ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ಆಯ್ಕೆ ಯತ್ನಾಳ್ಗೆ ನಿರಾಸೆ !

* ಐಟಿಸಿ ಗಾರ್ಡಿನಿಯಾ ಹೋಟೆಲ್ ನಲ್ಲಿ ಸಭೆ. *ಬಸವರಾಜ ಬೊಮ್ಮಾಯಿ ಸೂಚನೆ, ಶಾಸಕರಿಂದ ಅನುಮೋದನೆ.     

*ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪುತ್ರ ಹಾಗೂ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಉಪಸ್ಥಿತಿ.

ಶಹಪುರ : ಬಿಜೆಪಿಯಲ್ಲಿ ಇಂದು ಬೆಂಗಳೂರಿನ ಐಟಿಸಿ ಗಾರ್ಡಾನಿಯಾ ಹೋಟೆಲ್ ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಮಾಜಿ ಸಚಿವರಾದ ಆರ್. ಅಶೋಕ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.ಶಾಸಕಾಂಗ ಸಭೆಯಲ್ಲಿ ಸೇರಿದ ಬಿಜೆಪಿ ಶಾಸಕರು ಒಮ್ಮತದ ನಿರ್ಧಾರ ಕೈಗೊಂಡರು.

ಇದರಿಂದ ಉತ್ತರ ಕರ್ನಾಟಕದ ಬಿಜೆಪಿ ಶಾಸಕರಾದ ಅರವಿಂದ್ ಬೆಲ್ಲದ್, ಬಸವರಾಜ ಪಾಟೀಲ್ ಯತ್ನಾಳ್ ಗೆ ಭಾರೀ ನಿರಾಶೆಯಾಗಿದೆ. ಒಂದು ಕಡೆ ಬಿಎಸ್ ವೈ ಬಣದ ಮೇಲುಗೈ ಸಾಧಿಸಿದೆ ಎಂದು ಹೇಳಲಾಗುತ್ತಿದೆ. ಕುಟುಂಬ ರಾಜಕಾರಣವನ್ನು ಟೀಕಿಸುತ್ತಿದ್ದ ಬಸವರಾಜ ಪಾಟೀಲ್ ಯತ್ನಾಳ್ ಗೆ ಹಿನ್ನಡೆಯಾಗಿದೆ. ಉತ್ತರ ಕರ್ನಾಟಕಕ್ಕೆ ವಿರೋಧ ಪಕ್ಷದ ನಾಯಕ ಸ್ಥಾನ ಕೊಡಿ ಎಂದು ಯತ್ನಾಳ್ ಪದೇ ಪದೇ ಮಾಧ್ಯಮದ ಮುಂದೆ ಹೇಳುತ್ತಿದ್ದರು. ಆರ್ ಅಶೋಕ ನೇಮಕದಿಂದ ಉತ್ತರ ಕರ್ನಾಟಕಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ರಚನೆಯಾದ ಆರು ತಿಂಗಳ ನಂತರ ವಿರೋಧ ಪಕ್ಷದ ನಾಯಕನನ್ನು ಬಿಜೆಪಿ ಆಯ್ಕೆ ಮಾಡಿದೆ.

ಬೆಂಗಳೂರಿನ ವೀಕ್ಷಕರಾಗಿ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದಿಶಾಂತ ಕುಮಾರ, ಸಚಿವೆ ನಿರ್ಮಲಾ ಸೀತಾರಾಮ್ ಸೇರಿದಂತೆ ಶಾಸಕರು ಮಾಜಿ ಶಾಸಕರು ಉನ್ನತ ನಾಯಕರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

ಕಾಂಗ್ರೆಸ್ ಪಕ್ಷದ ಆಡಳಿತದಿಂದ ರಾಜ್ಯದಲ್ಲಿ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ನ ಭ್ರಷ್ಟಾಚಾರ ಜನರ ಮುಂದೆ ಇಡುತ್ತೇವೆ. ಎಟಿಎಂ ಸರ್ಕಾರವಿದು. ಭ್ರಷ್ಟಾಚಾರದಿಂದ ನಮ್ಮ ಹೋರಾಟ ಮುಂದುವರೆಯುತ್ತದೆ. ನಾನು ಮತ್ತು ವಿಜಯೇಂದ್ರ ಜೋಡತ್ತುಗಳಂತೆ ಪಕ್ಷವನ್ನು ಕಟ್ಟಿ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರುತ್ತೇವೆ.

ಆರ್.ಅಶೋಕ್ ನೂತನ
ವಿರೋಧ ಪಕ್ಷದ ನಾಯಕ

 

About The Author