ದೇವರಾಜ ಅರಸು ಪ್ರಶಸ್ತಿ ಸ್ವೀಕರಿಸಿದ ಬಿ ಎಂ ಪಾಟೀಲ್

ರಾಯಚೂರು : ಡಿ.ದೇವರಾಜ್ ಅರಸು ಹಿಂದುಳಿದ ವರ್ಗಗಳ ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘ ಕೊಡ ಮಾಡುವ ರಾಜ್ಯ ಡಿ ದೇವರಾಜ್ ಅರಸು ಪ್ರಶಸ್ತಿಯನ್ನು ಹಿಂದುಳಿದ ವರ್ಗದ ನಾಯಕ ಕೆಪಿಸಿಸಿ ರಾಜ್ಯ ವಕ್ತಾರರು, ರಾಜ್ಯ ಸಂಯೋಜಕರು, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಜ್ಯಾಧ್ಯಕ್ಷರಾದ ಬಿಎಮ್ ಪಾಟೀಲ್ ರವರಿಗೆ ಇಂದು ರಾಯಚೂರು ನಗರದ ವೀರಶೈವ ಕಲ್ಯಾಣ ಮಂಟಪದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪತ್ರ ಮತ್ತು ಅರಸು ಸ್ಮಾರಕವನ್ನು ವಿತರಣೆ ಮಾಡಲಾಯಿತು.
 ಈ ಸಂದರ್ಭದಲ್ಲಿ ಬಿಎಮ್ ಪಾಟೀಲರು ಮಾತನಾಡಿ ರಾಜ್ಯದಲ್ಲಿ ಈ ರೀತಿಯ ಪ್ರಶಸ್ತಿ ನನಗೆ ದೊರಕಿರುವುದು ಸಂತಸದ ವಿಚಾರವಾಗಿದೆ. ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವ ಜವಾಬ್ದಾರಿ ಇನ್ನು ನನಗೆ ಹೆಚ್ಚಾಗಿದೆ. ಅದಕ್ಕಾಗಿ ರಾಜ್ಯಾದ್ಯಂತ ಹಿಂದುಳಿದ ವರ್ಗದವರನ್ನು ಒಗ್ಗೂಡಿಸುವಿಕೆಗಾಗಿ ಶ್ರಮಿಸುತ್ತೇನೆ. ಪ್ರಶಸ್ತಿ ಕೊಡಮಾಡಿದ ಸಂಯೋಜಕರಿಗೆ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜ್ಯ ಕುರುಬರ ಸಂಘದ ಸಂಘಟನಾ ಕಾರ್ಯದರ್ಶಿಯಾದ ಮಂಜುನಾಥ, ರಾಯಚೂರು, ಕಲ್ಯಾಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಕರೇಗಾರ, ಯುವ ಕುರುಬರ ಸಂಘದ ನಗರ ಘಟಕದ ಅಧ್ಯಕ್ಷರಾದ ರಮೇಶ್ ಮೂಡಲದಿನ್ನಿ, ಪ್ರಧಾನ ಕಾರ್ಯದರ್ಶಿಗಳಾದ ನರಸಪ್ಪ ಶಾಸ್ತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಬಳ್ಳಾರಿ ಜಿಲ್ಲಾಧ್ಯಕ್ಷ ಬಂಡಿಹಟ್ಟಿ ಕೆ. ರಾಮಲಿಂಗ, ಪ್ರಧಾನಕಾರ್ಯದರ್ಶಿ ನರಸಣ್ಣ ಶಾಸ್ತ್ರೀ, ಸಂಚಾಲಕರು ಗೌಡ್ರು, ತಿಮಪ್ಪ, ಶಿರವಾರ ತಾಲ್ಲೂಕು ಅಧ್ಯಕ್ಷ ಮಾಳಿಂಗರಾಯ, ಲಿಂಗರಾಜ್, ಶರಣಪ್ಪ, ರಾಯಚೂರು ನಗರ ಅಧ್ಯಕ್ಷ ಶ್ರೀನಿವಾಸ್, ಹನುಮಂತಪ್ಪ ವಕೀಲರು, ಬಸವರಾಜ್, ಶರತ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author