ಆಯುಧ ಪೂಜೆಯ ಸಂಭ್ರಮ,ತುಂಬಿ ತುಳುಕುತ್ತಿದೆ ಮಾರುಕಟ್ಟೆಗಳು,ಕನಿಷ್ಠ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಮಾರಾಟ

ಶಹಾಪುರ : ಆಯುಧ ಪೂಜೆ ನಗರದಲ್ಲಿ ಜೋರಾಗಿದೆ. ಹೂವು, ಹಣ್ಣು, ಬಾಳೆದಿಂಡು, ಕರಿ ಕುಂಬಳಕಾಯಿ ಖರೀದಿಸಲು ಮಾರುಕಟ್ಟೆಯಲ್ಲಿ ಮುಗಿಬಿದ್ದಿದ್ಧಾರೆ. ಪೂಜಾ ಸಾಮಗ್ರಿಗಳನ್ನು ಖರೀದಿಸಲು ಮಾರುಕಟ್ಟೆ  ಜನ ಜಂಗುಳಿಯಿಂದ ಗಿಜಿಗುಡುತ್ತಿದೆ. ಬರಗಾಲದ ನಡುವೆಯೂ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರು ಖರೀದಿಯಲ್ಲಿ ನಿರತರಾಗಿದ್ಧಾರೆ.

ನಗರದ ಬಸವೇಶ್ವರ ಸರ್ಕಲ್, ಮಾರುತಿ ರೋಡ್, ತರಕಾರಿ ಮಾರುಕಟ್ಟೆ ಹಾಗೂ ಹಳೇ ಬಸ್ ನಿಲ್ದಾಣ ರಸ್ತೆಯಲ್ಲಿ ಹೂವು, ಹಣ್ಣು, ಬೂದುಗುಂಬಳ, ನಿಂಬೆಹಣ್ಣು ಹೇರಳವಾಗಿ ಬಂದಿದೆ. ಕೂಡ ಹೂವು, ಹಣ್ಣು ಹಾಗೂ ಇತರೆ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಹೂವು, ಹಣ್ಣು, ಇತರೆ ಸಾಮಾನುಗಳ ಬೆಲೆ ಏರಿಕೆ ಕಂಡಿವೆ..

ಹೂವು ಹಿಂದಿನ ದರ( ಕೆ.ಜಿಗೆ) ಈಗೀನ ದರ(ಕೆ.ಜಿಗೆ) ಕನಕಾಂಬರ-ಒಂದು ಮೊಳ 60 ರಿಂದ 70 ರೂ ಮಲ್ಲಿಗೆ ಒಂದು ಮೊಳ 30 ರಿಂದ 40 ರೂ ಕಾಕಡ-200-500ರೂ ಜಾಜಿ ಮಲ್ಲಿಗೆ-150-200ರೂ ಸೇವಂತಿಗೆ-60-150ರೂ ಸುಗಂಧರಾಜ-100-300ರೂ ಗುಲಾಬಿ ಒಂದಕ್ಕೆ 10 ರೂ ಮಾವಿನ ಎಲೆ-40ರೂ(ಒಂದು ಕಟ್ಟಿಗೆ)

ಹಾರ. ಚಂಡಿಹೂ ಕೆಜಿಗೆ 100 ರಿಂದ 120. ಚಿಕ್ಕಗಾತ್ರದ ಚಂಡಿ ಹೂವಿನ ಒಂದು ಹಾರಕ್ಕೆ 60 ರೂ. ಸೇವಂತಿಗೆ ಹಾರ ಒಂದಕ್ಕೆ 80 ರಿಂದ120, ವಾಹನಗಳಿಗೆ ಬೇಕಾದ ದೊಡ್ಡ ಹಾರ ಒಂದಕ್ಕೆ 250 ರಿಂದ 1000 ರೂ ವರೆಗೆ.

ಹಣ್ಣುಗಳ ಬೆಲೆ ಹಣ್ಣುಗಳು ಹಿಂದಿನ ಬೆಲೆ ಈಗೀನ ಬೆಲೆ ಸೇಬುಹಣ್ಣು-80-120ರೂ ಕಿತ್ತಳೆ-60-80ರೂ ಮೊಸಂಬಿ-70-100ರೂ ಬಾಳೆಹಣ್ಣು-60 -80ರೂ ದಾಳಿಂಬೆ-80-100ರೂ

ಆಯುಧ ಪೂಜೆಯ ವಿಶೇಷತೆ

ಈ ದಿನ ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವ ಚಾಕುವಿನಿಂದ ಹಿಡಿದು, ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ಆಯುಧ ಪೂಜೆಯನ್ನು ಮಾಡಲಾಗುತ್ತದೆ.ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ, ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಬಹಳ ವರ್ಷಗಳಿಂದ ಉಳಿದುಕೊಂಡು ಬಂದಿದೆ.

ಮಹಾಭಾರತದ ಉಲ್ಲೇಖ

ಇನ್ನು ಮಹಾಭಾರತದಲ್ಲಿ ಆಯುಧ ಪೂಜೆಯ ಸ್ಪಷ್ಟ ಉಲ್ಲೇಖವಿದ್ದು, ದ್ವಾಪರ ಯುಗದಲ್ಲಿ ಪಾಂಡವರು ಹದಿಮೂರು ವರ್ಷಗಳ ವನವಾಸ ಮುಗಿಸುತ್ತಾರೆ. ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸುತ್ತಾರೆ. ಈ ಅಜ್ಞಾತವಾಸದ ಅಂತಿಮ ದಿನವೇ ವಿಜಯದಶಮಿ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲಾ ಬನ್ನಿ ಮರದಲ್ಲಿ ಬಚ್ಚಿಡುತ್ತಾರೆ. ವಿಜಯದಶಮಿ ಅಂದರೆ ತಮ್ಮ ಅಜ್ಞಾತವಾಸ ಮುಗಿದ ದಿನದಂದು ಬನ್ನಿಗಿಡದಲ್ಲಿ ಬಚ್ಚಿಟ್ಟಿದ್ದ ತಮ್ಮ ಶಸ್ತ್ರಾಸ್ತ್ರಗಳನ್ನೆಲ್ಲ ತೆಗೆದು ವಿರಾಟರಾಜನ ಶತ್ರುಗಳ ವಿರುದ್ಧ ಪಾಂಡವರು ವಿಜಯವನ್ನು ಸಾಧಿಸುತ್ತಾರೆ.

ಹಬ್ಬದ ಸಂದರ್ಭದಲ್ಲಿ ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಸೇರಿದಂತೆ ವಿವಿಧ ಭಾಗಗಳಿಂದ ಹೂ ಮಾರಲು ಬರುತ್ತಾರೆ. ಹಬ್ಬದ ಸಂದರ್ಭ ನೋಡಿಕೊಂಡು ವ್ಯಾಪಾರ ಮಾಡಿಕೊಂಡು ಹೋಗುತ್ತಾರೆ. ಆದರೆ ಸ್ಥಳೀಯವಾಗಿ ಹೂ ಮಾರುವವರಿಗೆ ವ್ಯಾಪಾರ ಕಡಿಮೆ.

ಅಮೃತ ಹೂಗಾರ್ ಹೂವಿನ ವ್ಯಾಪಾರಿ.

ಸಿಂದಗಿ, ಬಿಜಾಪುರ್, ಕಮಲಾಪುರ್ ಕಡೆಯಿಂದ ಬಾಳೆ ಗಿಡ ಜೋಡಿಗೆ 20 ರಿಂದ 30 ರೂಗೆ ಖರೀದಿಸಿ ತಂದಿದ್ದೇವೆ. ನಾವು ಜೋಡಿಗೆ 40 ರಿಂದ 50 ರೂಪಾಯಿಗೆ ಮಾರಾಟ ಮಾಡುತ್ತೇವೆ. ಎಲ್ಲ ಮಾರಾಟವಾದರೆ ಕೈಗೆ ಒಂದಿಷ್ಟು ಲಾಭ ಸಿಗುತ್ತದೆ. ಒಂದು ವೇಳೆ ಮಾರಾಟವಾಗದಿದ್ದರೆ ನಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಈ ಹಿಂದೆ ಸಾಕಷ್ಟು ಸಲ ನಷ್ಟ ಅನುಭವಿಸಿದ್ದೇನೆ.

ಮಲ್ಲಣ್ಣ, ದ್ಯಾವಪ್ಪ, ಬಸಪ್ಪ,ಬಾಳೆ ಹಣ್ಣು ವ್ಯಾಪಾರಿಗಳು 

About The Author