ಅಧಿಕಾರಿಗಳ ನಿರ್ಲಕ್ಷ | ಕುಡಿಯುವ ನೀರಿಗಾಗಿ ಹಾಹಾಕಾರ |  ಸಾರ್ವಜನಿಕರಿಗೆ ಆಸರೆಯಾದ ಸ್ಮಶಾನದ ಬೋರ್ವೆಲ್

ವಡಗೇರಾ : ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರವಿದ್ದು,   ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತೀವ್ರ ನಿರ್ಲಕ್ಷ  ವಹಿಸುತ್ತಿದ್ದಾರೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ವಡಗೇರಾ ತಾಲೂಕು ಅಧ್ಯಕ್ಷ  ಶರಣು ಜಡಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.ಕೆಲವು ಬಡಾವಣೆಗಳಲ್ಲಂತೂ  ನೀರು ಸರಬರಾಜೆ ನಿಂತು ಹೋಗಿದೆ.ಜನರು ಮಹಿಳೆಯರು ಅಧಿಕಾರಿಗಳಿಗೆ  ಶಾಪ ಹಾಕುತ್ತಿದ್ದಾರೆ.ಅಧಿಕಾರಿಗಳು ಮಾತ್ರ ನಮಗೇನೂ ಗೊತ್ತಿಲ್ಲ ಎಂದು ಮೂಕವಿಸ್ಮತ ರಾಗಿದ್ದಾರೆ.ನಗರದ ಕೆಲವು ಬೋರ್ವೆಲ್ ಗಳು ಕೆಟ್ಟು ನಿಂತಿವೆ.ಇನ್ನು  ಕೆಲವು ಇದ್ದರೂ ಕೂಡ ಬಳಕೆಗೆ  ಕುಡಿಯಲು ಯೋಗ್ಯವಿಲ್ಲ.ಉಪ್ಪು ನೀರಿನಿಂದ ಕೂಡಿವೆ. ಪಟ್ಟಣದಿಂದ ಎರಡು ಕಿಲೋ ಮೀಟರ್ ದೂರವಿರುವ ಮುಸ್ಲಿಂ ಸಮಾಜದವರ ಸ್ಮಶಾನದಲ್ಲಿರುವ ಬೋರ್ವೆಲ್ ಇಂದು ಪಟ್ಟಣದ ಜನರಿಗೆ ಆಸರೆಯಾಗಿರುವುದು ದುರದೃಷ್ಟಕರ ಎಂದರು.
ಸ್ಮಶಾನದಲ್ಲಿರುವ ನೀರು ಬಳಸಬಾರದೆಂದು ಹೇಳುತ್ತಿದ್ದಾರೆ ಪೂರ್ವಜರು. ಆದರೂ ಅನಿವಾರ್ಯ ಪರಿಸ್ಥಿತಿ. ಜನರು ಅವುಗಳನ್ನೇ ಕುಡಿಯಲು  ಬಳಿಕೆಗೆ ಉಪಯೊಗಿಸುತ್ತಿದ್ದಾರೆ. ಸ್ವಾಮಿ ವಿವೇಕಾನಂದ ಶಾಲೆಯ ಹತ್ತಿರ ಇರುವ ಬೋರ್ವೆಲ್ ನಲ್ಲಿ ಹಗಲು ರಾತ್ರಿ ಮಹಿಳೆಯರು ವೃದ್ಧರು ಮಕ್ಕಳು ದಿನನಿತ್ಯ ಸೈಕಲ್ ಗಾಡಿ  ಮೇಲೆ ಹಾಗೂ ನಡೆದುಕೊಂಡು ನೀರು ತರುವ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದಲ್ಲಿರುವ ನಲ್ಲಿಗಳು
 ಇದ್ದು ಇಲ್ಲದಂತಾಗಿವೆ. ಎರಡು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಆಗುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಕ್ಕೆ ತಂದರು ಯಾವ  ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ . ಸಂಬಂಧ ಶಾಸಕರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ಇಲ್ಲಿಯವರೆಗೆ ಯಾವುದೇ ರೀತಿಯಾದ ಸೂಕ್ತ ಕ್ರಮ ಕೈಗೊಂಡಿಲ್ಲ.ಒಂದು ವೇಳೆ ವಿಳಂಬವಾದಲ್ಲಿ ಸಾರ್ವಜನಿಕರು, ಸಂಘಟನೆಯ ವತಿಯಿಂದ ವಡಗೇರಾ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡುವುದಾಗಿ  ರಾಜ್ಯ ರೈತ ಸಂಘ ಹಸಿರು ಸೇನೆ ವಾಸುದೇವ್ ಮೇಟಿ ಬಣದ ವಡಗೇರಾ ತಾಲೂಕು ಗೌರವಾಧ್ಯಕ್ಷ ಶರಣು ಜಡಿ ಎಚ್ಚರಿಸಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ   ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿಗಾಗಿ ಹಾಹಾಕಾರ ಉಂಟಾಗಬಹುದು.ಪಟ್ಟಣಕ್ಕೆ ಸಂಪೂರ್ಣ ನೀರು ಸಿಗಬೇಕಾದರೆ ತುಮಕೂರು ಗ್ರಾಮದ ಕೃಷ್ಣಾ ನದಿಯಿಂದ ನೀರು ಹರಿಸಿದಾಗ ಮಾತ್ರ ಸಾರ್ವಜನಿಕರಿಗೆ ನೀರಿನ ಬವಣೆ ತಪ್ಪುತ್ತದೆ.ಶಾಸಕರು ಅಧಿಕಾರಿಗಳು ಆದಷ್ಟು ಬೇಗನೆ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು.
ಶರಣು ಜಡಿ 
ರಾಜ್ಯ ರೈತ ಸಂಘ ಹಸಿರು ಸೇನೆ 
ವಡಗೇರಾ ತಾಲೂಕು ಗೌರವಾಧ್ಯಕ್ಷರು.

About The Author