ಮಾನಸಿಕ ಆರೋಗ್ಯ ದಿನಾಚರಣೆ | ಕಾನೂನು ಅರಿವು ನೆರವು ಕಾರ್ಯಕ್ರಮ

ಶಹಾಪುರ : ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಂದು ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ನಗರದ ಹಿರಿಯ ನ್ಯಾಯಾಧೀಶರಾದ ಶ್ರೀಯುತ ಸಿದ್ರಾಮ ಟಿಪಿ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರು ಸಸಿಗೆ ನೀರು ಎರೆಯುವ ಮುಖಾಂತರ ಉದ್ಘಾಟಿಸಿದರು.ಮಾನಸಿಕವಾಗಿ ಅಸ್ವಸ್ಥರಾದವರನ್ನು ಸಂಬಂಧ ಪಟ್ಟ ಕುಟುಂಬಸ್ಥರು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಅನಾವಶ್ಯಕ ಪರಿಸ್ಥಿತಿಯಲ್ಲಿ ವೈದ್ಯಕೀಯ ನೆರವು ಪಡೆಯುವುದು ಸೂಕ್ತ.ಸಾರ್ವಜನಿಕರು ರಸ್ತೆಯ ಮಧ್ಯದಲ್ಲಿ ಯಾರಾದರೂ ಮಾನಸಿಕ ಅಸ್ವಸ್ಥರನ್ನು ಕಂಡರೆ ಅವರಿಗೆ ಅವರ ಮನೆಗೆ ಅಥವಾ ಆಸ್ಪತ್ರೆಗೆ ಸೇರುವಂತೆ ನಾವೆಲ್ಲರೂ ಸಹಕರಿಸಬೇಕು ಎಂದು ನ್ಯಾಯಾಧೀಶರಾದ ಸಿದ್ರಾಮ ಟಿಪಿ ಕರೆ ನೀಡಿದರು. ಅವರು ಕೂಡ ನಮ್ಮಂತೆ ಬಾಳಿ ಬದುಕುವವರು. ಅವರ ಬಗ್ಗೆ ನಮಗೆ ಕಾಳಜಿ ಇರಬೇಕು ಎಂದರು.
ಹಿರಿಯ ವೈದ್ಯರಾದ ವೆಂಕಟೇಶ ಬೈರಮಡಗಿ ಮಾತನಾಡಿ, ಆರೋಗ್ಯ ಮಹಾಭಾಗ್ಯ. ಇದರ ಬಗ್ಗೆ ನಾವು ಕಾಳಜಿ ವಹಿಸಬೇಕಿದೆ. ಮಾನಸಿಕ ಆರೋಗ್ಯಕ್ಕೆ ಮದ್ದು ಇದೆ. ಆರ್ಥಿಕವಾಗಿ ಮನುಷ್ಯ ದುರ್ಬಲವಾದಾಗ ಮಾನಸಿಕ ಅಸ್ವಸ್ಥನಾಗಿರುವುದು ಹೆಚ್ಚು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವರಾಜ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು, ಸಂತೋಷ್ ದೇಶ್ಮುಖ್ ವಕೀಲರ ಸಂಘದ ಅಧ್ಯಕ್ಷರು, ಡಾ. ಯಲ್ಲಪ್ಪ ಪಾಟೀಲ್ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು, ದಿವ್ಯರಾಣಿ ಸಹಾಯಕ ಸರಕಾರಿ ಅಭಿಯೋಜಕರು, ಕಾವ್ಯಶ್ರೀ ಪ್ರಭಾವಿ ತಾಲೂಕು ಆರೋಗ್ಯ ಅಧಿಕಾರಿ,ಭಾಸ್ಕರ್ ರಾವ್ ಮುಡುಬೋಳ ಹಿರಿಯ ವಕೀಲರು ಸೇರಿದಂತೆ ವೈದ್ಯಕೀಯ ಸಿಬ್ಬಂದಿಯವರು ಉಪಸ್ಥಿತರಿದ್ದರು.
 ಯಾದಗಿರಿ ಜಿಲ್ಲೆಯಲ್ಲಿ ತಿಂಗಳ ಮೊದಲ ಮಂಗಳವಾರ ಶಹಪುರ, ಎರಡನೇ ಮಂಗಳವಾರ ಸುರಪುರ, ಮೂರನೇ ಮಂಗಳವಾರ ಗುರುಮಿಟ್ಕಲ್, ನಾಲ್ಕನೇ ಮಂಗಳವಾರ ಹುಣಸಗಿ, ಒಂದನೇ ಶುಕ್ರವಾರ ವಡಗೇಯರದಲ್ಲಿ ಮನೊ ಚೈತನ್ಯ ಕಾರ್ಯಕ್ರಮದಡಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮಾನಸಿಕ ತಜ್ಞರಿಂದ ಸಲಹೆ ಪಡೆದು ಚಿಕಿತ್ಸೆ ಪಡೆದುಕೊಳ್ಳಬಹುದು.

About The Author