ಐಕೂರು ಗ್ರಾಮಪಂಚಾಯತಿಯ ಸಾಮಾನ್ಯ ಸಭೆ 15ನೇ ಹಣಕಾಸಿನ ಕ್ರೀಯಾ ಯೋಜನೆ ಶುದ್ಧ ಕುಡಿಯುವ ನೀರು, ಸ್ವಚ್ಛತಾ ಅಭಿಯಾನಕ್ಕೆ ಆದ್ಯತೆ : ಮಲ್ಲಿಕಾರ್ಜುನ್ ಸಜ್ಜನ್

yadagiri ವಡಗೇರಾ : ತಾಲೂಕಿನ ಐಕೂರು ಗ್ರಾಮ ಪಂಚಾಯಿತಿಯ ಸಭಾಂಗಣದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಇಂದು ಸಾಮಾನ್ಯ ಸಭೆ ಜರುಗಿತು. 2023-24ನೇ ಸಾಲಿನ 15ನೇ ಹಣಕಾಸು ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗ ಮಲ್ಲಿಕಾರ್ಜುನ ಸಜ್ಜನ್ ತಿಳಿಸಿದರು. ಈ ಆರ್ಥಿಕ ವರ್ಷದಲ್ಲಿ 36,77,139 ರೂ. ಅನುದಾನ ಮೀಸಲಾಗಿದ್ದು ನಾಲ್ಕು ಹಂತಗಳಲ್ಲಿ ಅನುದಾನ ಬಿಡುಗಡೆಗೊಳ್ಳಲಿದೆ ಎಂದರು. ಶುದ್ಧ ಕುಡಿಯುವ ನೀರು, ಸ್ವಚ್ಛತಾ ಅಭಿಯಾನಕ್ಕೆ ಮೊದಲ ಆದ್ಯತೆ ನೀಡಿ ಕ್ರಿಯಾಯೋಜನೆಯನ್ನು ರೂಪಿಸಲಾಗುವುದು. ಐಕೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಐಕೂರು ಹಂಚಿನಾಳ ಬಸವಂತಪುರ ಮುನ್ಮುಟಗಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಶುದ್ಧೀಕರಣ ಮತ್ತು ಪ್ರತಿ ಗ್ರಾಮಗಳಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದರು. ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮೀಣದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಿದೆ. ಗ್ರಾಮಗಳಲ್ಲಿನ ಜನರ ಸಹಕಾರದಿಂದ ಗ್ರಾಮೀಣ ಪ್ರದೇಶದಲ್ಲಿ ಗ್ರಾಮಗಳನ್ನು ಸ್ವಚ್ಛವಾಗಿಡಲು ಗ್ರಾಮ  ಪಂಚಾಯಿತಿಯ ಸದಸ್ಯರು ಗ್ರಾಮದ ಜನರು ಸಹಕರಿಸಬೇಕು ಎಂದು ತಿಳಿಸಿದರು.

ಐಕೂರು ಗ್ರಾಮ ಪಂಚಾಯಿತಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಐಕೂರು ಗ್ರಾಮದಲ್ಲಿ ನಿವೇಶನವನ್ನು ವೀಕ್ಷಿಸಲಾಯಿತು. ಸ್ವಂತ ಕಟ್ಟಡ ನಿರ್ಮಿಸಲು 20 ಲಕ್ಷ ಅನುದಾನವನ್ನು ನಿಗದಿಪಡಿಸುವ ಬಗ್ಗೆ ಚರ್ಚಿಸಲಾಯಿತು.ಹಂಚಿನಾಳ ಗ್ರಾಮದಲ್ಲಿನ ನಿರ್ಮಾಣ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ಪೂರ್ಣಗೊಳಿಸಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕಿಸುವ ರಸ್ತೆ ನಿರ್ಮಾಣ ಕಾರ್ಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ದೇವಕಿ ಗಂಡ ನಿಂಗಪ್ಪ, ಉಪಾಧ್ಯಕ್ಷರಾದ ಮಲ್ಲಮ್ಮ ಹನುಮಂತ, ಸದಸ್ಯರಾದ ಮರೇಪ್ಪ ನಸಲಾಯಿ ಜ್ಯೋತಿ ಬಸವಂತಪುರ ಭೀಮಪ್ಪ ಹಚ್ಚಿಕೇರಿ ಚಂದ್ರಮ ಉಳ್ಳ ಉಳ್ಳೆಸೂಗೂರು,ರೇಣುಕಮ್ಮ ನಿಂಗಪ್ಪ, ನಿಂಗಮ್ಮ ಬಸವರಾಜ, ಯಂಕಪ್ಪ ಠಾಣಗುಂದಿ, ಸಂಗನಗೌಡ ಮಾಲಿಪಾಟೀಲ್, ತಿಪ್ಪನಗೌಡ ಮುನ್ಮುಟಗಿ, ರೇಣುಕಮ್ಮ ಭೀಮ್ಶೆಪ್ಪ, ಅಮೋಘೇಶ್ವರ  ಸೇರಿದಂತೆ ಪಂಚಾಯಿತಿ ಸಿಬ್ಬಂದಿಯವರಾದ ಶ್ರೀನಿವಾಸ ಕುಲಕರ್ಣಿ, ನಿಂಗಪ್ಪ ಹಯ್ಯಳ ಸೇರಿದಂತೆ ಇತರರು ಇದ್ದರು.

About The Author