ಸರಕಾರಿ ಸಾರಿಗೆ ಬಸ್ ಗೆ ದ್ವಿಚಕ್ರ ವಾಹನ ಡಿಕ್ಕಿ ಸ್ಥಳದಲ್ಲಿಯೇ ಮೂರು ಸಾವು

Yadagiri ವಡಗೇರಾ : ತಾಲೂಕಿನ ಶಿವಪುರ ಗ್ರಾಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಗೆ ದ್ವಿಚಕ್ರವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ದ್ವಿಚಕ್ರ ವಾಹನ ಸವಾರ ಹಾಗೂ ಇಬ್ಬರು ಮಕ್ಕಳು ಮೃತಪಟ್ಟ ಗಂಭೀರ ಘಟನೆ ಶಿವಪುರ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಸಂಗಮದಿಂದ ಆಗಮಿಸುತ್ತಿದ್ದ ಬಸ್  ಶಿವಪುರದಲ್ಲಿ ಗ್ರಾಮಸ್ಥನಾದ ಸಾಬಣ್ಣ ತನ್ನ ಮೂರು ಜನ ಮಕ್ಕಳನ್ನು ಕುಳ್ಳಿಸಿಕೊಂಡು ಜಮೀನಿಗೆ ತೆರಳುತ್ತಿರುವ ಸಂದರ್ಭದಲ್ಲಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಸಾಬಣ್ಣ( 34) ಮನುಜ (07) ಚೈತ್ರ(09) ಮೃತಪಟ್ಟಿದ್ದು,ರಂಜಿತಾಳನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಾಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರೊಚ್ಚಿಗೆದ್ದ ಶಿವಪುರ ಗ್ರಾಮಸ್ಥರು ಕಲ್ಲುಗಳಿಂದ ಬಸ್ಸಿನ ಗಾಜುಗಳನ್ನು ಜಖಂಗೊಳಿಸಿದ್ದಾರೆ. ರಸ್ತೆಯ ಪಕ್ಕದಲ್ಲಿ ಬೆಳೆದ ಜಾಲಿ ಕಂಠಿ ಗಿಡಗಳಿಂದ ಬೈಕ್ ಸವಾರನಿಗೆ ಬಸ್ ಬರುವುದು ಕಾಣದೇ ಇರದ ಪರಿಣಾಮ ಈ ಘಟನೆ ನಡೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕಂಠಿ ಗಿಡಗಳನ್ನು ಕಡಿಯಬೇಕು ಎಂದು ಆಗ್ರಹಿಸಿದ್ದಾರೆ.ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *