ವಡಗೇರ:ಸರಕಾರ NMMS ಆ್ಯಪ್ ಹಾಜರಾತಿಯ ಆದೇಶವನ್ನು ಕೂಡಲೆ ರದ್ದು ಮಾಡಬೇಕು ಸಾಮಾಜಿಕ ಎಂದು ಕಾರ್ಯಕರ್ತ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.ತಾಲೂಕಿನ ಹಯ್ಯಾಳ ಬಿ ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿಗಳು ಮನರೇಗಾ ಯೋಜನೆಯಡಿಯಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಕೆಲಸ ನೀಡಿದ್ದಾರೆ.ಆದರೆ ಸರಕಾರ ಎನ್ ಎಮ್ ಎಮ್ ಎಸ್ ಎಂಬ ಹೊಸ ಆ್ಯಪ್ ನಲ್ಲಿ ಕಡ್ಡಾಯವಾಗಿ ಎರಡು ಸಲ ಹಾಜರಾತಿ ಹಾಕಿ ಅಪ್ಲೊಡ್ ಮಾಡುವ ನಿಯಮ ಜಾರಿಗೆ ತಂದಿದೆ. ಯಕ್ಷಿಂತಿ ಗ್ರಾಮದಲ್ಲಿ 1/04/2022 ರಿಂದ 08/04/2022 ರವರೆಗೆ ಕೂಲಿಕಾರ್ಮಿಕರು ಎಂಟು ದಿನಗಳವರೆಗೆ ಕೆಲಸ ಮಾಡಿದ್ದಾರೆ. NMMS ಆ್ಯಪ್ ತಾಂತ್ರಿಕ ಸಮಸ್ಯಗಳಿಂದ ನಾಲ್ಕು ಹಾಜರಾತಿ ಬಂದಿವೆ. ಇನ್ನುಳಿದ ನಾಲ್ಕು ದಿನದ ಕೂಲಿ ಯಾರು ಕೊಡುವರು.ದಿನನಿತ್ಯ ಕೂಲಿಕಾರ್ಮಿಕರು ಸುಡುವ ಬಿಸಿಲಿನಲ್ಲಿ ಕೆಲಸ ಮಾಡಿದರು ಹಾಜರಾತಿ ಬರುತ್ತಿಲ್ಲ.
ಸಂಬಂದಪಟ್ಟ ಮೇಲಾಧಿಕಾರಿಗಳ ಗಮನಕ್ಕೆ ತಂದರು ಅವರ ಬಳಿ ಉತ್ತರ ಇಲ್ಲ. ದುಡಿದು ೧ ತಿಂಗಳಾದರು ಕೂಲಿಕಾರ್ಮಿಕರ ಖಾತೆಗೆ ಹಣ ಜಮೆ ಮಾಡಿಲ್ಲ. ಇಂತ ಸಮಸ್ಯಗಳಿರುವದರಿಂದ ಕೂಲಿಕಾರ್ಮಿಕರು ನರೇಗಾ ಕೆಲಸಕ್ಕೆ ಮುಂದಾಗುತ್ತಿಲ್ಲ.ಸರಕಾರ ದಿನಕ್ಕೊಂದು ಆದೇಶ ತಂದು ದುಡಿಯುವ ವರ್ಗವನ್ನು ದಮನ ಮಾಡುತ್ತಿದೆ. ಕೂಡಲೆ ಸರಕಾರ ಗಮನಿಸಿ NMMS ಆ್ಯಪ್ ಹಾಜರಾತಿಯ ಆದೇಶವನ್ನು ರದ್ದು ಮಾಡಬೇಕು. ಮೊದಲಿನ ಹಾಗೆ ಕೂಲಿಕಾರ್ಮಿಕರು ಕೆಲಸ ಮಾಡುವ ಹಾಗೆ ಮಾಡಬೇಕೆಂದು ಆಗ್ರಹಿಸಿದ್ದಾರೆ.