ಹಯ್ಯಳ‌ ಬಿ ಹೋಬಳಿ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ರೈತರು ಕಂಗಾಲು ಮರಿಗೌಡ ಆರೋಪ

ವಡಗೇರಿ : ತಾಲೂಕಿನ ಹೈಯ್ಯಳ ಬಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿದ್ದು, ರೈತರು ಕಂಗಲಾಗಿದ್ದಾರೆ ಎಂದು ರೈತ ಮುಖಂಡ ಮರಿಗೌಡ ಚಿಕ್ಕಮೇಟಿ ಆರೋಪಿಸಿದ್ದಾರೆ.ಈ ವರ್ಷ ಮಳೆ ಸರಿಯಾದ ಪ್ರಮಾಣದಲ್ಲಿ ಆಗಿಲ್ಲ. ರೈತರು ಮಳೆ ಇಲ್ಲದೆ ಕಂಗಾಲಾಗಿದ್ದು, ಕಾಲುವೆಗಳಿಗೆ ನೀರು ಕೂಡ ಸರಿಯಾದ ರೀತಿಯಲ್ಲಿ ಬಿಡುತ್ತಿಲ್ಲ. ಬೋರ್ವೆಲ್ ಗಳ ಮೂಲಕವಾದರೂ ಬೆಳೆಗಳಿಗೆ ನೀರುಣಿಸಲು ಸರಿಯಾದ ಸಮಯಕ್ಕೆ ವಿದ್ಯುತ್ ನೀಡುತ್ತಿಲ್ಲ.ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವಿದ್ಯುತ್ ಕಣ್ಣಾ ಮುಚ್ಚಾಲೆ ಆಡುತ್ತಿದೆ. ಸಿಂಗಲ್ ಫೇಸ್ ವಿದ್ಯುತ್ ಒದಗಿಸಲಾಗುತ್ತಿದೆ. ಹಯ್ಯಳ ಹೋಬಳಿ ವ್ಯಾಪ್ತಿಯಲ್ಲಿಯೇ ಕಳೆದ ಎರಡು ದಿನಗಳಿಂದ ವಿದ್ಯುತ್ ಇಲ್ಲ. ಸಾರ್ವಜನಿಕರು ಮತ್ತು ರೈತರು ಕಂಗಾಲಾಗಿದ್ದಾರೆ. ಬೆಳೆದ ಬೆಳೆಗಳನ್ನೆ ನಂಬಿಕೊಂಡಿದ್ದ ರೈತರಿಗೆ ಬೋರ್ವೆಲ್ ಗಳ ಮುಖಾಂತರ ಬೆಳೆಗಳಿಗೆ ನೀರು ಹರಿಸಬೇಕಿದೆ. ನಾವು ಕಾಂಗ್ರೆಸ್ ಸರ್ಕಾರವನ್ನು ನಂಬಿ ಕೆಟ್ಟೆವು ಎಂದು ಆಕ್ರೋಶ ಹೊರ ಹಾಕಿದರು. ರೈತರಿಗೆ ಆರು ಗಂಟೆಗಳ ಕಾಲ ವಿದ್ಯುತ್ ತ್ರೀ ಪೇಸ್ ವಿದ್ಯುತ್ ನೀಡಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

Leave a Reply

Your email address will not be published. Required fields are marked *