ರೈತರ ಬೆಳೆಗಳಿಗೆ ಸಮರ್ಪಕ ನೀರು, ವಿದ್ಯುತ್ ನೀಡುವಂತೆ ವಿನೋದ ಪಾಟೀಲ ಒತ್ತಾಯ

ವಡಗೇರಾ : ತಾಲೂಕಿನ ಬೋಳಾರಿ,ಗುಂಡಗುರ್ತಿ, ಟೋಕಾಪುರ, ಹುಂಡೆಕಲ,ಅರಳಳ್ಳಿ ಹಾಗೂ ಇನ್ನಿತರ ಗ್ರಾಮದ ರೈತರ ಹೊಲಗಳಿಗೆ ಮಾಜಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿನೋದ ಪಾಟೀಲ ದೋರನಹಳ್ಳಿ ಭೇಟಿ ನೀಡಿ  ಕಾಲುವೆಗಳ ಪರಿಶೀಲನೆ ಮಾಡಿ ರೈತರ ಸಮಸ್ಯೆಯನ್ನು ಆಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದರು.
ಈ ಬಾರಿಯು ಬರಗಾಲದಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ಕಾಲುವೆಗಳ ಊಳು ತೆಗೆಸಿ  ರೈತರಿಗೆ ಸಮರ್ಪಕ ನೀರು ಒದಗಿಸುವುದರ ಜೊತೆಗೆ ದಿನಕ್ಕೆ ಕನಿಷ್ಠ 8 ಗಂಟೆ ವಿದ್ಯುತ್ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು.ಈಗಾಗಲೇ ಸಾಲ ಮಾಡಿ ರೈತರು ಮುಂಗಾರು ಬಿತ್ತನೆ ಮಾಡಿದ್ದು, ಮಳೆ ಬಾರದ ಕಾರಣ ಹತ್ತಿ ತೊಗರಿ ಇನ್ನಿತರ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ. ರೈತರು ತುಂಬಾ ತೊಂದರೆಯಲ್ಲಿರುವ ಕಾರಣ ಖುದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಲ್ಲಿ ಮನವಿ ಮಾಡಿಕೊಂಡು, ನಿಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಾಗಿ ರೈತರಿಗೆ ಭರವಸೆ ನೀಡಿದರು.
 ರೈತರು ಕೂಡ ಕಾನೂನು ಕ್ರಮ ಕೈಗೊಳ್ಳದೆ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಮನವಿ ಮಾಡಿಕೊಂಡರು. ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು,ದಯವಿಟ್ಟು ರೈತರು ಅಂತ ಕೆಟ್ಟ ಆಲೋಚನೆಯನ್ನು ಬಿಟ್ಟು ಧೈರ್ಯದಿಂದ ಇರಿ.  ನಿಮ್ಮ ಜೊತೆ ನಾನಿರುವೆ ಎಂದು ಹೇಳಿದರು. ಗಂಗಾಧರ, ಹೊನ್ನಪ್ಪ, ಅಯ್ಯಪ್ಪ,ವಿಶ್ವರಾಧ್ಯ, ಭೀಮಣ್ಣ,ಮಲ್ಲಪ್ಪ,ಸಾಹೇಬರೆಡ್ಡಿ, ವಿಜಯಕುಮಾರ, ಅಯ್ಯಣ್ಣ ಇನ್ನಿತರರು ಇದ್ದರು.

About The Author