ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ನದಾಫ್ ಆಗ್ರಹ

ಶಹಾಪುರ; ವಡಗೇರ ತಾಲೂಕಿನ ಮನಗನಾಳ ಗ್ರಾಮದ ಟ್ರಾö್ಯಕ್ಟರ್ ಬೈಕ್ ಅಪಘಾತದಲ್ಲಿ ಸಗರ ಗ್ರಾಮದ ಸೋಪಣ್ಣ ತಂದೆ ಮಲ್ಲಪ್ಪ ಹಿಂದಿನಮನಿ ಸಾವನ್ನಪ್ಪಿದ್ದ.ಉಳ್ಳೆಸುಗೂರ ಗ್ರಾಮದ ದೇವಿಂದ್ರಪ್ಪ ಟ್ರಾö್ಯಕ್ಟರ್ ಮಾಲೀಕನಾಗಿದ್ದು ಇದರಲ್ಲಿ ವಡಗೇರ ತಹಸೀಲ್ದಾರ್ ಮತ್ತು ಉಳ್ಳೆಸೂಗೂರ ಗ್ರಾಮ ಲೆಕ್ಕಾಧಿಕಾರಿ ಗೋಲ್ಲಾಳೆಪ್ಪ ಟ್ರಾö್ಯಕ್ಟರ್ ಮಾಲೀಕನ ಆಸ್ತಿ ವಿವರಗಳನ್ನು ಕೊಡದೇ ಸರ್ವೇ ನಂಬರ್ ಕೊಡದೇ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸಿದ್ದಾರೆ ಇಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ವತಿಯಿಂದ ಜಿಲ್ಲಾಧಿಕಾರಿಗಳ ಕಾರ್ಯಲಯದ ಎದುರು ಪ್ರತಿಭಟನೆ ನಡೆಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದಾವಲ್‌ಸಾಬ್ ನದಾಫ್ ಮಾತನಾಡಿ ಪ್ರಕರಣದ ಕುರಿತು ತಹಸೀಲ್ದಾರ್ ಅವರಿಗೆ ಮುಖಾಮುಖಿ ಬೇಟಿ ಮಾಡಿ ಮನವಿ ಮಾಡಿ ಕೊಂಡರು ಸಹ ಸುಳ್ಳು ಮಾಹಿತಿ ನೀಡಿದ್ದಾರೆ. ಇದರ ಹಿಂದೆ ಕಾಣದ ಕೈಗಳಿದ್ದು ಟ್ರಾö್ಯಕ್ಟರ್ ಮಾಲೀಕ ದೇವಿಂದ್ರಪ್ಪಗೆ ಪುಷ್ಟಿ ನೀಡುತ್ತಿದ್ದಾರೆ. ಇದಕ್ಕೆ ಮಣಿದ ಅಧಿಕಾರಿಗಳು ಸಹ ಸೂಕ್ತ ಕ್ರಮ ಕೈಗೊಳ್ಳದೇ ಕಾಟಚಾರಕ್ಕೆ ವಿಚಾರಣೆ ನಡೆಸಿದ್ದಾರೆ. ಈಗಾಗಲೇ ಟ್ರಾö್ಯಕ್ಟರ್‌ನ್ನು ಬಿಡುಡೆಗೊಳಿಸಿದ್ದು ಸೂಕ್ತ ತನಿಖೆ ನಡೆಸಬೇಕು. ಟ್ರಾö್ಯಕ್ಟರ್ ಮಾಲೀಕನ ಆಸ್ತಿ ಮುಟ್ಟುಗೊಲು ಹಾಕಿ ಮೃತಪಟ್ಟ ಸೋಪಣ್ಣನ ಕುಟುಂಬಕ್ಕೆ ೨೫ ಲಕ್ಷ ರೂ ಪರಿಹಾರ ನೀಡಿ ಮಕ್ಕಳ ಆಸ್ಪತ್ರೆಯ ಖರ್ಚನ್ನು ಭರಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ರೈತ ಮುಖಂಡರಾದ ಚೆನ್ನಪ್ಪ ಆನೆಗುಂದಿ, ಜೈಲಾಲ್ ತೋಟದಮನಿ, ಗುರುರಾಜ ಸಗರ, ಸೋಪಣ್ಣ ಸಗರ, ಭೀಮಣ್ಣ, ಸೋಪಣ್ಣ ನಾಯ್ಕೊಡಿ, ಈರಣ್ಣ ಸಗರ, ದೇವಿಂದ್ರಪ್ಪ ಹತ್ತಿಕುಣಿ, ದೇವಿಂದ್ರಪ್ಪ ಗೌಡಗೇರಿ ಸೇರಿದಂತೆ ಇತರರು ಇದ್ದರು.