ಕರ್ತವ್ಯದಲ್ಲಿ ನಂದಾದೀಪ ಬೆಳಗಿದ ಅಂಗನವಾಡಿ ಮೇಲ್ವಿಚಾರಕಿ ನಂದಾ ಅವರ ಸೇವೆ ಅವಿಸ್ಮರಣೀಯ

ಶಹಾಪುರ: ನಂದಾ ಹೆಸರಿಗೆ ತಕ್ಕಂತೆ ಇವರು ಶಾಂತಸ್ವಭಾವ, ಕ್ರಿಯಾಶೀಲತೆ ಹಾಗೂ ಚಟುವಟಿಕೆಯಿಂದ ಕೂಡಿದ್ದು ಇವರು ಕಛೇರಿಯ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಿದ್ದು, ಸಹಬಾಳ್ವೆ, ಸಹಕಾರ, ಸದಾಚಾರ, ಮೌಲ್ಯಗಳಿಂದ ಕೂಡಿದ ವ್ಯಕ್ತಿತ್ವ ಇವರದು ಎಂದು ಗೋಗಿಯ ಪಾಂಡುರಂಗ ಮಠದ ವಿಜಯಕುಮಾರ ಸ್ವಾಮೀಜಿ ಹೇಳಿದರು.

ತಾಲೂಕಿನ ಭೀಮರಾಯನಗುಡಿಯ ಶ್ರೀ ಸಿದ್ಧಾರೂಢ ಮಠದ ಪ್ರಸಾದ ನಿಲಯದಲ್ಲಿ ಶಹಾಪುರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ ಸುಮಾರು ಹತ್ತು ವರ್ಷ ಸೇವೆ ಸಲ್ಲಿಸಿ ಬಿಜಾಪುರ ಜಿಲ್ಲೆ ಇಚಿಡಿ ತಾಲೂಕಿಗೆ ವರ್ಗಾವಣೆಯಾದ ಅಂಗನವಾಡಿ ಮೇಲ್ವಿಚಾರಕಿ ನಂದಾಅವರ ವರ್ಗಾವಣೆ ನಿಮಿತ್ಯ ಆಯೋಜಿಸಿರುವ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಅಂಗನವಾಡಿ ಕಾರ್ಯಕರ್ತೆಯರು ಕಣ್ಣೀರು ಧಾರೆಯ ಮೂಲಕ ಬೀಳ್ಕೊಟ್ಟರು.ಇದೇ ಸಂದರ್ಭದಲ್ಲಿ ನಾಗರಿಕರು ವೈಯಕ್ತಿಕವಾಗಿ ಅವರನ್ನು ಸನ್ಮಾನಿಸಿದರು.

ಶಿಶು ಅಭಿವೃದ್ಧಿಯೋಜನಾಧಿಕಾರಿ ಮೀನಾಕ್ಷಿ ಪಾಟೀಲ್ ಸಾರ್ವಜನಿಕರೊಂದಿಗೆ ಬೆರೆತು ಅವರ ಕೆಲಸ ಕಾರ್ಯಗಳನ್ನು ಸಕಾಲಕ್ಕೆ ಮಾಡಿಕೊಟ್ಟಲ್ಲಿ ಮನಸ್ಸಿಗೆ ತೃಪ್ತಿತರುತ್ತದೆ.ಮೇಲ್ವಿಚಾರಕಿ ನಂದಾ ಅವರು ತಮ್ಮ ಸೇವಾವಧಿಯಲ್ಲಿ ನಿಷ್ಠೆ ಹಾಗೂ ಪ್ರಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ. ತಮ್ಮ ಪಾಲಿನ ಕೆಲಸವನ್ನು ಅಂದೆ ಮಾಡಿ ಮುಗಿಸುತ್ತಿದ್ದರು.ಅಂಗನವಾಡಿ ಕಾರ್ಯಕರ್ತರಿಗೆಉತ್ತಮ ಮಾರ್ಗದರ್ಶನ ನೀಡಿ, ಇಲಾಖೆ ಕೆಲಸ ಅಚ್ಚುಕಟ್ಟಾಗಿ ಮಾಡುವಂತೆ ಪ್ರೇರೇಪಿಸುತ್ತಿದ್ದರು.ಪ್ರೀತಿ ವಿಶ್ವಾಸದಿಂದ ಎಲ್ಲಾ ಅಂಗನವಾಡಿ ಕಾರ್ಯಕರ್ತರ ಮನ ಗೆದ್ದಿದ್ದರು.ಅವರು ಇಲ್ಲಿಂದ ವರ್ಗಾವಣೆಯಾಗಿ ಹೋದ ಸ್ಥಳದಲ್ಲಿಯೂ ಉತ್ತಮವಾಗಿ ಸೇವೆ ಸಲ್ಲಿಸುವ ಮೂಲಕ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಪ್ರಗತಿ ಸಾಧಿಸಲಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೇ ಬಸಲಿಂಗಮ್ಮ ನಾಟೇಕಾರಅವರು ಮೇಲ್ವಿಚಾರಕಿ ನಂದಾ ಅವರು ತಾಯಿ ಆಗಿ, ಸಹೋದರಿ ಆಗಿ ಕಾರ್ಯ ನಿರ್ವಹಿಸಿದ್ದಾರೆ.ಉತ್ತಮ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರ ಕಾರ್ಯಚಟುವಟಿಕೆ ನಾವೆಲ್ಲ ಅಳವಡಿಸಿಕೊಳ್ಳೊಣ ಎಂದರು.

ಮೇಲ್ವಿಚಾರಕಿ ನಂದಾ ಸರ್ಕಾರಿ ಕೆಲಸದಲ್ಲಿ ಇಂದಿನ ಕೆಲಸ ಇಂದೇ ಮಾಡಬೇಕು.ನಾಳೆಯ ಕೆಲಸವೂ ಇಂದೇ ಮಾಡಬೇಕು ಎಂಬ ಮನೋಭಾವವನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆ ಸಹೋದರಿಯರು ಹೊಂದಬೇಕು.ಇಲ್ಲಿ ನಾನು ಸೇವೆ ಸಲ್ಲಿಸುವಾಗ ನನಗೆ ಎಲ್ಲರೂ ಪ್ರೀತಿ ವಿಶ್ವಾಸ, ಸಹಕಾರ, ಮಾರ್ಗದರ್ಶನ ನೀಡಿದ ಎಲ್ಲಾ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿಯರಿಗೂ, ಸಹಪಾಠಿಗಳಿಗೂ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ, ಯೋಗಗುರು ಅಮರೇಶ್ ದಿಗ್ಗಿ, ಸಿಐಟಿಯು ತಾಲೂಕ ಸಂಚಾಲಕ ಮಲ್ಲಯ್ಯ ಪೋಲಪಲ್ಲಿ, ಡಾ. ವೆಂಕಟೇಶ್, ಆರೋಗ್ಯ ಹಿರಿಯ ಸಹಾಯಕ ಅಧಿಕಾರಿ ಮಲ್ಲಪ್ಪ ಕಾಂಬಳೆ, ಎಲ್.ಐ.ಸಿ ಏಜೆಂಟ್‍ರಾದ ಶರಣಪ್ಪ ಹೊಸಮನಿ, ಅಮರೇಶ್ ಪ್ಯಾಟಿ, ಮುಖ್ಯಗುರು ಲಕ್ಕಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮಿ ಗೋಗಿ, ಅನಸೂಯ ಮದ್ರಿಕಿ, ಮಡಿವಾಳಮ್ಮ ಹೂಗಾರ್, ಯಮನಮ್ಮ ದೋರನಹಳ್ಳಿ, ಕವಿತಾ ಶೋಭಾ ಶಶಿಕಲಾ ಅವ್ವಮ್ಮ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು. ರೇಣುಕಾ ಗೋಗಿ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಅವರು ಸ್ವಾಗತಿಸಿ ವಂದನಾರ್ಪಣೆ ಮಾಡಿದರು.

About The Author