ಕೆರೆಗಳ ಅಭಿವೃದ್ಧಿಯಿಂದ ಸರ್ವರ ಅಭ್ಯುದಯ ಸಾಧ್ಯ : ಶರಣು ಗದ್ದುಗೆ

ಶಹಾಪುರ : ನೀರು ಜೀವ ಜಲ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಸರ್ವರ ಅಭ್ಯುದಯ ಸಾಧ್ಯ.ನಮ್ಮೂರ ಕೆರೆಗಳು ನೀರನ್ನು ಸಂಗ್ರಹಿಸುವ ಅಕ್ಷಯಪಾತ್ರೆಗಳಾಗಬೇಕು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಗೆ ನಮ್ಮೆಲ್ಲರ ಸಹಕಾರ ಅತ್ಯಗತ್ಯ.ನೀರು ಜೀವ ಜಲ ಕೆರೆಗಳ ಅಭಿವೃದ್ಧಿಯಿಂದ ಮಾತ್ರ ಸರ್ವರ ಅಭ್ಯುದಯ ಸಾಧ್ಯ ಎಂದು  ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಡಾ.ಶರಣು ಗದ್ದುಗೆ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಫಕೀರೇಶ್ವರ ಸಭಾಮಂಟಪದಲ್ಲಿ ಹಮ್ಮಿಕೊಂಡ ಕೆರೆ ಪುನಶ್ಚೇತನ ಸಮಿತಿಯ ಪದಾಧಿಕಾರಿಗಳ ವಿಶೇಷ ಪ್ರೇರಣ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
*****
         ಜಿಲ್ಲಾ ನಿರ್ದೇಶಕರಾದ ಕಮಲಾಕ್ಷರವರು ಮಾತನಾಡಿ, ಯಾದಗಿರಿ ಜಿಲ್ಲೆಯಾದ್ಯಂತ ಪುನಶ್ಚೇತನಗೊಂಡಿರುವ ೧೧ಕೆರೆಗಳ ವರದಿ ಮತ್ತು ಪ್ರಗತಿಯನ್ನು ಮಂಡಿಸಿದರು, ಪೂಜ್ಯ ವೀರೇಂದ್ರ ಹೆಗ್ಗಡೆ ಅವರ ಯೋಚನೆಯಲ್ಲಿ ಮಾತೃಶ್ರೀ ಹೇಮಾವತಿ ಅಮ್ಮನವರು ಈ ಕೆರೆಗಳ ಪುನಶ್ಚೇತನ ಕಾರ್ಯಕ್ರಮಕ್ಕೆ ಆಲೋಚಿಸಿ ರಾಜ್ಯದಲ್ಲಿ ಸುಮಾರು ೬೨೬  ಕೆರೆಗಳ ಪುನಶ್ಚೇತನ ಮಾಡಿದ ಹೆಗ್ಗಳಿಕೆ ಅಮ್ಮನವರಿಗೆ ಸಲ್ಲಬೇಕಾಗಿದೆ ಎಂದರು.
****
ಧರ್ಮಸ್ಥಳದಿಂದ ಆಗಮಿಸಿದ ಕೆರೆ ವಿಭಾಗವನ್ನು ನೋಡಿಕೊಳ್ಳುವ ನಿರ್ದೇಶಕ ಶಿವಾನಂದಾಚಾರ್ಯ ನಮ್ಮ ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮತ್ತು ಜನರ ಸಹಕಾರದಿಂದ ಪ್ರಸ್ತುತ ದಿನದಗಳವರೆಗೆ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಲ್ಲಿ ಹೂಳೆತ್ತಲಾಗಿರುವ ಅಂಕಿ ಅಂಶ ಮತ್ತು ಕೆರೆ ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿಸಿದರು.
*****
    ಸಂಪೂನ್ಮಲ ವ್ಯಕ್ತಿ ಮಹಾವೀರ ಅವರು ನೀರು ನಿರ್ವಹಣೆ,ಕೇಂದ್ರ ಸರ್ಕಾರದ ಯೋಜನೆಗಳು, ಗ್ರಾಮಸ್ಥರ ಸಹಭಾಗಿತ್ವ, ಪಂಚಭೂತಗಳ ಪರಿಕಲ್ಪನೆ, ಧರ್ಮಸ್ಥಳದ ಸಮಾಜಮುಖಿ ಯೋಜನೆ ಕುರಿತು ಉಪನ್ಯಾಸ  ನೀಡಿದರು.ಯಾದಗಿರಿ ಜಿಲ್ಲೆಯಲ್ಲಿ ಒಟ್ಟು ೧೧ ಕೆರೆ ಪುನಶ್ಚೇತನದಲ್ಲಿ ಶ್ರೀ ಸೋಮನಾಥ ಕೆರೆ ಕಕ್ಕೆರಾ ಉತ್ತಮ ಕೆರೆ ನಿರ್ವಹಣೆ ಎಂದು ಅಭಿನಂದನ ಪತ್ರವನ್ನು ಕೆರೆ ಸಮಿತಿಯ ಅಧ್ಯಕ್ಷ ಹನುಮಂತರಾಯಗೌಡ ಅವರಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಯೋಜನಾಧಿಕಾರಿಗಳು, ಕೃಷಿ ಮೇಲ್ವಿಚಾರಕರು, ವಲಯ ಮೇಲ್ವಿಚಾರಕರು ಕೆರೆ ಸಮಿತಿಯ ಸದಸ್ಯರು ಇದ್ದರು.

About The Author