದಿದ್ದನ್ನು ತೋರಿಸಿಕೊಳ್ಳುತ್ತಿದ್ದ  ಮಹಿಳೆಯೊಬ್ಬರು ಕಂಡು ಕಿಟ್ಟನೆ ಕಿರಚಿದರು‌.ಅಷ್ಟು ಹೊತ್ತಿಗಾಗಲೆ ಹಾವು ಪೀಠಾಧ್ಯಕ್ಷರ ಪೀಠವನ್ನು ಏರಿತ್ತು.ಓಡಿಸಿದರೆ ಹೋಗದೆ ಪೀಠಾಧ್ಯಕ್ಷರು ಭಕ್ತರನ್ನು ನೋಡುತ್ತಿದ್ದ ಸ್ಥಳದಲ್ಲಿಯೇ ಮೂರ್ನಾಲ್ಕು ಸುತ್ತು ಹಾಕಿತು.ಕೊನೆಗೆ ಮಲ್ಲಯ್ಯ ಪೋಲಂಪಲ್ಲಿಯವರು ಬಂದು ಅದನ್ನು ಹಿಡಿದುಕೊಂಡು ಹೋಗಿ ಪಕ್ಕದ ಹೊಲದಲ್ಲಿ ಬಿಟ್ಟುಬಂದರು.ವಿಶ್ವೇಶ್ವರ ಶಿವನು ಪೀಠಾಧ್ಯಕ್ಷರ ನಾಲಗೆಯ ಮೇಲೆ ನೆಲಸಿ ಅವರು ನುಡಿದದನ್ನು ನಡೆಸಿಕೊಡುತ್ತಾನೆ ಎನ್ನುವುದಕ್ಕೆ ಇಂದಿನ ಹಾವಿನ ಪ್ರಕರಣವು ಸಾಕ್ಷಿಯಾಯಿತು.
       ಈ ದಿನದ ದಾಸೋಹಸೇವೆ ಸಲ್ಲಿಸಿದ ದಾಮೋದರ ಮರಾಠ ಅವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.
      ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಕನ್ನಡಪ್ರಭ ದಿನಪತ್ರಿಕೆಯ ಶಹಾಪುರ ವರದಿಗಾರ ಮಲ್ಲಯ್ಯ ಪೋಲಂಪಲ್ಲಿ,ಮಹಾಶೈವ ಧರ್ಮಪೀಠದ ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹ ಸಮಿತಿಯ ಅಧ್ಯಕ್ಷ ಗುರುಬಸವ ಹುರಕಡ್ಲಿ,ವಿವಿಧ ಸಮಿತಿಯ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಹೊನ್ನಟಗಿ,ವಿರುಪಾಕ್ಷಪ್ಪಗೌಡ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಸಿದ್ರಾಮಯ್ಯ ಹಳ್ಳಿ, ಮಲ್ಲಿಕಾರ್ಜುನ ಗುತ್ತೆದಾರ ಮಸ್ಕಿ, ರಡ್ಡೆಪ್ಪಗೌಡ ಜಿನ್ನಾಪುರ,ರಂಗನಾಥ ಮಸೀದಪುರ,ಪರಶುರಾಮ ಜಡೇರ್,ಜಂಬಣ್ಣ ಕತಲಪ್ಪನೋರ್,ಬೆಟ್ಟಪ್ಪ ಗದಾರ,ಶಿವಕುಮಾರ ವಸ್ತಾರ , ಅಕ್ರಂಸಾಬ್ ,ಖಾಲೇಶರೆಡ್ಡಿ,ಪತ್ರಕರ್ತ ಏಳುಬಾವೆಪ್ಪಗೌಡ ಅವರು ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author