ಶಹಾಪುರ:ಗ್ರಾಮಗಳ ವಿಕಾಸದಿಂದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಗ್ರಾಮಸ್ಥರ ಬಹುದಿನದ ಬೇಡಿಕೆಯಾಗಿದ್ದ ಸೇತುವೆ ನೀರ್ಮಾಣ ಗೊಂಡಿದ್ದು ಸುಮಾರು ಹತ್ತಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಜನತೆಗೆ ಅನುಕೂಲವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ಸಿಂಗನಹಳ್ಳಿಯಿAದ ಪಡದಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸೇತುವೆ ಕಾಮಗಾರಿ ಲೋಕರ್ಪಣೆಗೊಳಿಸಿ ಮಾತನಾಡಿದರು.೨೦೧೮-೧೯ ನೇ ಸಾಲಿನ ೧ ಕೋಟಿ ೫೦ ಲಕ್ಷ ರೂ ವಚ್ಚದಲ್ಲಿ ನಿರ್ಮಾಣಗೊಂಡ ಸುಮಾರು ಹತ್ತಳ್ಳಿಗೆ ಅನೂಕೂಲವಾಗಲಿದೆ.
ಅತಿ ಮಳೆ ಬಂದರೆ ಸಂಚಾರಕ್ಕೆ ಬಹಳ ತೊಂದರೆ ಉಂಟಾಗುತ್ತಿದ್ದು ಸಂಪರ್ಕಕ್ಕೆ ಅಡಚಣೆ ಉಂಟಾಗುತ್ತಿತ್ತು ಸಮಸ್ಯೆಯನ್ನು ಅರಿತು ಜನಸಂಪರ್ಕ ಸುಗಮಗೊಳಿಸಲು ಸೇತುವೆ ನಿರ್ಮಾಣ ಗೊಂಡಿದೆ ಇದರಿಂದ ಹತ್ತಳ್ಳಿ ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಹಾಗೂ ೨ ಕೋಟಿ ರೂ ವೆಚ್ಚದಲ್ಲಿ ಸಿಂಗನಹಳ್ಳಿ ಯಲ್ಲಮ್ಮ ದೇವಿ ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಸರಕಾರದ ಅಸಹಕಾರದ ಮಧ್ಯೆಯು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ . ಇನ್ನೂ ಅನುದಾನದ ಕೊರತೆಯಿದೆ. ಕ್ಷೇತ್ರದ ಅಭಿವೃದ್ಧಿಯೆ ಮುಖ್ಯ ಗುರಿಯಾಗಿದ್ದು ಮತ್ತಷ್ಟು ಅನುದಾನ ತಂದು ಗ್ರಾಮೀಣ ಭಾಗದ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಗುರುನಾಥರೆಡ್ಡಿ ಅಲ್ಲೂರ, ಬಸಣ್ಣಗೌಡ ಪೊಲೀಸ್ ಪಾಟೀಲ್, ಮಲ್ಲಣಗೌಡ ಬೇನಾಳ, ಬಸವರಾಜಪ್ಪಗೌಡ ಬೆಣ್ಣೂರ ಅಶೋಕಗೌಡ ಯಾಳಗಿ, ಶರಣಗೌಡ ಯಾಳಗಿ, ಶಶಿಕಾಂತಗೌಡ ಯಾಳಗಿ, ಮುದಕಣ್ಣಗೌಡ ಹೊಸ್ಮನಿ, ಸಿದ್ದಣ್ಣಗೌಡ ದೊಡ್ಮನಿ, ಸಕ್ರೆಪ್ಪಗೌಡ ಪೊಲೀಸ್ ಪಾಟೀಲ್ ಸಿದ್ದಣ್ಣಗೌಡ ದೊಡ್ಮಿನಿ, ರಾಜುಗೌಡ ಹಿರೇಗೌಡರು, ಹೈಯಣ್ಣಗೌಡ ಅರಕೇರಿ, ಮಲ್ಲಪ್ಪಗೌಡ ಪೊಲೀಸ್ ಪಾಟೀಲ್, ಮತ್ತೂಮ್ ಸಾಬ್, ಸುಕ್ರುತ್ ಬಡಿಗೇರ, ಶಾಂತುನಾಯಕ್, ಭೀಮಣಗೌಡ ಬಾಸುವಾರ್, ರೆಡ್ಡೆಪ್ಪಗೌಡ ಅರಕೇರಿ, ಹೊನ್ನಪ್ಪಗೌಡ ಹೊಸ್ಮನಿ, ಈಶಣ್ಣಗೌಡ ಹೊಸ್ಮನಿ, ಬಾಪುಗೌಡ ಪೊಲೀಸ್ ಪಾಟೀಲ್, ಸೂರ್ಯಕಾಂತ ರಾಠೋಡ್, ಇಇ ಬಸವರಾಜ ಹಲ್ಸೇರಿ, ಎಇಇ ಚಂದುಲಾಲ್ ರಾಠೋಡ್ , ಜೆಇ ಕಾಳ್ಕಯ್ಯಸ್ವಾಮಿ ಸೇರಿದಂತೆ ಗ್ರಾಮದ ಮುಖಂಡರು, ಅಧಿಕಾರಿಗಳು ಇದ್ದರು