ನಾಳೆ ದಿ.ಬಾಪುಗೌಡ ದರ್ಶನಾಪುರ ಪುಣ್ಯ ಸ್ಮರಣೆ

ಶಹಪುರ : ಸಗರನಾಡಿದ ಧೀಮಂತ ನಾಯಕ ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ ದಿವಂಗತ ಬಾಪುಗೌಡ ದರ್ಶನಾಪುರವರ 35ನೇ  ಪುಣ್ಯ ಸ್ಮರಣೋತ್ಸವ ದಿನವನ್ನು ನಗರದ ಚರಬಸವೇಶ್ವರ ಪ್ರೌಢಶಾಲಾ ಮೈದಾನದಲ್ಲಿ ನವೆಂಬರ್ 15ರಂದು ಜರುಗಲಿದೆ. ಅಂದು ಬೆಳಿಗ್ಗೆ 9:30ಕ್ಕೆ ಭೀಮರಾಯನಗುಡಿ ವೃತ್ತದಲ್ಲಿರುವ ದಿವಂಗತ ಬಾಪುಗೌಡ ದರ್ಶನಪುರ್ ಅವರ ಪುತ್ತಳಿಗೆ ಗೌರವ ಸಮರ್ಪಿಸಲಾಗುವುದು.
 ನಂತರ ಚರಬಸವೇಶ್ವರ ಆವರಣದಲ್ಲಿ ಬೆಳಿಗ್ಗೆ 10ಕ್ಕೆ ಪೂಜ್ಯರು, ಗಣ್ಯರು, ದರ್ಶನಾಪುರ ಬಂಧುಗಳು, ಹಿತೈಷಿಗಳು, ಅಭಿಮಾನಿ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *