ಕನ್ನಡ ರಾಜ್ಯೋತ್ಸವ : ಬೆಟ್ಟದ ಕೋಟೆಯ ಮೇಲೆ ಧ್ವಜಾರೋಹಣ

ಶಹಾಪುರ : 68 ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಶಹಾಪುರ ನಗರದ ಬೆಟ್ಟದ ಕೋಟೆಯ ಮೇಲೆ ಕನ್ನಡ ಧ್ವಜಾ ನೆರವೇರಿಸಲಾಯಿತು. ಅದೇ ಸಂದರ್ಭದಲ್ಲಿ ನಾಡ ಸೇವೆ ಸಲ್ಲಿಸಿದ ಯುವಕರಾದ ರಾಜಕುಮಾರ ನಾಯ್ಕಲ್ ಹಳಿಸಗರ ಹಾಗೂ ಶಿವರಾಜ ಕೊನೇರ ಹಳಿಸಗರ ಈ ಇಬ್ಬರನ್ನೂ ಕನ್ನಡ ಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಸಂಘಟನೆಯ  ಭೀಮಣ್ಣ ಶಖಾಪುರ, ಮೌನೇಶ್ ಹಳಿಸಗರ,ವೆಂಕಟೇಶ ಬೋನರ, ಸೋಪಣ್ಣ ಸಗರ,ಮಲ್ಲಯ್ಯ ಸ್ವಾಮಿ,ಭೀಮು ಕಟ್ಟಿಮನಿ, ಸಿದ್ದು ಪಟೇದಾರ,ಅಬ್ದುಲ್ ಹಾದಿಮನಿ, ಉಮೇಶ ಮಹಾಮನಿ, ರಾಘವೇಂದ್ರ ಹಳಿಸಗರ,ಮಲ್ಲನಗೌಡ ಹಗರಟಗಿ,ಕಲ್ಯಾಣಕುಮಾರ ಹಳಿಸಗರ, ಸಾಹೇಬಗೌಡ ಹಳಿಸಗರ ಸೇರಿದಂತೆ ಇತರ ಕನ್ನಡ ಪರ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *