ಶೇಕಡ 15ರಷ್ಟು ವೇತನ ಹೆಚ್ಚಳ ಅನುದಾನ ಬಿಡುಗಡೆಗೆ ಧನ್ಯವಾದಗಳು, ಎಲ್ಲರಿಗೂ ಅನ್ವಯ ಮಾಡಿ ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು : ಆರೋಗ್ಯ ಇಲಾಖೆ ಮತ್ತು ರಾಷ್ಟೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಶ್ರೀನಿವಾಸಚಾರಿ ವರದಿ ಮೇಲೆ 15% ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶಿಸಿದೆ. ಮಾಜಿ ಶಾಸಕರು ಹಾಗೂ ಸಂಘದ ಗೌರವ ಅಧ್ಯಕ್ಷರಾದ ಆಯನೂರು ಮಂಜುನಾಥ್ ರವರ ಮಾರ್ಗದರ್ಶನದ ಮೇರೆಗೆ ಕಳೆದಬ 04-05 ವರ್ಷಗಳ ಹೋರಾಟಕ್ಕೆ ಸಂದ ಜಯವಾಗಿದೆ.ಈ ಆದೇಶ ಹೊರಡಿಸಿರುವ ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಹಾಗೂ ಅಧಿಕಾರಿ ವರ್ಗದವರಿಗೆ ಸಂಘದ ವತಿಯಿಂದ ಧನ್ಯವಾದಗಳು ಎಂದು ಅಖಿಲ ಭಾರತ ಆರೋಗ್ಯ ಇಲಾಖೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಿಗೆ ವಿಶ್ವಾರಾಧ್ಯ ಯಮೋಜಿ ಧನ್ಯವಾದ ತಿಳಿಸಿದರು.

ಆದರೆ ಈ 15% ವೇತನ ಹೆಚ್ಚಳ ಆದೇಶದಲ್ಲಿ ಕೆಲವು ಷರತ್ತುಗಳನ್ನು ಹಾಕಲಾಗಿದ್ದು ಆ ಷರತ್ತುಗಳಿಂದ ಸಾವಿರಾರು ನೌಕರರಿಗೆ ತೊಂದರೆಯಾಗಿದ್ದು ಕೂಡಲೇ ಸರ್ಕಾರವೂ ಈ ಷರತ್ತುಗಳನ್ನು ಹಿಂಪಡೆದು ಈ 15% ವೇತನ ಹೆಚ್ಚಳ ಎಲ್ಲಾ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಷರತ್ತು ರಹಿತವಾಗಿ ಎಲ್ಲರಿಗೂ ಅನ್ವಯವಾಗುವಂತೆ ಮತ್ತು ವರದಿ ಸಲ್ಲಿಸಿದ ದಿನದಿಂದ ಅಥವಾ 1.4.2021 ರಿಂದ ಅನ್ವಯ ಆಗುವಂತೆ ವೇತನ ಹೆಚ್ಚಳದ ಬಾಕಿಯೊಂದಿಗೆ (With Arrears) ಜಾರಿಗೊಳಿಸಬೇಕು. ಈ ವೇತನ ಹೆಚ್ಚಳದಲ್ಲಿ ಹೊರಗುತ್ತಿಗೆ ಸಹಿತ ಕೆಲ ನೌಕರರಿಗೆ ಅನ್ವಯ ಆಗದೇ ಇದ್ದು, ಇದನ್ನು ಗಮನಿಸಿದ ಸಂಘವು ಮುಖ್ಯಮಂತ್ರಿಗಳಿಗೆ, ಆರೋಗ್ಯ ಸಚಿವರಿಗೆ ಪತ್ರದ ಮುಖೇನ ಗಮನ ಸೆಳೆದಿದ್ದು 15% ವೇತನ ಹೆಚ್ಚಳವನ್ನು ಎಲ್ಲರಿಗೂ ಅನ್ವಯ ಮಾಡುವಂತೆ ಹಾಗೂ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ, 60 ವರ್ಷಗಳವರೆಗೆ ಸೇವಾ ಭದ್ರತೆ, ವಿಮೆ ಮತ್ತು ಕೃಪಾಂಕ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಬಗ್ಗೆ ಆದೇಶ ನೀಡಲು ಸಂಘದ (KSHCOEA) ನೂತನ ರಾಜ್ಯಾಧ್ಯಕ್ಷರಾದ ಶ್ರೀಕಾಂತ್ ಸ್ವಾಮೀ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಗವಿಸಿದ್ದಪ್ಪ ಉಪ್ಪಾರರವರು ಆಗ್ರಹಿಸಿದ್ದಾರೆ.

About The Author