ಮಹಾಶೈವ ಧರ್ಮಪೀಠದಲ್ಲಿ 65 ನೆಯ ‘ ಶಿವೋಪಶಮನ ಕಾರ್ಯ’ 

 
 ಗಬ್ಬೂರು : ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಕ್ಟೋಬರ್ 08 ರ ರವಿವಾರದಂದು 65 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಶ್ರೀಕ್ಷೇತ್ರ ಕೈಲಾಸವನ್ನರಸಿ ದೂರದೂರದ ಊರುಗಳಿಂದ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.
      ಮಹಾಶೈವ ಧರ್ಮಪೀಠದಲ್ಲಿ ಅಕ್ಟೋಬರ್ 15 ರಿಂದ ಅಕ್ಟೋಬರ್ 24 ರ ವರೆಗೆ ನಡೆಯಲಿರುವ” ಮಹಾಶೈವ ಶರನ್ನವರಾತ್ರಿ ಉತ್ಸವ” ದ ಆಮಂತ್ರಣ‌ ಪತ್ರಿಕೆಗಳನ್ನು ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ಪೂಜಿಸಿ,ಲೋಕಾರ್ಪಣೆಗೊಳಿಸಲಾಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪೀಠದ ಪರಂಪರೆಯಂತೆ ಸಿದ್ಧಿವಿನಾಯಕದೇವರಿಗೆ ಆಮಂತ್ರಣ ಪತ್ರಿಕೆಯನ್ನು ಅರ್ಪಿಸುವ ಮೂಲಕ ಆಮಂತ್ರಣ ಪತ್ರಿಕೆಗಳ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ,ಧರ್ಮಪೀಠದ ಭಕ್ತರುಗಳಿಗೆ ಕಾರ್ಡುಗಳನ್ನು ನೀಡುವ ಮೂಲಕ ಮಹಾಶೈವ ಧರ್ಮಪೀಠದ 2023 ನೇ ಸಾಲಿನ ಮಹಾಶೈವ ಶರನ್ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಇಂದಿನ ದಾಸೋಹಸೇವೆ ಸಲ್ಲಿಸಿದ ರಘುನಾಥನಹಳ್ಳಿಯ ವೀರಭದ್ರಯ್ಯಸ್ವಾಮಿ ದಂಪತಿಗಳನ್ನು ಪೀಠದ ಪರವಾಗಿ ಶಿವಯ್ಯಸ್ವಾಮಿ ಮಠಪತಿಯವರು ಸನ್ಮಾನಿಸಿದರು.
     ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿಯವರು ಪ್ರಸಾದಸ್ವೀಕಾರ ಸಮಯದಲ್ಲಿ ‘ ಪೀಠಾಧ್ಯಕ್ಷರು ನವರಾತ್ರಿಯ ಅಂಗವಾಗಿ ಅಕ್ಟೋಬರ್ 10 ರಿಂದ ಅಕ್ಟೋಬರ್ 24 ರವರೆಗೆ ಅಖಂಡಮೌನ ಹಾಗೂ ನಿರಾಹಾರವ್ರತದೊಂದಿಗೆ ನವರಾತ್ರ್ಯಾನುಷ್ಠಾನ ಕೈಗೊಳ್ಳುತ್ತಿರುವುದರಿಂದ ಅಕ್ಟೋಬರ್ 15ಮತ್ತು ಅಕ್ಟೋಬರ್ 22 ರ ಎರಡು ರವಿವಾರಗಳಂದು ಭಕ್ತರನ್ನು ನೋಡುವ ‘ ಶಿವೋಪಶಮನ ಕಾರ್ಯ’ ನಡೆಯುವುದಿಲ್ಲ.ಆದ್ದರಿಂದ ಭಕ್ತಾದಿಗಳು ಎರಡುವಾರಗಳ ಕಾಲ ಸಹಕರಿಸಬೇಕು’ ಎಂದು ಧರ್ಮ ಪೀಠದ ಪರವಾಗಿ ಭಕ್ತರುಗಳಿಗೆ ಮಾಹಿತಿ ನೀಡಿದರು.
       ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ಮಹಾಶೈವ ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮಹಾಶೈವ ಧರ್ಮಪೀಠದ ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ದಾಸೋಹ ಸಮಿತಿಯ ಅಧ್ಯಕ್ಷರಾದ ಗುರುಬಸವ ಹುರಕಡ್ಲಿ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಉಮೇಶ ಸಾಹುಕಾರ ಅರಷಣಗಿ, ಬಾಬುಗೌಡ ಯಾದವ ಸುಲ್ತಾನಪುರ, ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಸಿದ್ರಾಮಯ್ಯಸ್ವಾಮಿ ರಘುನಾಥನಹಳ್ಳಿ,ತಾತಪ್ಪ ಚಿಕ್ಕಹಳ್ಳಿ, ರಂಗಪ್ಪ ಗಾಲಿ,ರಂಗನಾಥ ಮಸೀದಪುರ,ಭೀಮಣ್ಣ ಮಸೀದಪುರ,ಯಲ್ಲಪ್ಪ ಕರಿಗಾರ,ರಘುರಾಮ ಹೇರೂರು, ಹನುಮೇಶ,ಶಿವಕುಮಾರ ವಸ್ತಾರ ಹಾಗೂ ಮಹಾಶೈವ ಧರ್ಮಪೀಠದ ಪ್ರಸರಣಾಧಿಕಾರಿ ಉದಯಕುಮಾರ ಮಡಿವಾಳ ಸೇರಿದಂತೆ ಮಹಾಶೈವ ಧರ್ಮಪೀಠದ ಭಕ್ತರುಗಳು ಉಪಸ್ಥಿತರಿದ್ದರು.

About The Author