ಗಂಭೀರ ಪ್ರಕರಣಗಳನ್ನೆ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದೆ: ಚೆನ್ನಪ್ಪ ಆನೆಗುಂದಿ ಆರೋಪ

ಶಹಾಪುರ;ಸಾರ್ವಜನಿಕರ ರಕ್ಷಣೆ ಹಾಗೂ ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದೇ ಪೊಲೀಸರ ಕರ್ತವ್ಯವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಸಿಬ್ಬಂದಿಗಳೇ ಕರ್ತವ್ಯ ಲೋಪವೆಸಗುತ್ತಿದ್ದು ರಾಜಕೀಯ ನಾಯಕರಿಗೆ ಮಣಿದು ತಾಲೂಕಿನ ಗಂಭೀರ ಪ್ರಕರಣಗಳನ್ನೆ ಮುಚ್ಚಿ ಹಾಕುವ ಹುನ್ನಾರ ನಡೆಯುತ್ತಿದ್ದು ಇದನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘಟನೆಯಿAದ ಜಿಲ್ಲಾ ಪೊಲೀಸ್ ಕಾರ್ಯಲಯದ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾ ರೈತ ಮುಖಂಡರಾದ ಚೆನ್ನಪ್ಪ ಆನೆಗುಂದಿ ಮಾತನಾಡಿ ಏಪ್ರೀಲ್ ೧೨ ರಂದು ಸಗರ ಗ್ರಾಮದ ಸೋಪಣ್ಣ ತಂದೆ ಮಲ್ಲಪ್ಪ ಹಿಂದಿನಮನೆ ಮಲ್ಹಾರ್ ಗ್ರಾಮದಿಂದ ಮರಳಿ ಸಗರ ಗ್ರಾಮಕ್ಕೆ ಹೋರಟ್ಟಿದ್ದ ವೇಳೆ ಮನಗನಾಳ ಗ್ರಾಮದ ಕೆ.ಬಿ.ಎನ್ ಕಾಟನ್ ಮಿಲ್‌ಬಳಿ ಉಳ್ಳೆಸುಗೂರ ಗ್ರಾಮದ ದೇವಿಂದ್ರಪ್ಪ ಬಸವರಾಜಪ್ಪ ಬದ್ದೆಳ್ಳಿ ಯವರ ಟ್ರಾಕ್ಟರ್ ಹತ್ತಿ ಮಾರಾಟ ಮಾಡಿ ನಾಯ್ಕಲ್ ಮಾರ್ಗವಾಗಿ ಬರುತ್ತಿರುವಾಗ ವೇಗದಲ್ಲಿದ್ದ ಟ್ರಾಕ್ಟರ್ ಬಂದು ಬೈಕ್‌ಗೆ ಡಿಕ್ಕಿ ಹೊಡೆದು ಸೋಪಣ್ಣ ಹಿಂದಿನಮನಿ ಸ್ಥಳದಲ್ಲೇ ತೀವ್ರ ರಕ್ತಸ್ರಾವದಿಂದ ನರಳಿ ಸಾವನ್ನಪ್ಪಿದ್ದ.

ಪುತ್ರರಾದ ಮಹೇಶ ಮತ್ತು ಹಣಮಂತ ಇಬ್ಬರು ಮಕ್ಕಳು ಸಹ ಗಂಭೀರ ಗಾಯಗೊಂಡಿದ್ದು, ಕಲ್ಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿ ಕೊಂಡಿದ್ದಾರೆ.ವಡಗೇರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಡಗೇರ ಠಾಣೆಯ ಪಿಎಸ್‌ಐ ಮತ್ತು ಯಾದಗಿರಿ ಸರ್ಕಲ್ ಇನ್ಸಪೇಕ್ಟರ್ ಕಾಟಾಚಾರಕ್ಕೆ ಟ್ರಾö್ಯಕ್ಟರ್ ಮೇಲೆ ಪ್ರಕರಣ ದಾಖಲಿಸಿ ವಾಹನವನ್ನು ಬಿಡುಗಡೆ ಮಾಡಿದ್ದಾರೆ. ಟ್ರಾö್ಯಕ್ಟರ್ ಮಾಲೀಕನ ಕುಟುಂಬದಲ್ಲಿ ಓರ್ವ ಪೊಲೀಸ್ ಸಿಬ್ಬಂದಿಯಿದ್ದು,ಕಾಣದ ಕೈಗಳು ಕೆಲಸ ಮಾಡುತ್ತಿದ್ದು ಪ್ರಕರಣವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸೂಕ್ತ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡಬೇಕು. ಸಾರಿಗೆ ಇಲಾಖೆಯವರು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲವಾಗಿದ್ದು ಟ್ರಾö್ಯಕ್ಟರ್‌ಗೆ ನಂಬರ್ ಪ್ಲೇಟ್ ಇಲ್ಲದಿದ್ದರು ಈಗಾಗಲೇ ವಾಹನವನ್ನು ಬಿಡುಗಡೆ ಮಾಡಿದ್ದು ಅನುಮಾನಕ್ಕಿಡಾಗಿದೆ. ಇದರಲ್ಲಿ ಭ್ರಷ್ಟಚಾರ ನಡೆದಿದ್ದು ತನಿಖೆಯಾಗಬೇಕು. ಕೆಲ ವಾಹನಗಳಿಗೆ ನಂಬರ್ ಇಲ್ಲದೆ ಇರುವುದಿಲ್ಲಾ ಆದರೂ ಕೇವಲ ದಂಡ ವಿಧಿಸುತ್ತಿದ್ದಾರೆ.

 

ಸಾರಿಗೆ ಇಲಾಖೆ ಅಧಿಕಾರಿಗಳು ಅದರಿಂದ ಹೊರಬಂದು ಅಪಘಾತಗಳನ್ನು ತಪ್ಪಿಸುವ ಕೆಲಸ ಮಾಡಬೇಕು. ಇನ್ನೂ ಕೆಲವು ವಾಹನಗಳಿಗೆ ಇನ್ಸುರೇನ್ಸ ಸಹ ಇರಲ್ಲಾ. ಇದರಿಂದ ಸಂಚು ರೂಪಿಸಿ ಅಪಘಾತ ಮಾಡಿದರು ತಿಳಿಯುದಿಲ್ಲಾ. ಇದರಿಂದ ಅಪಘಾತಗಳಲ್ಲಿ ಸಾವನ್ನಪ್ಪಿದರೆ ಇದಕ್ಕೆ ಸಾರಿಗೆ ಇಲಾಖೆ ಅಧಿಕಾರಿಗಳೆ ನೇರ ಹೊಣೆಯಾಗಲಿದ್ದಾರೆ. ವಿಭೂತಿಹಳ್ಳಿ ಗ್ರಾಮದ ಮಲ್ಲಣ್ಣ ಬಿರೆದಾರ ಕುಟುಂಬದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಹಲ್ಲೆ ಮಾಡಿದ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಬೇಕು. ತಾಲೂಕಿನ ರೈತರ ಪಂಪ್‌ಸೇಟ್, ಸೋಲಾರ್, ಸೈಕಲ್ ಮೋಟರ್ ಕಳ್ಳತನ ವಾಗುತ್ತಿದ್ದು ಆರೋಪಿಗಳನ್ನು ಬಂಧಿಸಬೇಕು. ತಾಲೂಕಿನ ಸೈದಾಪೂರ ಗ್ರಾಮದ ಬಸವರಾಜ ಪೂಜಾರಿ ಭಾನುಮತಿ ಮಾಡಿಸುವುದು , ಮಹಿಳೆಯರನ್ನು ವಂಚಿಸುವುದು ಮತ್ತು ವೇಶ್ಯಾವಾಟಿಕೆ ನಡೆಸುತ್ತಿದ್ದು ಕೂಡಲೇ ಬಂಧಿಸಬೇಕು. ಜಿಲ್ಲೇಯಾದ್ಯಂತ ಮೀಟರ್ ಬಡ್ಡಿ ಮಟ್ಕಾ, ಜೂಜಾಟ ದಿಂದ ಜನತೆ ಜೀವನ ಕಳೆದು ಕೊಳ್ಳುತ್ತಿದ್ದಾರೆ ಕೂಡಲೇ ಸಹಾಯವಾಣಿ ಒದಗಿಸಿ ಅಪರಾಧ ತಡೆಗಟ್ಟಬೇಕು ಎಂದು ಒತ್ತಾಯಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿ.ಬಿ ವೇದಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಿ.ಐ.ಟಿ.ಯು ಸಂಚಾಲಕ ಜೈಲಾಲ್ ತೋಟದಮನಿ, ಶರಣಪ್ಪ ಜಾಕನಳ್ಳಿ, ಮಾರ್ಥಂಡಪ್ಪ ಹಿಂದಿನಮನಿ, ಈರಣ್ಣ ಹಿಂದಿನಮನಿ, ಮಡಿವಾಳಪ್ಪ ದೇಸಟ್ಟಿ, ಗುರುರಾಜ ಬೈಚಬಾಳ, ಮಲ್ಲಿಕಾರ್ಜುನ್ ಪಾಟೀಲ್, ಸೇರಿದಂತೆ ಮೃತ ಸೋಪಣ್ಣನ ಕುಟುಂಬಸ್ಥರು ಇದ್ದರು.

ನಿತ್ಯ ರೈತರ ಪಂಪ್‌ಸೆಟ್‌ಗಳು ಕಳ್ಳತನವಾಗುತ್ತಿವೆ ಆದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇದ್ದು ಅನುಮಾನಕ್ಕಿಡು ಮಾಡಿದೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲ್‌ಸಾಬ್ ನದಾಫ್ ಗಂಭೀರವಾಗಿ ಆರೋಪಿಸಿದರು.

About The Author