ಬೆಳಗಾವಿ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಾಳಿಂಗರಾಯ ಮಂಡಗಳ್ಳಿ ಮನವಿ

yadagiri ಶಹಾಪುರ: ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಅಕ್ಟೋಬರ್ 2 ಮತ್ತು 3 ರಂದು ಶೆಫರ್ಡ ಇಂಡಿಯಾ ಅಂತರಾಷ್ಟ್ರೀಯ ಸಮಾವೇಶದಲ್ಲಿ ಶಹಪುರ ತಾಲೂಕಿನಿಂದ ಅತಿ ಹೆಚ್ಚು ಜನರು ಪಾಲ್ಗೊಳ್ಳುವಂತೆ ಕನಕ ಗುತ್ತಿಗೆದಾರರ ಸಂಘದ ತಾಲೂಕು ಅಧ್ಯಕ್ಷರಾದ ಮಾಳಿಂಗರಾಯ ಮಂಡಗಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ದೇಶಾದ್ಯಂತ ಸಮಾಜವನ್ನು ಒಟ್ಟುಗೂಡಿಸಿದ ಹೆಚ್ ವಿಶ್ವನಾಥ ಮತ್ತು ಎಚ್ಎಮ್ ರೇವಣ್ಣನವರ ಶ್ರಮ ಹೆಚ್ಚಿದೆ. ದೇಶದಲ್ಲಿ 12 ಕೋಟಿ ಜನಸಂಖ್ಯೆ ಇರುವ ಕುರುಬರು ದೇಶದ ವಿದೇಶದ ಎಲ್ಲಾ ಕುರುಬರನ್ನು ಒಗ್ಗೂಡಿಸಲು ಈ ಸಂಸ್ಥೆ ಸ್ಥಾಪನೆಯಾಗಿದ್ದು, ಇಂದು 9ನೇ ರಾಷ್ಟ್ರೀಯ ಸಮಾವೇಶ ಬೆಳಗಾವಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ.ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕನಕ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಶರಣಬಸವ ಸೈದಾಪುರ,ಯಮುನಪ್ಪ ಅಗಸ್ಥಿಹಾಳ, ಯಲ್ಲಪ್ಪ ನರಿ, ಶಿವರೆಡ್ಡಿ ಹುಲ್ಕಲ್, ಪರ್ವತ ರೆಡ್ಡಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *