ಮಹರ್ಷಿ ವಾಲ್ಮೀಕಿಯ ಆದರ್ಶಗಳು ನಮಗೆ ದಾರಿದೀಪ : ಭಾಸ್ಕರರಾವ್

ಶಹಾಪುರ : ಮಹರ್ಷಿ ವಾಲ್ಮೀಕಿ ಬರೆದ ವಾಲ್ಮೀಕಿ ರಾಮಾಯಣದಲ್ಲಿನ ಆದರ್ಶಗಳು ನಮಗೆಲ್ಲರಿಗೂ ದಾರಿದೀಪ ಎಂದು ಹಿರಿಯ ನ್ಯಾಯವಾದಿಗಳಾದ ಭಾಸ್ಕರರಾವ್ ಮುಡಬೋಳ್ ಹೇಳಿದರು. ಇಂದು ನಗರಸಭೆಯ ಆವರಣದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರಸಭೆಯ ಸಂಯುಕ್ತಾಶ್ರಯದಲ್ಲಿ ನಡೆದ ವಾಲ್ಮೀಕಿ ಜಯಂತೋತ್ಸವದಲ್ಲಿ ಮಾತನಾಡಿದರು. ವಾಲ್ಮೀಕಿ ಜಾತಿಯತೆಯನ್ನು ಮೀರಿದವರು. ನಮ್ಮ ಮಕ್ಕಳಿಗೆ ಆತನ ಆದರ್ಶಗಳು ದಾರಿದೀಪ. ಆತನ ಕಲ್ಪನೆಗಳನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕಿದೆ ಎಂದು ಹೇಳಿದರು.

ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷರಾದ ಮರೆಪ್ಪ ಪ್ಯಾಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಾಲ್ಮೀಕಿ ಮಹರ್ಷಿಗಳು ಮಾನವಿಯ ಮೌಲ್ಯಗಳನ್ನು ಕೋಟ್ಯಾಂತರ ಜನರಿಗೆ ಕೊಟ್ಟಿದ್ದಾರೆ. ಅಂತವರ ಮೌಲ್ಯಗಳು ನಮ್ಮ ಸಮಾಜದ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು. ಪ್ರತಿ ಕುಟುಂಬದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಹಲವು ರಾಜ ವಂಶಸ್ಥರಿAದ ಕೂಡಿದ ನಮ್ಮ ಸಮಾಜ ಮುಖ್ಯ ವಾಹಿನಿಗೆ ಬರಬೇಕಾಗಿದೆ ಎಂದು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಆರಂಭದಲ್ಲಿ ವಾಲ್ಮೀಕಿ ವೃತ್ತದಿಂದ ವಾಲ್ಮೀಕಿ ಭಾವಚಿತ್ರದ ಮೆರವಣಿಗೆಯನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆ ಸಚಿವರು ಹಾಗೂ ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಚಾಲನೆ ನೀಡಿದರು.ನಗರಸಭೆಯ ಆವರಣದವರೆಗೆ ಮೆರವಣಿಗೆ  ಮಾಡಲಾಯಿತು.ಕಾರ್ಯಕ್ರಮವನ್ನು ತಹಶೀಲ್ದಾರರಾದ ಉಮಾಕಾಂತ ಉಳ್ಳೆರವರು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಪೌರಾಯುಕ್ತರಾದ ರಮೇಶ ಬಡಿಗೇರ, ಸಮಾಜ ಕಲ್ಯಾಣ ಅಧಿಕಾರಿ ರಾಹುತಪ್ಪ, ಹಿಂದುಳಿದ ಕಲ್ಯಾಣ ಅಧಿಕಾರಿ ಚೆನ್ನಪ್ಪಗೌಡ ಚೌದರಿ, ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕ ಷಣ್ಮುಖಪ್ಪ ಕೊಂಗಡಿ, ಪೊಲೀಸ್ ಅಧಿಕಾರಿ ಶ್ಯಾಮಸುಂದರ್ ನಾಯಕ್ ,ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿ ಜಯಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಮೀನಾಕ್ಷಿ ಪಾಟೀಲ್, ಪತ್ರಾಂಕಿತಾಧಿಕಾರಿ ಮೋನಪ್ಪ ಶಿರವಾಳ್, ದಲಿತ ಮುಖಂಡರಾದ ನಾಗಣ್ಣ ಬಡಿಗೇರ್, ಗಂಗಾಮತಸ್ಥ ಮುಖಂಡರಾದ ಸಣ್ಣ ನಿಂಗಪ್ಪ ನಾಯ್ಕೋಡಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ಶಹಾಪುರದಲ್ಲಿ ಸೈನಿಕ ಶಾಲೆಯ ಅವಶ್ಯಕತೆ ಇದೆ

ಶಹಾಪುರ ತಾಲೂಕಿನಲ್ಲಿ ಸೈನಿಕ ಶಾಲೆಯ ಅವಶ್ಯಕತೆ ಇದೆ. ಆಗಿನ ಸಂಸದರಾದ ವೆಂಕಟೇಶ ನಾಯಕರವರ ಗಮನಕ್ಕೂ ತರಲಾಗಿತ್ತು. ಅನಾವಶ್ಯಕವಾಗಿ ಅವರು ತೀರಿದ ಮೇಲೆ ನೆನೆಗುದಿಗೆ ಬಿದ್ದಿತ್ತು ಎಂದು ಭಾಸ್ಕರರಾವ್ ಮುಡಬೋಳ್ ಕಳವಳ ವ್ಯಕ್ತಪಡಿಸಿದರು.ಸುರುಪುರ ನಾಯಕರು ಮೊಗಲರ ಅರಸ ಔರಂಗಜೇಬನನ್ನು  ಸೋಲಿಸಿ ಹಿಮ್ಮಟ್ಟಿಸಿದ ಧೀರರು. ನಾಲ್ವಡಿ ವೆಂಕಟಪ್ಪ ನಾಯಕ ೨೩ನೇ ವಯಸ್ಸಿನಲ್ಲಿ ವೀರ ಪರಾಕ್ರಮದಿಂದ ದೇಶಕ್ಕಾಗಿ ಹೋರಾಟ ಮಾಡಿದ ಶೂರನಾಗಿದ್ದನು. ಇದರಿಂದ ದಕ್ಷಿಣ ಭಾರತದಲ್ಲಿರುವ ಹಲವಾರು ಪ್ರಾಂತ್ಯಗಳು, ದೇವಸ್ಥಾನಗಳು ಮುಸ್ಲಿಮರ ಆಡಳಿತಕ್ಕೆ ಒಳಪಡದೆ ಇನ್ನು ಉಳಿದುಕೊಂಡಿವೆ ಎಂದು ಇತಿಹಾಸದ ಪರಿಕಲ್ಪನೆಯನ್ನು ತಿಳಿಸಿದರು.

 

 

About The Author