ಸಾರ್ವಜನಿಕ ಆಸ್ಪತ್ರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರಾದ ಡಾ.ಇಂದುಮತಿ ಭೇಟಿ ಪರಿಶೀಲನೆ

ಶಹಾಪುರ : ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶಕರಾದ ಡಾ.ಇಂದುಮತಿ ಭೇಟಿ ನೀಡಿದರು. ಆಸ್ಪತ್ರೆಯಲ್ಲಿರುವ ಪ್ರತಿ ವಾರ್ಡ್ಗಳನ್ನು ವೀಕ್ಷಿಸಿ ಪರಿಶೀಲಿಸಿದರು. ಪುರುಷ ಮತ್ತು ಮಹಿಳಾ ರೋಗಿಗಳ ವಾರ್ಡಿಗೆ ಭೇಟಿ ನೀಡಿ ಆಸ್ಪತ್ರೆ ನೀಡುತ್ತಿರುವ ವಿವರಗಳನ್ನು ರೋಗಿಗಳಿಂದ ಪಡೆದುಕೊಂಡರು. ಶಸ್ತ್ರಚಿಕಿತ್ಸೆ ನಂತರ ರೋಗಿಗಳನ್ನು ಹೊರ ವಾರ್ಡಗಳಿಗೆ ಶಿಫ್ಟ್ ಮಾಡುವ ಕೋಣೆಗಳ ವಿನ್ಯಾಸಗಳನ್ನು ಪರಿಶೀಲಿಸಿದ ಡಾ. ಇಂದುಮತಿಯವರು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿಯಾದ ಡಾ.ಯಲ್ಲಪ್ಪ ಮತ್ತು ಡಾ. ಬೈರಮಡಿಗೆ ಅವರ ಜೊತೆ ಆಸ್ಪತ್ರೆಗೆ ಬೇಕಾಗಿರುವ ಕೊರತೆಗಳ ಬಗ್ಗೆ ಚರ್ಚಿಸಿದರು.ಶಹಪುರ ಆಸ್ಪತ್ರೆಯು ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲೂಕು ಆಸ್ಪತ್ರೆ ಕೇಂದ್ರವಾಗಿದ್ದು, ತಾಲೂಕಿಗೆ ಹೆರಿಗೆ ಮತ್ತು ಮಕ್ಕಳ  ಆಸ್ಪತ್ರೆಯ ಅತ್ಯವಶ್ಯಕವಾಗಿ ಬೇಕಾಗಿದೆ. ಈಗಾಗಲೇ ಯಾದಗಿರಿಯಲ್ಲಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಪ್ರಾರಂಭವಾಗಿದ್ದು, ನಮ್ಮಲ್ಲಿಯೂ ಕೂಡ ಅತ್ಯಾವಶ್ಯಕವಾಗಿದೆ ಎಂದು ಆಡಳಿತಾದಿಕಾರಿ ಡಾ.ಯಲ್ಲಪ್ಪ ರವರು ತಿಳಿಸಿದರು. ಸರಕಾರಕ್ಕೆ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸ್ತಾವನೆ ಈಗಾಗಲೇ ಸರಕಾರಕ್ಕೆ ಸಲ್ಲಿಸಿದ್ದು ತಾವು ಮಂಜೂರಾತಿಗಾಗಿ ಮುತುವರ್ಜಿವಹಿಸಿಬೇಕು ಎಂದರು.
ಸುರುಪುರದಲ್ಲಿಯೂ ಕೂಡ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಇದೆ.ಶಸ್ತ್ರ ಚಿಕಿತ್ಸೆಯೂ ಕೂಡ ಅತಿ ಚಿಕ್ಕದಾಗಿದ್ದು, ಅದನ್ನು ಮೆಡಲರ್ ಓಟಿ ಕೇಂದ್ರವನ್ನಾಗಿಸಬೇಕಿದೆ.ದಿನದಿಂದ ದಿನಕ್ಕೆ ಹೆಚ್ಚು ಜನರು ಆಸ್ಪತ್ರೆಗೆ ಬರುತ್ತಿದ್ದಾರೆ.ಇನ್ನು ಮೂಲಭೂತ ಸೌಕರ್ಯಗಳು ಆಗಬೇಕಿದೆ. ಸೌಲಭ್ಯಗಳ ಕೊರತೆ ನಮ್ಮ ಆಸ್ಪತ್ರೆಗಿದ್ದು, ಔಷಧಿಗಳ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಮನವರಿಕೆ ಮಾಡಿಕೊಟ್ಟರು.ಆಸ್ಪತ್ರೆಯ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಯವರು ಇದ್ದರು.

About The Author